ಕಳೆದ ೮ ದಶಕಗಳಲ್ಲಿ ಸ್ಪೇನ್ ನ ಚರ್ಚ್ ನಲ್ಲಿ 4 ಲಕ್ಷ ಹುಡುಗಿಯರ ಲೈಂಗಿಕ ಶೋಷಣೆ !

ಮ್ಯಾಡ್ರಿಡ್ (ಸ್ಪೇನ್) – ಸ್ಪೇನ್ ನಲ್ಲಿ ೧೯೪೦ ರಿಂದ ಇಲ್ಲಿಯವರೆಗೆ ರೋಮನ್ ಕ್ಯಾಥೋಲಿಕ್ ಚರ್ಚನಲ್ಲಿ 4 ಲಕ್ಷಕ್ಕಿಂತ ಅಧಿಕ ಅಪ್ರಾಪ್ತ ಮತ್ತು ಯುವತಿಯರು ಪಾದ್ರಿಗಳಿಂದ ನಡೆದಿರುವ ಲೈಂಗಿಕ ಶೋಷಣೆಗೆ ಬಲಿಯಾಗಿದ್ದಾರೆ ಎನ್ನುವ ಮಾಹಿತಿ ಒಂದು ವರದಿಯಿಂದ ಬಹಿರಂಗವಾಗಿದೆ. ಚರ್ಚನಲ್ಲಿ ಸಾಮಾನ್ಯ ಸದಸ್ಯರಿಂದಲೂ ೪ ಲಕ್ಷ ಹುಡುಗಿಯರು ಲೈಂಗಿಕ ಶೋಷಣೆಗೆ ಬಲಿಯಾಗಿರುವ ಮಾಹಿತಿ ಕೂಡ ಇದರಲ್ಲಿ ನೀಡಲಾಗಿದೆ. ಸ್ಪೇನ್ ನ ರಾಷ್ಟ್ರೀಯ ಲೋಕಪಾಲ ಎಂಜಲ್ ಗ್ಯಾಬಿಲೊಂಡೊ ಇವರು ಈ ವರದಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ವರದಿಯು ಸಂತ್ರಸ್ತರಿಗೆ ಪರಿಹಾರ ನೀಡಲು ರಾಷ್ಟ್ರೀಯ ನಿಧಿ ಸ್ಥಾಪಿಸುವಂತೆ ಕರೆ ನೀಡಲಾಗಿದೆ. ಈ ವರದಿ ಸ್ಪೇನ್ ನ ಸಂಸತ್ತಿನಲ್ಲಿ ಸಲ್ಲಿಸಲಾಗಿದೆ. ಮಾರ್ಚ್ ೨೦೨೨ ರಲ್ಲಿ ಸ್ಪ್ಯಾನಿಶ ಸಂಸತ್ತು ಚರ್ಚನಲ್ಲಿನ ಲೈಂಗಿಕ ಶೋಷಣೆಯ ಆರೋಪಿಗಳ ವಿಚಾರಣೆ ನಡೆಸುವುದಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಿತ್ತು.

೧. ಈ ಶೋಷಣೆಯ ಸಂದರ್ಭದಲ್ಲಿ ಒಂದು ಆಯೋಗವು ೮ ಸಾವಿರ ಜನರಿಂದ ಮಾಹಿತಿ ಪಡೆಯಿತು. ಅದರಲ್ಲಿನ ಶೇಕಡ ೦.೬ ರಷ್ಟು ಜನರು ಅವರ ಚರ್ಚ್ ನಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಸ್ಪೆನ್ ಜನಸಂಖ್ಯೆ ೩ ಕೋಟಿ ೯೦ ಲಕ್ಷವಾಗಿದ್ದು, ಅದರಲ್ಲಿ ಶೇಕಡ ೦.೬ ಎಂದರೆ ಈ ಪ್ರಮಾಣ ೨ ಲಕ್ಷ ಜನರಷ್ಟು ಆಗಿದೆ.

೨. ಬಾಲ್ಯದಲ್ಲಿ ಚರ್ಚಗೆ ಹೋದ ನಂತರ ಪಾದ್ರಿಗಳು ಅವರ ಶೋಷಣೆ ಮಾಡಿರುವುದಾಗಿ ಅನೇಕ ಜನರು ಹೇಳಿದರು. ಪಾದ್ರಿ ಜೊತೆಗೆ ಚರ್ಚಿನ ಇತರ ಸದಸ್ಯರ ಮೇಲೆಯೂ ಆರೋಪಿಸಿದರು. ಈ ಸದಸ್ಯರು ನಡೆಸಿರುವ ಶೋಷಣೆಯೂ ಶೇಕಡ ೧.೧೩ರಷ್ಟು ಅಂದರೆ ೪ ಲಕ್ಷದಷ್ಟು ಆಗಿದೆ.

೩.೨೦೨೦ ರಲ್ಲಿನ ಕೆಲವು ದೂರಗಳ ಆಧಾರದಲ್ಲಿ ಪರಿಶೀಲನೆಯಲ್ಲಿ ಲೈಂಗಿಕ ಶೋಷಣೆಯ ೯೨೭ ಪ್ರಕರಣಗಳು ಬಹಿರಂಗವಾಗಿವೆ. ಲೈಂಗಿಕ ಶೋಷಣೆ ತಡೆಯುವುದಕ್ಕಾಗಿ ಬಿಷಪ್ ನ (ವರಿಷ್ಠ ಪಾದ್ರಿ) ಅಧಿಕಾರದಲ್ಲಿನ ಪ್ರದೇಶದಲ್ಲಿ ಮಕ್ಕಳ ಸಂರಕ್ಷಣಾ ಕಾರ್ಯಾಲಯವನ್ನು ಸ್ಥಾಪಿಸಲಾಗಿದೆಯೆಂದು ಚರ್ಚ ಹೇಳಿದೆ.

೪.೨೦೧೮ ರಲ್ಲಿ ಸ್ಪೆನ್ ನ ಒಂದು ದಿನಪತ್ರಿಕೆ ನಡೆಸಲಾದ ಸಮೀಕ್ಷೆಯಲ್ಲಿ ೧೯೨೭ ರಲ್ಲಿ ಲೈಂಗಿಕ ಶೋಷಣೆಯ ೨ ಸಾವಿರದ ೨೦೬ ಪ್ರಕರಣಗಳನ್ನು ಬಹಿರಂಗ ಪಡಿಸಿದೆ. ಅದರಲ್ಲಿ ೧ ಸಾವಿರದ ೩೬ ಆರೋಪಿಗಳ ಗುರುತು ಪತ್ತೆಯಾಗಿತ್ತು.

ಸಂಪಾದಕೀಯ ನಿಲುವು

`ಚರ್ಚ್ ಎಂದರೆ ಲೈಂಗಿಕ ಶೋಷಣೆಯ ಸ್ಥಳ’ ಮತ್ತು` ಪಾದ್ರಿ ಎಂದರೆ ಕಾಮುಕ ವ್ಯಕ್ತಿ’ ಎನ್ನುವ ಚಿತ್ರಣ ಯಾರದಾದರು ಮನಸ್ಸಿನಲ್ಲಿ ನಿರ್ಮಾಣವಾದರೆ, ಅದರಲ್ಲಿ ತಪ್ಪೇನಿದೆ? ಇಂತಹ ಘಟನೆಗಳ ವಿರುದ್ಧ ಜಗತ್ತಿನಾದ್ಯಂತ ಕ್ರೈಸ್ತರು ಬಹಿರಂಗವಾಗಿ ಏಕೆ ವಿರೋಧಿಸುವುದಿಲ್ಲ ?