4 ವರ್ಷಗಳಲ್ಲಿ ಒಮ್ಮೆ ನಡೆಯುವ ’ದ ವರ್ಲ್ಡ್ ಹಿಂದೂ ಕಾಂಗ್ರೆಸ್’ ಈ ಹಿಂದೂಗಳ ಅಂತರಾಷ್ಟ್ರೀಯ ವೇದಿಕೆ ಈ ವರ್ಷ ಥೈಲ್ಯಾಂಡ್ ನಲ್ಲಿ !

  • ನವಂಬರ್ ೨೪ – ೨೬ ಈ ಸಮಯದಲ್ಲಿ ಆಯೋಜನೆ !

  • ಹಿಂದೂ ಮಹಾಮೇಳದಲ್ಲಿ ಉಪಸ್ಥಿತರಿರಲು ಹಿಂದುತ್ವನಿಷ್ಠರಿಗೆ ಕರೆ !

ನವ ದೆಹಲಿ – ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಆಯೋಜಿಸಲಾಗುವ ’ದ ವರ್ಲ್ಡ್ ಹಿಂದೂ ಕಾಂಗ್ರೆಸ್’ ಈ ವರ್ಷ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಆಯೋಜಿಸಲಾಗಿದೆ. ಮುಂದಿನ ತಿಂಗಳಲ್ಲಿ ಎಂದರೆ ನವಂಬರ್ ೨೪ – ೨೬ ಈ ಸಮಯದಲ್ಲಿ ಈ ಅಂತರಾಷ್ಟ್ರೀಯ ಹಿಂದೂ ಮಹಾಮೇಳದ ಆಯೋಜನೆ ಮಾಡಲಾಗಿದೆ, ಎಂದು ಆಯೋಜಕರಿಂದ ಮಾಹಿತಿ ದೊರೆತಿದೆ. ಸಂಘಟನೆಯು ಅಕ್ಟೋಬರ್ ೨೫ ರಂದು ಇದರ ಸಂದರ್ಭದಲ್ಲಿನ ಅಧಿಕೃತ ಮಾಹಿತಿ ’ಎಕ್ಸ್’ ಖಾತೆಯ ಮೂಲಕ ಪ್ರಸಾರ ಮಾಡಿದೆ. ಈ ಕಾರ್ಯಕ್ರಮಕ್ಕೆ ಪ.ಪೂ. ಮಾತಾ ಅಮೃತಾನಂದಮಯಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ. ಪೂ. ಸರಸಂಘ ಚಾಲಕ ಮೋಹನಜಿ ಭಾಗವತ , ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಂಘದ ಸಹಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಾಬಳೆ ಇವರಂತಹ ಹಿಂದುತ್ವನಿಷ್ಠ ನಾಯಕರು ಮಾತನಾಡುವರು.

’ದ ವರ್ಲ್ಡ್ ಹಿಂದೂ ಕಾಂಗ್ರೆಸ್’ ಇದು ಅಂತರಾಷ್ಟ್ರೀಯ ವೇದಿಕೆಯಾಗಿದ್ದು ಇದರ ಮೂಲಕ ವಿವಿಧ ದೇಶಗಳಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರತ ಇರುವ ಹಿಂದುಗಳು ಪರಸ್ಪರರ ಸಂಪರ್ಕಕ್ಕೆ ಬರುತ್ತಾರೆ. ಈ ಮೂಲಕ ವಿಚಾರಗಳ ವಿನಿಮಯದ ಜೊತೆಗೆ ’ಹಿಂದೂಹಿತ ಒಗ್ಗಟ್ಟಿನಿಂದ ಹೇಗೆ ಸಾಧಿಸಬಹುದು ?’, ಇದಕ್ಕಾಗಿ ಪ್ರಯತ್ನ ಮಾಡಲಾಗುತ್ತದೆ. 4 ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮದಲ್ಲಿ ೭ ಸಮಾಂತರ ಪರಿಷತ್ತು ಆಯೋಜಿಸಲಾಗುತ್ತದೆ. ಇದರಲ್ಲಿ ಆರ್ಥಿಕ, ಶೈಕ್ಷಣಿಕ, ಪತ್ರಿಕೋದ್ಯಮ, ಸಂಘಟನಾತ್ಮಕ, ರಾಜಕೀಯ ಈ ಕ್ಷೇತ್ರದ ಸಮಾವೇಶದ ಜೊತೆಗೆ ’ಹಿಂದೂ ಮಹಿಳೆ ಮತ್ತು ಯುವ ಪೀಳಿಗೆ’ ಇವರ ವಿಶೇಷ ನೇತೃತ್ವ ಮತ್ತು ಕೊಡುಗೆ’ ಈ ವಿಷಯ ಇರುತ್ತದೆ. ಈ ಪರಿಷತ್ತಿನಲ್ಲಿ ಹಿಂದೂ ಜನಾಂಗದ ಎದುರು ಇರುವ ಅಂತರಾಷ್ಟ್ರೀಯ ಮಟ್ಟದಲ್ಲಿನ ಸವಾಲುಗಳು ಮತ್ತು ಅವಕಾಶಗಳ ವಿಚಾರ ವಿನಿಮಯ ಮಾಡಲಾಗುತ್ತದೆ ಮತ್ತು ಅದರ ಬಗ್ಗೆ ನಿಖರ ಉಪಾಯ ಮಾಡುವುದಕ್ಕಾಗಿ ಪ್ರಯತ್ನ ಮಾಡಲಾಗುತ್ತದೆ. ಈ ಮೂಲಕ ಹಿಂದೂಗಳ ಪ್ರಗತಿ ಮತ್ತು ಸಮೃದ್ಧಿ ಪ್ರಾಪ್ತವಾಗುವುದಕ್ಕಾಗಿ ಪ್ರಯತ್ನವಾಗಿ ಮಾನವೀಯತೆ ಮತ್ತು ಸಂಪೂರ್ಣ ಜಗತ್ತಿನ ಹಿತದ ಯೋಚನೆ ಮಾಡಲಾಗುತ್ತದೆ, ಎಂದು ಆಯೋಜಕರಿಂದ ಈ ಕಾರ್ಯಕ್ರಮದ ಬಗ್ಗೆ ಹೇಳಲಾಯಿತು.

