ದುಃಖದ ಹಾಡುಗಳನ್ನು ಕೇಳುವುದರಿಂದ ಜನರ ದೈಹಿಕ ನೋವು ಕಡಿಮೆಯಾಗುವ ಸಾಧ್ಯತೆಯಿದೆ!

ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ನಿಷ್ಕರ್ಷ !


ಮಾಂಟ್ರಿಯಲ (ಕೆನಡಾ) – ಸಂತೋಷ ಮತ್ತು ದುಃಖ ಇವೆರಡರ ಕಹಿ ಮತ್ತು ಭಾವನಾತ್ಮಕ ಅನುಭವಗಳ ವಿವರಣೆಯಿರುವ ದುಃಖಮಯ ಹಾಡುಗಳನ್ನು ಕೇಳುವುದರಿಂದ ಜನರ ದೈಹಿಕ ನೋವು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮೆಕ್‌ಗಿಲ್ ವಿಶ್ವವಿದ್ಯಾಲಯವು ತನ್ನ ಸಂಶೋಧನೆಯಿಂದ ತೀರ್ಮಾನಕ್ಕೆ ಬಂದಿದೆ.

1. ಈ ಸಂಶೋಧನೆಯಲ್ಲಿ ಭಾಗವಹಿಸಿರುವ ಜನರಿಗೆ ಅವರ ನೆಚ್ಚಿನ ಹಾಡುಗಳನ್ನು ಕೇಳಿಸಲಾಗಿತ್ತು. ಇದರಿಂದ ಸಂಶೋಧಕರಿಗೆ ದುಃಖದ ಹಾಡುಗಳನ್ನು ಕೇಳುವವರಲ್ಲಿ ವೇದನೆಯ ಅರಿವು ಶೇ. 10 ರಷ್ಟು ಕಡಿಮೆಯಾಗಿರುವುದರ ಅರಿವಾಯಿತು. ಏಕೆಂದರೆ ಮೆದುಳಿನ ಮೂಲಕ ಹಾಡಿನಿಂದ ನಿರ್ಮಾಣವಾಗುವ ಸಂವೇದನೆಗಳು ವೇದನೆಯ ಸಂಕೇತದ ತುಲನೆಯಲ್ಲಿ ಹೆಚ್ಚಿನ ಆದ್ಯತೆ ಪಡೆಯುತ್ತವೆ. ದೇಹವು ವೇದನೆಯ ಅರಿವು ಮಾಡಿಕೊಡುತ್ತದೆ; ಆದರೆ ನಮ್ಮ ಪ್ರಜ್ಞೆಯು ಮನಸ್ಸಿಗೆ ವೇದನೆಯ ಅರಿವು ಮೂಡಿಸುವ ಸಂದೇಶಗಳನ್ನು ರವಾನಿಸುವುದಿಲ್ಲ.

2. ಸಂಗೀತವು ಒತ್ತಡ, ಎದೆಬಡಿತ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಮೆದುಳಿನಲ್ಲಿ ಡೋಪಮೈನ್ ಹಾರ್ಮೋನ್ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಆತಂಕ ಮತ್ತು ಖಿನ್ನತೆಯ ಭಾವನೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಂಗೀತದಿಂದ ಒಳ್ಳೆಯ ನಿದ್ರೆ ಮತ್ತು ಸಹನಶಕ್ತಿಯಲ್ಲಿ ವೃದ್ಧಿಯಾಗುತ್ತದೆ.

ಸಂಪಾದಕೀಯ ನಿಲುವು

ದುಃಖಿತನಿಗೆ ದುಃಖದಿಂದ ಹೊರಬರಲು ಹಾಡು ಕೇಳುವಂತಹ ಮೇಲುಮೆಲಿನ ಉಪಾಯಗಳನ್ನು ಹೇಳುವ ಪಾಶ್ಚಿಮಾತ್ಯರ ಸಂಶೋಧನಗಳು ಎಲ್ಲಿ ಹಾಗೂ ಮನುಷ್ಯನಿಗೆ ಸತ್ ಚಿತ್ ಆನಂದದೆಡೆಗೆ ಮುಂದುವರಿಸಲು ಕಲಿಸುವ ಹಿಂದೂ ಧರ್ಮ ಎಲ್ಲಿ !