ಕೊಲಕಾತಾದಲ್ಲಿ ದುರ್ಗಾಪೂಜೆ ಮಂಡಳದಿಂದ ತಯಾರಿಸಿರುವ ಶ್ರೀರಾಮ ಮಂದಿರದ ಪ್ರತಿಮೆ ಅಯೋಗ್ಯ ! (ಅಂತೆ) – ದ ವಾಯರ, ವಾರ್ತಾ ಜಾಲತಾಣ

ಕೊಲಕಾತಾ – ನಗರದ ಒಂದು ದುರ್ಗಾಪೂಜೆ ಉತ್ಸವ ಮಂಡಳದಿಂದ ಶ್ರೀರಾಮ ಮಂದಿರದ ಪ್ರತಿಕೃತಿಯನ್ನು ನಿರ್ಮಿಸಿ ಮಂಟಪ ಅಲಂಕರಿಸಲಾಗಿತ್ತು. ಇದರ ಬಗ್ಗೆ ಕಮಿನಿಸ್ಟ್ ಮತ್ತು ಭಾರತದ್ವೇಷಿ ಜಾಲತಾಣದಲ್ಲಿ ‘ದ ವಾಯರ್’ನಲ್ಲಿ ಪಾರ್ಥೊ ಸಾರಥಿ ರೆ ಇವರ ಲೇಖನ ಪ್ರಕಾಶಿತ ಮಾಡಲಾಯಿತು. ಅದರಲ್ಲಿ ಅವರು, ಶ್ರೀರಾಮ ಮಂದಿರ ಇದು ಸಮಾಜದ ಶೋಷಣೆಯ ಪ್ರತೀಕವಾಗಿದೆ ಮತ್ತು ಉತ್ಸವದ ಮೌಲ್ಯದ ವಿರುದ್ಧವಾಗಿದೆ ಎಂದು ಹೇಳಿದೆ. (ಶ್ರೀರಾಮ ಮಂದಿರ ಇದು ಶೋಷಣೆಯ ಅಲ್ಲ, ಅದು ಮಾಂಗಲ್ಯ, ಶ್ರದ್ಧೆ ಮತ್ತು ಹಿಂದುಗಳ ಗೌರವದ ಪ್ರತೀಕವಾಗಿದೆ. ಅದನ್ನು ಶೋಷಣೆಯ ಪ್ರತೀಕ ಎನ್ನುವವರು ವೈಚಾರಿಕ ಭಯೋತ್ಪಾದಕರೆ ಇರುವರು ! – ಸಂಪಾದಕರು)

೧. ಪ್ರತಿವರ್ಷ ದುರ್ಗಾ ಪೂಜೆಯ ಸಮಯದಲ್ಲಿ ಕೊಲ್ಕತ್ತಾದಲ್ಲಿ ಅನೇಕ ಭವ್ಯ ಮಂಟಪಗಳನ್ನು ಸಿದ್ಧಗೊಳಿಸಲಾಗುತ್ತದೆ. ಅದರಲ್ಲಿ ವಿವಿಧ ಸ್ಥಿರ ಚಿತ್ರಗಳು ಇರುತ್ತವೆ. ಈ ಸಮಯದಲ್ಲಿ ಸಂತೋಷ ಮಿತ್ರ ವೃತ್ತದಲ್ಲಿ ಒಂದು ಭವ್ಯ ಮಂಟಪ ಸಿದ್ಧಗೊಳಿಸಲಾಗಿತ್ತು. ಶ್ರೀರಾಮ ಮಂದಿರದ ಪ್ರತಿಕೃತಿ ನಿರ್ಮಿಸಿ ಈ ಮಂಟಪ ಅಲಂಕರಿಸಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರಿಂದ ಮಂಟಪದ ಉದ್ಘಾಟನೆ ಮಾಡಲಾಗಿತ್ತು.

೨. ಈ ಮಂಟಪ ನಗರದಲ್ಲಿನ ಜನರಿಗಾಗಿ ಮುಖ್ಯ ಆಕರ್ಷಣೆಯಾಗಿತ್ತು. ಸಾಮಾನ್ಯ ಜನರಿಂದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಇವರವರೆಗೆ ಎಲ್ಲಾ ಅತಿಗಣ್ಯ ವ್ಯಕ್ತಿಗಳು ಕೂಡ ಇಲ್ಲಿ ದರ್ಶನಕ್ಕಾಗಿ ಬಂದು ಹೋಗಿದ್ದರು.

೩. ಈ ಲೇಖನ ಬರೆದಿರುವ ಪಾರ್ಥೋ ಇವರ, ಶ್ರೀರಾಮ ಮಂದಿರ ಇದು ಬೇರೆ ಧರ್ಮದ ಪ್ರಾರ್ಥನಾ ಸ್ಥಳ ನಾಶಗೊಳಿಸಿ ಕಟ್ಟಲಾಗಿದೆ. ಅದು ಕೊಲಕಾತಾದಲ್ಲಿನ ದುರ್ಗಾ ಪೂಜೆಯ ಮಂಟಪದ ಕೇಂದ್ರ ಸ್ಥಾನ ಆಗಲು ಸಾಧ್ಯವಿಲ್ಲ ಎಂದು ದಾವೆ ಮಾಡಿದ್ದಾರೆ. (ಶ್ರೀರಾಮ ಮಂದಿರ ಧ್ವಂಸಗೊಳಿಸಿ ಬಾಬರನ್ನು ಅಲ್ಲಿ ಮಸೀದಿ ಕಟ್ಟಿದ್ದನು. ಹೀಗೆ ಇರುವಾಗ ತಪ್ಪಾದ ಇತಿಹಾಸ ಹೇಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಆವಶ್ಯಕ ! – ಸಂಪಾದಕರು)

ಸಂಪಾದಕೀಯ ನಿಲುವು

ಕಮ್ಯುನಿಸ್ಟ್ ಮತ್ತು ಭಾರತದ್ವೇಷಿ ಜಾಲತಾಣದ ‘ದ ವಾಯರ’ ಗೆ ಹೊಟ್ಟೆಕಿಚ್ಚು !

ಕಮ್ಯುನಿಸ್ಟ್ ಪ್ರಸಾರ ಮಾಧ್ಯಮದ ಹಿಂದೂದ್ವೇಷ ಈಗ ಅಡಗಿಲ್ಲ. ಹಿಂದೂಗಳ ನಾಶದ ಬಗ್ಗೆ ಯೋಚಿಸುವ ಇಂತಹ ಪ್ರಸಾರ ಮಾಧ್ಯಮಗಳನ್ನು ನಿಷೇಧಿಸಬೇಕು !