ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿಲ್ಲ ನಡೆಸಲಾಗುತ್ತಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರಿಂದ ವಿಜಯದಶಮಿಯ ಉತ್ಸವದಲ್ಲಿ ಹೇಳಿಕೆ

ನಾಗಪುರ – ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿಲ್ಲ ನಡೆಸಲಾಗುತ್ತಿದೆ. ದಶಕಗಳಿಂದ ಶಾಂತವಾಗಿರುವ ಮಣಿಪುರದಲ್ಲಿ ಈಗ ಅನಿರೀಕ್ಷಿತವಾಗಿ ಹಿಂಸಾಚಾರ ಹೇಗೆ ಮುಗಿಲು ಮುಟ್ಟಿದೆ ? ಹಿಂಸಾಚಾರ ಮಾಡುವವರಲ್ಲಿ ಗಡಿ ಆಚೆಗಿನ ದಾಳಿಕೋರರು ಇರುವರೇ ? ಹೀಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಪ್ರಶ್ನೆ ಕೇಳಿದರು. ಇಲ್ಲಿ ನಡೆದಿರುವ ಸಂಘದ ವಿಜಯದಶಮಿಯ ಉತ್ಸವದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಪ್ರಮುಖ ಅತಿಥಿಯಾಗಿ ಪ್ರಸಿದ್ಧ ಗಾಯಕ ಶಂಕರ ಮಹಾದೇವನ್ ಉಪಸ್ಥಿತರಿದ್ದರು.

ಸರಸಂಘಚಾಲಕರು ಮಾತು ಮುಂದುವರೆಸಿ,

೧. ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.

೨. ಜನವರಿ ೨೨, ೨೦೨೪ ರಂದು ಅಯ್ಯೋದ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಆಗುವುದು. ಅಲ್ಲಿ ಎಲ್ಲರೂ ಹೋಗಲು ಸಾಧ್ಯವಿಲ್ಲ; ಆದ್ದರಿಂದ ಪ್ರತಿಯೊಬ್ಬ ಭಾರತೀಯನು ತಮ್ಮ ತಮ್ಮ ಗ್ರಾಮದಲ್ಲಿನ ಬೇರೆ ಬೇರೆ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಬೇಕು.

೩. ಕೆಲವು ವಿನಾಶಕಾರಿ ಶಕ್ತಿಗಳು ತಮ್ಮನ್ನು ‘ಸಾಂಸ್ಕೃತಿಕ ಮಾರ್ಕ್ಸ್ ವಾದಿ’ ಎಂದು ಹೇಳುತ್ತಾರೆ. ಅವರು ಜಗತ್ತಿನಲ್ಲಿನ ಎಲ್ಲಾ ಸುವ್ಯವಸ್ಥೆ, ಮಾಂಗಲ್ಯ, ಸಂಸ್ಕಾರ ಮತ್ತು ಸಂಯಮ ಇದನ್ನು ವಿರೋಧಿಸುತ್ತಾರೆ. ಕೆಲವು ಮುಷ್ಟಿಯಷ್ಟು ಜನರು ಸಂಪೂರ್ಣ ಮಾನವ ಜಾತಿಯ ಮೇಲೆ ಪ್ರಭಾವ ಬೀರಬೇಕೆಂದು ಇಂತಹ ಅರಾಜಕತೆಗೆ ಪೋಷಿಸುತ್ತಾ ಪ್ರಚಾರ ಪ್ರಸಾರ ಮಾಡುತ್ತಾರೆ.

ಗಾಯಕ ಶಂಕರ ಮಹಾದೇವನ್ ಇವರು ಸರಸ್ವತಿ ಶ್ಲೋಕದಿಂದ ಭಾಷಣ ಆರಂಭಿಸಿದರು. ‘ಅಖಂಡ ಭಾರತದ ವಿಚಾರ, ಪರಂಪರೆ, ಸಂಸ್ಕೃತಿ ರಕ್ಷಿಸುವಲ್ಲಿ ಸಂಘದ ದೊಡ್ಡ ಕೊಡುಗೆ ಇದೆ, ಎಂದು ಹೆಮ್ಮೆಯಿಂದ ಹೇಳಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ ಗಡಕರಿ, ಉಪಮುಖ್ಯಮಂತ್ರಿ ದೇವೇಂದ್ರ ಪಡಣವೀಸ ಉಪಸ್ಥಿತರಿದ್ದರು.