ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ

ಪ್ರಧಾನಮಂತ್ರಿ ಮೋದಿಯವರ ಉಪಸ್ಥಿತಿ !

ಅಯೋಧ್ಯೆ (ಉತ್ತರ ಪ್ರದೇಶ) – ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಭವ್ಯವಾದ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ ರಾಯ, ನೃಪೇಂದ್ರ ಮಿಶ್ರಾ ಮುಂತಾದವರು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಈ ಸಮಾರಂಭದಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು. ಜನವರಿ 22, 2024 ರಂದು ಮಧ್ಯಾಹ್ನ 12.30 ಕ್ಕೆ ಅಭಿಷೇಕ ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆಯ ಉತ್ಸವದ ಕಾರ್ಯಕ್ರಮ 10 ದಿನಗಳ ಕಾಲ ನಡೆಯಲಿದೆ. ಮಂದಿರ ನಿರ್ಮಾಣದ ನಂತರ ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಭಕ್ತರು ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಪ್ರತಿಯೊಬ್ಬ ಭಕ್ತರು ಗರ್ಭಗುಡಿಯಲ್ಲಿ 20 ರಿಂದ 30 ಸೆಕೆಂಡುಗಳ ಕಾಲ ದೇವರ ದರ್ಶನ ಪಡೆಯಬಹುದು ಎಂದು ಹೇಳಿದ್ದಾರೆ.

ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗುವುದು, ನನ್ನ ಅಹೋ ಭಾಗ್ಯ ! – ಪ್ರಧಾನಮಂತ್ರಿ ಮೋದಿ

ಪ್ರಧಾನಮಂತ್ರಿ ಮೋದಿಯವರು ಈ ಆಮಂತ್ರಣದ ಬಗ್ಗೆ ಇನ್ಸ್ಟಾಗ್ರಾಮನಲ್ಲಿ “ಜೈ ಸಿಯಾರಾಮ! ಇಂದಿನ ದಿನ ಭಾವನೆಗಳಿಂದ ತುಂಬಿದೆ. ಈಗಷ್ಟೇ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರು ನನಗೆ ಶ್ರೀಗಳ ಅಭಿಷೇಕಕ್ಕಾಗಿ ಅಯೋಧ್ಯೆಗೆ ಆಹ್ವಾನಿಸಿದ್ದಾರೆ. ಶ್ರೀ ರಾಮಮಂದಿರ, ನನಗೆ ಬಹಳ ಧನ್ಯತೆ ಎನಿಸುತ್ತದೆ. ನನ್ನ ಆಯುಷ್ಯದಲ್ಲಿ ಈ ಐತಿಹಾಸಿಕ ಘಟನೆಗೆ ಸಾಕ್ಷಿದಾರನಾಗುವುದು ನನ್ನ ಅಹೋ ಭಾಗ್ಯವಾಗಿದೆ.” ಎಂದು ಹೇಳಿದರು.