ಲೆಬನಾನ್ ನ ಕ್ರೈಸ್ತ ಮಹಿಳೆ ಭಾರತದಲ್ಲಿನ ದೇವಸ್ಥಾನದ ಅರ್ಚಕಿ !

ಮನಸ್ಸಿನಲ್ಲಿನ ಪ್ರಶ್ನೆಗಳ ಉತ್ತರ ಭಾರತದಲ್ಲಿ ದೊರೆತಿದ್ದರಿಂದ ೧೪ ವರ್ಷಗಳಿಂದ ಭಾರತದಲ್ಲಿ ವಾಸ !

ಕೊಯಿಮತ್ತೂರು – ಲೆಬನಾನ್ ಇದು ಮಧ್ಯಪೂರ್ವದಲ್ಲಿನ ಒಂದು ಮುಸಲ್ಮಾನ ಬಹುಸಂಖ್ಯಾತ ದೇಶವಾಗಿದೆ. ಇಲ್ಲಿಯ ಕ್ರೈಸ್ತ ರ ಜನಸಂಖ್ಯೆ ಶೇಕಡ ೩೨ ರಷ್ಟು ಇದೆ. ಈ ದೇಶದಲ್ಲಿನ ಹನೀನ ಎಂಬ ಓರ್ವ ಕ್ರೈಸ್ತ ಮಹಿಳೆ ತಮಿಳುನಾಡಿನ ಕೊಯಿಮುತ್ತೂರ್ ಇಲ್ಲಿಯ ಈಶ ಯೋಗ ಕೇಂದ್ರದಲ್ಲಿ ಮಾ ಲಿಂಗ ಭೈರವಿ ದೇವಸ್ಥಾನದಲ್ಲಿ ಅರ್ಚಕಿಯಾಗಿದ್ದಾರೆ.

ಕೊಯಿಮತ್ತೂರದಲ್ಲಿ ಈ ಮಹಿಳೆಯನ್ನು ‘ಭೈರಾಗಿನಿ ಮಾ ಹನೀನ್’ ಎಂದು ಕರೆಯುತ್ತಾರೆ. ಭಾರತಕ್ಕೆ ಬರುವ ಮೊದಲು ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಭಾರತದಲ್ಲಿ ಬರುವ ಮೊದಲು ಅವರು ಒಂದು ಜಾಹಿರಾತ ಕಂಪನಿಯಲ್ಲಿ ‘ಕ್ರಿಯೇಟಿವ್ ಆರ್ಟ್ ಡೈರೆಕ್ಟರ್’ ಎಂದು ಕೆಲಸ ಮಾಡುತ್ತಿದ್ದರು. ೨೦೦೯ ರಲ್ಲಿ ಅವರು ಸ್ವಯಂಸೇವಕ ಎಂದು ಭಾರತಕ್ಕೆ ಬಂದರು ಮತ್ತು ಕಳೆದ ೧೪ ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದಾರೆ. ಆಧ್ಯಾತ್ಮ ಮತ್ತು ಸನಾತನದ ಜೊತೆಗೆ ಜೋಡಣೆಯಾಗುವುದಕ್ಕಾಗಿ ಅವರು ಹೆಚ್ಚಿನ ವೇತನದ ನೌಕರಿ ಬಿಟ್ಟರು.

ಮನಸ್ಸಿನಲ್ಲಿನ ಪ್ರಶ್ನೆಗಳಿಗೆ ಭಾರತದಲ್ಲಿ ಉತ್ತರಗಳು ದೊರೆತವು !

ಮಾ ಹನೀನ ಇವರು, ”ನನ್ನ ಬಳಿ ಎಲ್ಲವೂ ಇತ್ತು; ಆದರೆ ನಾನು ಒಂದು ವಿಷಯಕ್ಕಾಗಿ ಚಡಪಡಿಸುತ್ತಿದ್ದೇ. ಅದು ನನಗೆ ಏನೆಂದು ತಿಳಿದಿರಲಿಲ್ಲ. ಈ ಕಾಲಾವಧಿಯಲ್ಲಿ ದುರ್ಭಾಗ್ಯದಿಂದ ನನ್ನ ಎಲ್ಲಕ್ಕಿಂತ ಹತ್ತಿರದ ಸ್ನೇಹಿತನ ಸಾವಿನಿಂದಾಗಿ ನನಗೆ ಬಹಳ ನೋವಾಯಿತು ಮತ್ತು ನನ್ನ ಮನಸ್ಸಿನಲ್ಲಿ ಪ್ರಶ್ನೆಗಳು ನಿರ್ಮಾಣವಾದವು. ನಾನು ಉತ್ತರ ಹುಡುಕುತ್ತಿದ್ದೆ. ಅದರ ಉತ್ತರ ನನಗೆ ಭಾರತದಲ್ಲಿ ಸಿಕ್ಕಿತು. ನಾನು ನನ್ನ ಕುಟುಂಬದಿಂದ ಮತ್ತು ಅವರ ಬೆಂಬಲದಿಂದ ಇಲ್ಲಿ ಇದ್ದೇನೆ. ನನ್ನಲ್ಲಿ ಆಗಿರುವ ಬದಲಾವಣೆ ನೋಡಿ ಅವರಿಗೆ ಕುತೂಹಲ ಅನಿಸುತ್ತಿದೆ. ‘ಯಾವ ಹುಡುಗಿ (ನಾನು) ಪ್ರತಿಯೊಂದು ವಿಷಯದ ಬಗ್ಗೆ ಸಿಟ್ಟಾಗುವುದು ಮತ್ತು ಕಿರಿಕಿರಿ ಮಾಡುವುದು, ಅದೇ ಈಗ ಬಹಳ ಶಾಂತ ಮತ್ತು ಧೀರ ಗಂಭೀರವಾಗಿದ್ದಳೆ’, ಹೀಗೆ ನನ್ನ ಕುಟುಂಬದವರ ಗಮನಕ್ಕೆ ಬಂದಿದೆ. ಅವರಿಗೆ ನನ್ನಲ್ಲಿನ ಅಪಾರ ಬದಲಾವಣೆ ಕಾಣುತ್ತಿದೆ ಮತ್ತು ಆದ್ದರಿಂದ ಅವರು ನನಗೆ ಬೆಂಬಲ ನೀಡುತ್ತಿದ್ದಾರೆ.” ಎಂದು ಹೇಳಿದರು.