೨೦೧೪ ರಲ್ಲಿ ಈ ಕಾರ್ಯಕ್ರಮ ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ೫೩ ದೇಶಗಳಲ್ಲಿನ ೧ ಸಾವಿರದ ೮೦೦ ಹಿಂದುತ್ವನಿಷ್ಠರು ಸಹಭಾಗಿ ಆಗಿದ್ದರು. ೨೦೧೮ ರಲ್ಲಿ ಅಮೇರಿಕಾದ ಶಿಕಾಗೋ ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ೬೦ ದೇಶದಲ್ಲಿನ ೨ ಸಾವಿರದ ೫೦೦ ಹಿಂದುತ್ವನಿಷ್ಠರು ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಭಾಗವಹಿಸಿದ್ದರು. ’ಈ ವರ್ಷ ೩ ಸಾವಿರದ ೫೦೦ ಜನರು ಈ ಕಾರ್ಯಕ್ರಮಕ್ಕೆ ಸಹಭಾಗಿ ಆಗಬಹುದೆಂದು’, ಆಯೋಜಕರು ತಿಳಿಸಿದ್ದಾರೆ.

’ದ ವರ್ಲ್ಡ್ ಹಿಂದೂ ಕಾಂಗ್ರೆಸ್’ನಲ್ಲಿ ಸಹಭಾಗಿಯಾಗಲು ಇದನ್ನು ಮಾಡಿರಿ !

whc-payment.com ಈ ಲಿಂಕ್ ಗೆ ಹೋಗಿ ಈ ಕಾರ್ಯಕ್ರಮದಲ್ಲಿ ಸಹಭಾಗಿ ಆಗುವ ಅರ್ಜಿ ತುಂಬಿಸಬಹುದು. ಕಾರ್ಯಕ್ರಮದಲ್ಲಿ ಪುರುಷರಿಗೆ ಸಹಭಾಗಿಯಾಗಲು ೧೦ ಸಾವಿರದ ೫೦೦ ಥೈ ಬ್ಯಾಟ್ (ಥೈಲ್ಯಾಂಡಿನ ಕರೆನ್ಸಿ) ಎಂದರೆ ಸುಮಾರು ೨೪ ಸಾವಿರದ ೫೦೦ ರೂಪಾಯಿ ಶುಲ್ಕ ಇರುವುದು. ಮಹಿಳೆಯರಿಗಾಗಿ ೭ ಸಾವಿರ ಥೈ ಬ್ಯಾಟ್ (೧೬ ಸಾವಿರದ ೧೦೦ ರೂಪಾಯಿ) ಹಾಗೂ ವಿದ್ಯಾರ್ಥಿಗಳಿಗೆ ೫ ಸಾವಿರದ ೨೫೦ ಥೈ ಬ್ಯಾಟ್ (೧೨ ಸಾವಿರದ ೧೦೦ ರೂಪಾಯಿ) ಇಷ್ಟು ಶುಲ್ಕವಿದೆ. ಹೆಚ್ಚಿನ ಮಾಹಿತಿಗಾಗಿ worldhinducongress.org ಈ ಜಾಲತಾಣಕ್ಕೆ ಭೇಟಿ ನೀಡಬಹುದು.