ಅಮೆರಿಕಾದಿಂದ ಅಂಚೆ ಮೂಲಕ ಗಾಂಜಾ ತರಿಸಿದ ಇಬ್ಬರ ಬಂಧನ!

10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಗಾಂಜಾ ವಶ

ಮುಂಬಯಿ – ಅಮೆರಿಕಾದಿಂದ ಅಂಚೆ ಮೂಲಕ ಗಾಂಜಾ ತರಿಸಿದ ಆರೋಪದ ಅಡಿಯಲ್ಲಿ ಕಸ್ಟಮ್ಸ್ ಇಲಾಖೆ ಮುಂಬಯಿಯಲ್ಲಿ ಇಬ್ಬರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ 115 ಗ್ರಾಮ ಉತ್ತಮ ಗುಣಮಟ್ಟದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 10 ಲಕ್ಷ ರೂಪಾಯಿಗೂ ಅಧಿಕವಿದೆ. ಇದನ್ನು ಖರೀದಿಸಲು ‘ಬಿಟ್ ಕಾಯಿನ್’ ಕರೆನ್ಸಿ ಬಳಸಿರುವ ಶಂಕೆ ವ್ಯಕ್ತವಾಗಿದೆ. (‘ಬಿಟ್ಕಾಯಿನ್’ ಆನ್ಲೈನ್ ಕರೆನ್ಸಿಯಾಗಿದೆ. ಇದಕ್ಕೆ ಯಾವುದೇ ಭೌತಿಕ ರೂಪವಿಲ್ಲ. ಈ ಕರೆನ್ಸಿಯನ್ನು ವಿದ್ಯುನ್ಮಾನ ಪದ್ಧತಿಯಲ್ಲಿ ಸಂಗ್ರಹಿಸಬಹುದು.) ಬಂಧಿತರು ಯಶ ಕಲಾನಿ ಮತ್ತು ಸುಕೇತು ತಳೆಕರ ಎಂದು ಗುರುತಿಸಲಾಗಿದೆ. ಮುಂಬಯಿಯ ವಿದೇಶಿ ಅಂಚೆ ಕಚೇರಿಯಲ್ಲಿ ಅಮೇರಿಕದಿಂದ ಬಂದ ಪಾರ್ಸೆಲ್ ನಲ್ಲಿ ಗಾಂಜಾ ಇರುವ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಅದಕ್ಕನುಗುಣವಾಗಿ ಅವರು ಮೇಲಿನಂತೆ ಕ್ರಮ ಕೈಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿ ಅಂಚೆ ಮೂಲಕ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಆಗುತ್ತಿದ್ದರೆ, ಆ ವಿಷಯದಲ್ಲಿ ಭಾರತದ ಆಡಳಿತ ಇನ್ನಷ್ಟು ಜಾಗರೂಕವಾಗಿ ಅದನ್ನು ತಡೆಯುವುದು ಆವಶ್ಯಕವಾಗಿದೆ !