ವಿಜಯದಶಮಿ ನಿಮಿತ್ತ ‘ಇಸ್ರೋ’ ಮುಖ್ಯಸ್ಥರಿಂದ ದೇವಸ್ಥಾನದಲ್ಲಿ ಪೂಜೆ !

ತಿರುವನಂತಪುರಮ್ (ಕೇರಳ) – ವಿಜಯದಶಮಿಯಂದು ‘ಇಸ್ರೋದ ಮುಖ್ಯಸ್ಥ ಎಸ್. ಸೋಮನಾಥ ಇವರು ಕೇರಳದ ತಿರುವನಂತಪುರಂನಲ್ಲಿರುವ ಪೂರ್ಣಮಕವೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಅವರು ಬ್ರಹ್ಮಾಂಡದ ರಹಸ್ಯಗಳ ಬಗ್ಗೆ ನಡೆಯುತ್ತಿರುವ ಆಧ್ಯಾತ್ಮಿಕ ಸಂಶೋಧನೆಯನ್ನು ಸಹ ಪ್ರಸ್ತಾಪಿಸಿದರು. ಅವರು, “ಒಬ್ಬ ಬಾಹ್ಯಾಕಾಶ ವಿಜ್ಞಾನಿಯೆಂದು ನಾನು ಬಾಹ್ಯಾಕಾಶದ ರಹಸ್ಯಗಳನ್ನು ಬಿಚ್ಚಿಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿದರು.

ದೇವರೊಂದಿಗೆ ನನ್ನ ವಿಶೇಷ ಸಂಬಂಧ ! – ಎಸ್. ಸೋಮನಾಥ

ನನಗೂ ದೇವರಿಗೂ ವಿಶೇಷವಾದ ಸಂಬಂಧವಿದ್ದು, ಇದರಿಂದಲೇ ನನಗೆ ಪ್ರತಿದಿನ ದೇವಸ್ಥಾನಕ್ಕೆ ಹೋಗಲು ಪ್ರೇರಣೆ ಸಿಗುತ್ತದೆ’ ಎಂದು ಎಸ್. ಸೋಮನಾಥ್ ಹೇಳಿದರು. ಅವರು ದೇವಸ್ಥಾನದಲ್ಲಿ ‘ವಿದ್ಯಾರಂಭ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನವನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆ ಚಾಲನೆ ನೀಡಲಾಗುತ್ತದೆ. ಸೋಮನಾಥ ಇವರು ತಮ್ಮ ಮಾತನ್ನು ಮುಂದುವರಿಸಿ, ‘ಗಗನಯಾನ’ ಮಿಷನ್‌ಗೆ ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರ ತರಬೇತಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ಹೇಳಿದರು. ಈ ಕಾರ್ಯಾಚರಣೆಗೆ ಮನುಷ್ಯರನ್ನು ಕಳುಹಿಸುವ ಮೊದಲು, ಮನುಷ್ಯರಂತೆ ಕಾಣುವ ‘ರೋಬೋಟ್’ಗಳನ್ನು ಅಂದರೆ ‘ಹ್ಯೂಮನಾಯ್ಡ್ಸ’ಗಳನ್ನು ಕಳುಹಿಸಲಾಗುತ್ತದೆ ಎಂದು ಹೇಳಿದರು.

(ಸೌಜನ್ಯ – ANI News)

ಸಂಪಾದಕೀಯ ನಿಲುವು

ಬುದ್ಧಿಜೀವಿಗಳು, ಪ್ರಗತಿಪರರು ಇತ್ಯಾದಿಗಳನ್ನು ‘ಇಸ್ರೋ’ ಮುಖ್ಯಸ್ಥರಿಂದ ಮತ್ತೊಮ್ಮೆ ಚಪರಾಕಿ !