2 ಸಾವಿರದ 450 ಮಸೀದಿಗಳಿಗೆ ಸಿಗುವ ದೇಣಿಗೆ ಬಗ್ಗೆಯೂ ತನಿಖೆ ನಡೆಸಲಿದೆ !
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‌ನಲ್ಲಿ ಧಾರ್ಮಿಕ ಸ್ಥಳಗಳಿಗೆ ಸಿಗುವ ದೇಣಿಗೆಗಳ ಬಗ್ಗೆ ತನಿಖೆ ಮಾಡಲಾಗುತ್ತದೆ. ಇದಕ್ಕಾಗಿ ಫ್ರಾನ್ಸ್ ದೇಶದಲ್ಲಿರುವ 2 ಸಾವಿರದ 450 ಮಸೀದಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಕೆಲವು ಧಾರ್ಮಿಕ ಸ್ಥಳಗಳಲ್ಲಿ ಶಿಕ್ಷಣದ ಹೆಸರಿನಲ್ಲಿ ಕಟ್ಟರವಾದಿ ವಿಚಾರಸರಣಿಗೆ ಪ್ರೋತ್ಸಾಹ ನೀಡಲಾಗುತ್ತಿದೆಯೆಂದು ಕಂಡುಬಂದಿದೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಫ್ರಾನ್ಸ್ ಜಿಹಾದಿ ಭಯೋತ್ಪಾದನೆಯನ್ನು ಹತ್ತಿಕ್ಕಲು ನಿರಾಶ್ರಿತರಾಗಿ ದೇಶದಲ್ಲಿ ಆಶ್ರಯ ಪಡೆದಿರುವ 20 ಸಾವಿರಕ್ಕೂ ಹೆಚ್ಚು ಮುಸ್ಲಿಂ ಕಟ್ಟರವಾದಿಗಳನ್ನು ಹೊರದಬ್ಬಲು ಪಟ್ಟಿ ಮಾಡಿದೆ. ಕೆಲ ದಿನಗಳ ಹಿಂದೆ ಮುಸ್ಲಿಂ ಯುವಕನೊಬ್ಬ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು.
1. ಫ್ರಾನ್ಸನ ಗೃಹ ಸಚಿವಾಲಯಕ್ಕೆ ಫ್ರಾನ್ಸ್‌ನಲ್ಲಿ ವಾಸಿಸುತ್ತಿರುವ ಜನರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಷ್ಯಾ ಮತ್ತು ಯುರೋಪ ರಾಷ್ಟ್ರಗಳಲ್ಲಿ ಆಶ್ರಯ ಪಡೆಯುವ ನೆಪದಲ್ಲಿ ದುರುಪಯೋಗಪಡಿಸಿಕೊಂಡು, ಮತಾಂಧತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅನಿಸುತ್ತಿದೆ. (ಭಾರತದಲ್ಲಿಯೂ ಇದಕ್ಕಿಂತ ಪ್ರತ್ಯೇಕವಾಗಿ ನಡೆಯುತ್ತಿದೆ ಎಂದೇನಿಲ್ಲ! – ಸಂಪಾದಕರು)
2. ಫ್ರಾನ್ಸ್ 2017 ಮತ್ತು 2021 ರ ನಡುವೆ 7 ಲಕ್ಷ ಜನರಿಗೆ ಆಶ್ರಯ ನೀಡಿತ್ತು. ಇದರಲ್ಲಿ ಪಾಕಿಸ್ತಾನ, ಸಿರಿಯಾ, ಲಿಬಿಯಾ, ಮೊರಾಕೊ ಮತ್ತು ಕ್ರೊಯೇಷಿಯಾದಿಂದ 6 ಲಕ್ಷ ಜನರು ಬಂದಿದ್ದರು.
ಫ್ರಾನ್ಸ್ ಈಗಾಗಲೇ ಶಾಲೆಗಳಲ್ಲಿ ‘ಅಬಯಾ’ವನ್ನು ನಿಷೇಧಿಸಿದೆ !
(‘ಅಬಯ’ ಎಂದರೆ ಮುಖವನ್ನು ಹೊರತುಪಡಿಸಿ ಇಡೀ ದೇಹವನ್ನು ಮುಚ್ಚುವ ಉಡುಪು)
ಫ್ರಾನ್ಸ್ 2 ತಿಂಗಳ ಹಿಂದೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ‘ಅಬಯಾ’ ಧರಿಸುವುದನ್ನು ನಿಷೇಧಿಸಿದೆ. ಅದಕ್ಕೂ ಮೊದಲು, 2004 ರಲ್ಲಿ ಹಿಜಾಬ್ (ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ) ಮತ್ತು 2014 ರಲ್ಲಿ ಬುರಖಾ ನಿಷೇಧಿಸಲಾಗಿದೆ.
ಸಂಪಾದಕೀಯ ನಿಲುವುಭಾರತವು ದೇಶದಲ್ಲಿರುವ ಪಾಕಿಸ್ತಾನ ಪ್ರೇಮಿಗಳನ್ನು ಹೊರಗೆ ದಬ್ಬುವ ನಿರ್ಣಯವನ್ನು ತೆಗೆದುಕೊಂಡರೆ, ಆ ಸಂಖ್ಯೆ ಕೋಟಿಗಳಲ್ಲಿರುವುದು ಇದರಲ್ಲಿ ಸಂಶಯವೇ ಇಲ್ಲ ! |