ಅಸ್ಸಾಂನಲ್ಲಿ ಸರಕಾರಿ ನೌಕರರಿಗೆ ಹೊಸ ನಿಯಮ !
ಗೌಹತ್ತಿ (ಅಸ್ಸಾಂ) – ಇನ್ನು ಮುಂದೆ, ಆಸ್ಸಾಂನಲ್ಲಿ ಯಾವುದೇ ಸರಕಾರಿ ನೌಕರ ಎರಡನೇ ಮದುವೆಯಾಗಲು ಬಯಸಿದರೆ, ಅವರು ಸರಕಾರದಿಂದ ಅನುಮತಿ ಪಡೆದುಕೊಳ್ಳಬೇಕಾಗುವುದು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮಾತನಾಡಿ, ಒಂದು ವೇಳೆ ಸೇವೆಯಲ್ಲಿರುವ ಅಥವಾ ನಿವೃತ್ತ ನೌಕರನು ತೀರಿಕೊಂಡರೇ, ಅನೇಕ ಸಲ ಅವರ ಒಬ್ಬರಿಗಿಂತ ಹೆಚ್ಚು ಪತ್ನಿಯರಿಂದ ಅನೇಕ ಬಾರಿ ಪಿಂಚಣಿಗೆ ಬೇಡಿಕೆ ಮಾಡಲಾಗುತ್ತದೆ. ಇದರಿಂದ ಸರಕಾರದ ಮುಂದೆ ಹಲವು ಸಮಸ್ಯೆಗಳು ಉದ್ಭವವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಣಯವನ್ನು ಕೈಗೊಂಡಿದೆ. ಮುಸಲ್ಮಾನ ಸರಕಾರಿ ನೌಕರರು ಸಹ ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಪಾದಕೀಯ ನಿಲುವುಕೇಂದ್ರ ಸರಕಾರ ರಾಷ್ಟ್ರಮಟ್ಟದಲ್ಲಿ ಇಂತಹ ನಿಯಮ ರೂಪಿಸಬೇಕೆಂದು ರಾಷ್ಟ್ರಭಕ್ತರ ಕೋರಿಕೆ ! |