ದಸರಾಗೆ ರಾವಣನ ಪ್ರತಿಮೆಯ ದಹನ ಮಾಡುವವರ ವಿರುದ್ಧ ದೂರು ದಾಖಲಿಸುವ ರಾವಣಪ್ರೇಮಿ ’ಆದಿವಾಸಿ ವಿಕಾಸ ಪರಿಷತ್ತಿನ’ ಬೇಡಿಕೆ !

ನಾಗಪುರ – ವಿಜಯದಶಮಿಯ ದಿನದಂದು ರಾವಣನ ಪ್ರತಿಮೆ ದಹನ ಮಾಡುವ ವ್ಯಕ್ತಿ ಮತ್ತು ಮಂಡಳಿಯ ವಿರುದ್ಧ ದೂರು ದಾಖಲಿಸಬೇಕು. ಈ ಪದ್ಧತಿ ಶಾಶ್ವತವಾಗಿ ನಿಲ್ಲಿಸಬೇಕು, ಎಂದು ’ಅಖಿಲ ಭಾರತೀಯ ಆದಿವಾಸಿ ವಿಕಾಸ ಪರಿಷತ್’ನ ಭಂಡಾರಾ ಜಿಲ್ಲೆಯಲ್ಲಿನ ತುಮಸರ್, ಮೋಹಾಡಿ ಶಾಖೆ ಹಾಗೂ ’ಆಲ್ ಇಂಡಿಯಾ ಆದಿವಾಸಿ ಪೀಪಲ್ಸ್ ಫೆಡರೇಶನ್, ನಾಗಪುರ್’ ಇಲ್ಲಿಯ ತುಮಸಾರ ಶಾಖೆಯ ಭಂಡಾರ ಇಲ್ಲಿಯ ಪೊಲೀಸ ಅಧಿಕಾರಿ, ತಹಸೀಲದಾರ ಮತ್ತು ಗುಂಪು ವಿಕಾಸ ಅಧಿಕಾರಿ ಇವರ ಬಳಿ ಒಂದು ಅರ್ಜಿಯ ಮೂಲಕ ಆಗ್ರಹಿಸಲಾಗಿದೆ. ಈ ಮನವಿ ಸಾಮಾಜಿಕ ಜಾಲತಾಣದಲ್ಲಿ ಕೂಡ ಪ್ರಸಾರ ಮಾಡಲಾಗಿದೆ. ಈ ಸಂಘಟನೆಯ ಬೇಡಿಕೆ ನಿರಾಕರಿಸಿದರೇ, ’ಆಕ್ರೋಶ ಮೋರ್ಚಾ’ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಮನವಿಯಲ್ಲಿ ಪರಿಷತ್ತು,

೧. ರಾವಣ ಇವನು ಎಲ್ಲರಿಗೂ ನ್ಯಾಯ ನೀಡುವ ನ್ಯಾಯಪ್ರಿಯ ರಾಜನಾಗಿದ್ದನು. (ರಾವಣನು ಅನೇಕ ಋಷಿ ಮುನಿಗಳ ಹತ್ಯೆ ಮಾಡಿದ್ದನು, ಅನೇಕ ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಿದ್ದನು, ಹೀಗೆ ಇರುವಾಗ ಅವನಿಗೆ ನ್ಯಾಯಪ್ರಿಯ ಎಂದು ಹೇಳುವುದು ಹಾಸ್ಯಾಸ್ಪದ ! – ಸಂಪಾದಕರು) ರಾವಣ ವಿವಿಧ ಗುಣಗಳ ಸಂಗಮವಾಗಿದ್ದನು. ಅವನು ಸಂಗೀತ ತಜ್ಞ, ರಾಜನೀತಿತಜ್ಞ, ಉತ್ಕೃಷ್ಟ ಶಿಲ್ಪಿ, ಆಯುರ್ವೇದ ಆಚಾರ್ಯ ಮತ್ತು ವಿವೇಕವಾದಿ ಆಗಿದ್ದನು. ಇಷ್ಟು ಇದ್ದರೂ ಕೂಡ ಅವನ ಪ್ರತಿಮೆಯ ದಹನ ಮಾಡಿ ಅವನಿಗೆ ಮತ್ತು ಅವನ ಗುಣಗಳಿಗೆ ಅವಮಾನ ಮಾಡುವುದು ತಪ್ಪಾಗಿದೆ. (ಜಗತ್ತಿನಾದ್ಯಂತ ಒಸಾಮ ಬಿನ್ ಲಾಡೆನ್ ಸಹಿತ ಅನೇಕ ಭಯೋತ್ಪಾದಕರು ಉನ್ನತ ಶಿಕ್ಷಣ ಪಡೆದವರಾಗಿದ್ದರು. ಆದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವುದು ಎಂದರೆ ಅವರ ಗುಣಗಳನ್ನು ಅವಮಾನಿಸುವುದು ಎಂದು ಪರಿಷತ್ತಿಗೆ ಅನಿಸುತ್ತಿದೆಯೇ ? – ಸಂಪಾದಕರು)

೨. ಇತಿಹಾಸದ ವಿಕೃತಿಕರಣ ಮಾಡಿ ರಾವಣನನ್ನು ಖಲನಾಯಕ ಎಂದು ನಿಶ್ಚಯಿಸಲಾಗಿದೆ. ಪ್ರತಿ ವರ್ಷ ದಸರಾಗೆ ರಾವಣನ ಪ್ರತಿಮೆ ದಹಿಸಲಾಗುತ್ತದೆ. ಇಂತಹ ರಾಜನಿಗೆ ವ್ಯವಸ್ಥೆಯಿಂದ ಕಳಂಕಿತಗೊಳಿಸುವುದಕ್ಕಾಗಿ ಯಾವುದೇ ಕೊರತೆ ಇಟ್ಟಿಲ್ಲ. (ಇತಿಹಾಸದಲ್ಲಿ ರಾವಣನು ಮಾಡಿರುವ ಕ್ರೌರ್ಯದ ವರ್ಣನೆ ಇದೆ. ಅದನ್ನು ರಾವಣ ಪ್ರೇಮಿಗಳು ಅಧ್ಯಯನ ಮಾಡಬೇಕು ! – ಸಂಪಾದಕರು) ವಾಸ್ತವದಲ್ಲಿ ರಾವಣನಂತಹ ಮಹಾಪರಾಕ್ರಮಿ ಯೋಧನೇ ಆಗಿಲ್ಲ ಮತ್ತು ಇನ್ನು ಮುಂದೆ ಕೂಡ ಆಗುವುದಿಲ್ಲ. ರಾವಣ ದಹನಕ್ಕೆ ಯಾರಿಗೂ ಅನುಮತಿ ನೀಡಬಾರದು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಅಸುರರಿಗೆ ಜೈಕಾರ ಹೇಳುವವರು ನಾಳೆ ಜಿಹಾದಿ ಭಯೋತ್ಪಾದಕರಿಗೆ, ಮತಾಂಧರಿಗೆ, ಭ್ರಷ್ಟಾಚಾರಿಗಳನ್ನು ವೈಭವೀಕರಿಸಲು ಹಿಂದೆ ಮುಂದೆ ನೋಡಲಾರರು ! ಆದ್ದರಿಂದ ಇಂತಹವರ ವೈಚಾರಿಕ ಪ್ರತಿವಾದ ಮಾಡುವುದರ ಜೊತೆಗೆ ಅವರ ಮೇಲೆ ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !