ಜಮ್ಮು-ಕಾಶ್ಮೀರ ನಿವಾಸಿಗಳ ಮಾನವ ಹಕ್ಕುಗಳನ್ನು ರಕ್ಷಿಸಿ !(ಅಂತೆ) – ೫೭ ಇಸ್ಲಾಮಿ ದೇಶಗಳ ಸಂಘಟನೆ

  • ೫೭ ಇಸ್ಲಾಮಿ ದೇಶಗಳ ಸಂಘಟನೆಯು ಜಮ್ಮು-ಕಾಶ್ಮೀರ ಬಗ್ಗೆ ಹೇಳಿಕೆ !

  • ಕಲಂ ೩೭೦ನ್ನು ಪುನಃ ಜಾರಿಗೊಳಿಸುವ ಭಾರತ ವಿರೋಧಿ ಆಗ್ರಹ !

ನವದೆಹಲಿ – ೫೭ ಇಸ್ಲಾಮಿ ದೇಶಗಳ `ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಾರ್ಪೊರೇಷನ್’ (ಓ. ಐ. ಸಿ.) ಎಂಬ ಸಂಘಟನೆಯು ಪುನಃ ಇನ್ನೊಮ್ಮೆ ಜಮ್ಮು ಕಾಶ್ಮೀರದ ವಿಷಯದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿದೆ. ಭಾರತವು ಜಮ್ಮು-ಕಾಶ್ಮೀರದಲ್ಲಿ ನಾಗರೀಕರ ಮೂಲಭೂತ ಮಾನವಾಧಿಕಾರಗಳನ್ನು ರಕ್ಷಿಸಬೇಕು ಎಂಬ ಪುಕ್ಕಟೆ ಕರೆಯನ್ನೂ ಈ ಸಂಘಟನೆ ನೀಡಿದೆ. ಇದರೊಂದಿಗೆ ಕಲಂ ೩೭೦ ನ್ನು ಪುನಃ ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ. ಓ. ಐ. ಸಿ.ಯ ಹೇಳಿಕೆಯ ಹಿಂದೆ ಪಾಕಿಸ್ತಾನ ಇರುವುದಾಗಿ ಹೇಳಲಾಗುತ್ತಿದೆ. ಈ ಮೂಲಕ ಭಾರತದ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆರಲು ಪ್ರಯತ್ನಿಸಲಾಗುತ್ತಿದೆ.

ಒ. ಐ. ಸಿ.ಯ ಕಾರ್ಯದರ್ಶಿ ಹಿಸೆನ ಬ್ರಾಹಿಮ ತಾಹರವರು ಪ್ರಕಟಿಸಿರುವ ಮನವಿಯಲ್ಲಿ, ಅಕ್ಟೋಬರ್ ೨೭ ರಂದು ಜಮ್ಮು-ಕಾಶ್ಮೀರವು ಭಾರತದಲ್ಲಿ ವಿಲೀನಗೊಂಡಿತು. ಕಾಶ್ಮೀರದ ಸಮಸ್ಯೆಯ ಬಗ್ಗೆ ಅಂತರಾಷ್ಟ್ರೀಯ ಸಮುದಾಯವು ವಿಶ್ವ ಸಂಸ್ಥೆಯ ಸುರಕ್ಷಾ ಪರಿಷತ್ತಿನ ಪ್ರಸ್ತಾಪದ ಅನುಸಾರ ಹೆಜ್ಜೆಯನ್ನಿಡುವುದು ಆವಶ್ಯಕವಾಗಿದೆ. ನಾವು ಜಮ್ಮು ಕಾಶ್ಮೀರದಲ್ಲಿನ ಜನರ ಸ್ವಯಂನಿರ್ಣಯದ ಅಧಿಕಾರವನ್ನು ಬೆಂಬಲಿಸುತ್ತೇವೆ, ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಭಾರತವು ತನ್ನ ದೇಶದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ? ಎಂಬುದನ್ನು ಹೇಳುವ ಅಧಿಕಾರವನ್ನು ಈ ಸಂಘಟನೆಗೆ ಯಾರು ನೀಡಿದರು ? ಭಾರತದ ಆಂತರಿಕ ಸಮಸ್ಯೆಗಳಲ್ಲಿ ಮೂಗು ತೂರಿಸಬಾರದು, ಎಂಬುದನ್ನು ಭಾರತವು ಈ ಸಂಘಟನೆಗಳಿಗೆ ಕಠೋರವಾಗಿ ಹೇಳಬೇಕು !