ಆನ್ಲೈನ್ ನಲ್ಲಿ ಆಲಿಕೆ ನಡೆಯುತ್ತಿತ್ತು !
ಕರ್ಣಾವತಿ (ಗುಜರಾತ) – ಗುಜರಾತ ಉಚ್ಚ ನ್ಯಾಯಾಲಯದಲ್ಲಿನ ಒಂದು ಆಲಿಕೆಯ ಸಮಯದಲ್ಲಿ ಒಂದು ವಿಭಾಗೀಯ ಪೀಠದಲ್ಲಿನ ನ್ಯಾಯಮೂರ್ತಿ ಬೀರೇನ ವೈಷ್ಣವ ಮತ್ತು ಮಹಿಳಾ ಮೌನ ಭಟ್ಟ ಇವರಲ್ಲಿ ಆಲಿಕೆಯ ಸಮಯದಲ್ಲಿ ವಿವಾದವಾಯಿತು. ನ್ಯಾಯಾಲಯದ ಈ ಕೋಣೆಯಲ್ಲಿ ಆನ್ಲೈನ್ ವಿಚಾರಣೆಗಾಗಿ ಕ್ಯಾಮೆರಾ ಅಳವಡಿಸಲಾಗಿರುವುದರಿಂದ ಈ ವಿವಾದ ಆನ್ಲೈನ್ ನಲ್ಲಿ ನೋಡಲಾಯಿತು. ನ್ಯಾಯಾಲಯದ ಯುಟ್ಯೂಬ್ ಚಾನೆಲ್ ನಲ್ಲಿ ಕೂಡ ಇದರ ಪ್ರಸಾರ ನೋಡಲಾಯಿತು. ವಿವಾದದಿಂದಾಗಿ ಆಲಿಕೆಯನ್ನು ನಿಲ್ಲಿಸಲಾಯಿತು ಹಾಗೂ ಹಾಗೂ ಈ ವಿವಾದದ ವಿಡಿಯೋ ಯೂಟ್ಯೂಬ್ ನಿಂದ ತೆಗೆಯಲಾಯಿತು. ಈ ವಿವಾದದಿಂದ ಇಬ್ಬರೂ ನ್ಯಾಯಮೂರ್ತಿಗಳಿಗೆ ಬೇರೆಬೇರೆ ಮೊಕದ್ದಮೆಯ ವಿಚಾರಣೆಗಾಗಿ ನೇಮಕಗೊಳಿಸಲಾಯಿತು. ಆದ್ದರಿಂದ ಅವರು ಅಕ್ಟೋಬರ್ ೨೫ ರಿಂದ ಬೇರೆ ನ್ಯಾಯಮೂರ್ತಿಗಳ ಜೊತೆಗೆ ಕಾಣಿಸಿದರು.
ಈಗ ಈ ನ್ಯಾಯಮೂರ್ತಿಗಳ ವಿವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ನ್ಯಾಯಮೂರ್ತಿ ವೈಷ್ಣವ ಇವರು ಒಂದು ಆದೇಶ ಅಂಗೀಕರಿಸುತ್ತಾರೆ. ಅದು ನ್ಯಾಯಮೂರ್ತಿ ಭಟ್ಟ ಇವರಿಗೆ ಒಪ್ಪಿಗೆ ಇಲ್ಲ. ಇದರಿಂದ ಇವರಲ್ಲಿ ಮುಂದಿನ ಸಂಭಾಷಣೆ ನಡೆಯುತ್ತದೆ,
ನ್ಯಾಯಮೂರ್ತಿ ವೈಷ್ಣವ : ಈಗ ನೀವು ಬೇರೆ ಆಗಿದ್ದೀರಿ. ನಾವು ಪರಸ್ಪರಗಿಂತಲೂ ಬೇರೆಯಾಗಿದ್ದೇವೆ ಮತ್ತು ಹಾಗೆ ಇರುತ್ತೇವೆ.
ನ್ಯಾಯಮೂರ್ತಿ ಭಟ್ಟ : ಇದು ಬೇರೆಯಾಗುವ ಪ್ರಶ್ನೆಯೇ ಇಲ್ಲ.
ನ್ಯಾಯಮೂರ್ತಿ ವೈಷ್ಣವ : ಹಾಗಾದರೆ ನೀವು ವಟವಟ ಮಾಡದುರು. ನೀವು ಬೇರೆ ಆದೇಶ ಹೊರಡಿಸಿ. ಈಗ ನಾವು ಹೆಚ್ಚಿನ ವಿಚಾರಣೆಗಳು ನಡೆಸಲು ಸಾಧ್ಯವಿಲ್ಲ.
ಇದರ ನಂತರ ಅವರು ಇಬ್ಬರು ಅವರ ಕೋಣೆಯಿಂದ ಎದ್ದು ಹೊರ ನಡೆಯುತ್ತಾರೆ.