`ವಾಘ ಬಕರಿ ಚಾಯ್’ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರ ನಿಧನ

ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದರು !

ನವದೆಹಲಿ – ವಾಘ ಬಕರಿ ಚಹಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪರಾಗ ದೇಸಾಯಿ (ವಯಸ್ಸು ೪೯ ವರ್ಷ) ಇವರು ನಿಧನ ಹೊಂದಿದರು. ಕಳೆದ ವಾರ ಕರ್ಣಾವತಿಯಲ್ಲಿ ಮಾರ್ನಿಂಗ್ ವಾಕ್ (ಬೆಳಗಿನ ನಡಿಗೆ) ಮಾಡುವ ಸಮಯದಲ್ಲಿ ಬೀದಿ ನಾಯಿಗಳು ಅವರ ಮೇಲೆ ದಾಳಿ ಮಾಡಿದವು. ಈ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವಾಗ ಅವರು ಕಾಲು ಜಾರಿ ಕೆಳಗೆ ಬಿದ್ದರೂ ಮತ್ತು ಅವರ ತಲೆಗೆ ಪೆಟ್ಟಾಯಿತು. ಇದರಿಂದ ಅವರ ಮೆದುಳಿನಲ್ಲಿ ರಕ್ತಸ್ರಾವವಾಯಿತು. ಅವರಿಗೆ ಕರ್ಣಾವತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ. ವಾಘ ಬಕಾರಿ ಚಾಯ್ ದೇಶದಲ್ಲಿನ ಪ್ರಮುಖ ಮೂರು ಚಹಾ ಸಂಸ್ಥೆಗಳಲ್ಲಿ ಒಂದಾಗಿದೆ. ಅದರ ವ್ಯವಹಾರ ಜಗತ್ತಿನ ೬೦ ದೇಶಗಳಲ್ಲಿ ಹರಡಿದೆ. ಈ ಕಂಪನಿಯ ವಾರ್ಷಿಕ ವಹಿವಾಟು ೨ ಸಾವಿರ ಕೋಟಿ ರೂಪಾಯಿಗಳಷ್ಟಿದೆ.

ಸಂಪಾದಕೀಯ ನಿಲುವು

ಒಂದು ಪ್ರತಿಷ್ಠಿತ ಸಂಸ್ಥೆಯ ಅಧಿಕಾರಿಯ ಜೀವ ಹೋಗಲು ಬೀದಿ ನಾಯಿಗಳು ಕಾರಣವಾಗಿರುವುದು ವ್ಯವಸ್ಥೆಗೆ ನಾಚಿಕೆಗೇಡು ! ಬೀದಿ ನಾಯಿಯ ಸಮಸ್ಯೆ ಗಂಭೀರವಾಗುತ್ತಿದೆ. ಇದರ ಬಗ್ಗೆ ಈಗ ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಗಳು ದೃಢವಾದ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ !