ಇಸ್ರೇಲ್ ನ ಪೊಲೀಸರಿಗೆ ಸಮವಸ್ತ್ರ ಪೂರೈಕೆ ಮಾಡುವ ಕೇರಳದ ಖಾಸಗಿ ಕಂಪನಿಯಿಂದ ನಿರ್ಧಾರ
ತಿರುವನಂತಪುರಂ (ಕೇರಳ) – ಕೇರಳದ ಕನ್ನೂರದಲ್ಲಿನ ಮರೆಯಂ ಅಪೆರಲ್ ಪ್ರೈವೇಟ್ ಲಿಮಿಟೆಡ್ ಈ ಖಾಸಗಿ ಕಂಪನಿ ಕಳೆದ ೮ ವರ್ಷಗಳಿಂದ ಇಸ್ರೇಲ್ ನ ಪೊಲೀಸರಿಗೆ ಸಮವಸ್ತ್ರ ಹೊಲೆದು ಕೊಡುವ ಕಾಂಟ್ರಾಕ್ಟ್ ಪಡೆಯುತ್ತಿದೆ. ಈಗ ಈ ಕಂಪನಿ, ‘ಇನ್ನು ಮುಂದೆ ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಪೂರೈಸುವ ಕಾಂಟ್ರಾಕ್ಟ್ ಪಡೆಯಲಾಗುವುದಿಲ್ಲ. ಎಲ್ಲಿಯವರೆಗೆ ಇಸ್ರೇಲ್ ಗಾಜಾ ಪಟ್ಟಿಯಲ್ಲಿನ ದಾಳಿ ನಿಲ್ಲಿಸುವುದಿಲ್ಲ, ಅಲ್ಲಿಯವರೆಗೆ ಹೊಸ ಗುತ್ತಿಗೆ ಪಡೆಯುವುದಿಲ್ಲ.’ ಎಂದು ಹೇಳಿದೆ. ಗಾಜಾದಲ್ಲಿನ ಆಸ್ಪತ್ರೆಯ ಮೇಲಿನ ದಾಳಿಯಿಂದ ಈ ಕಂಪನಿ ನಿರ್ಣಯ ತೆಗೆದುಕೊಂಡಿದೆ.
ಈ ಕಂಪನಿಯ ಮುಖ್ಯಸ್ಥ ಥಾಮಸ್ ಓಲಿಕಲ್ ಇವರು, ಹಮಾಸದಿಂದ ನಡೆಸಲಾದ ನಿರಪರಾಧಿಗಳ ಹತ್ಯೆ ಸ್ವೀಕರಿಸಲು ಸಾಧ್ಯವಿಲ್ಲ, ಅದೇ ರೀತಿ ಇಸ್ರೇಲ್ ನಿಂದ ಗಾಜಾದ ಮೇಲೆ ನಡೆಯುವ ಕ್ರಮ ಕೂಡ ಸ್ವೀಕರಿಸಲು ಸಾಧ್ಯವಿಲ್ಲ. ಇಲ್ಲಿಯ ವಿದ್ಯುತ್, ನೀರು ಮತ್ತು ಆಹಾರ ಪೂರೈಕೆ ತಡೆಯುವುದು, ಆಸ್ಪತ್ರೆಯ ಮೇಲೆ ಬಾಂಬ್ ಸ್ಪೋಟಿಸಿ ಜನರನ್ನು ಕೊಲ್ಲುವುದು ಸ್ವೀಕರಿಸಲಾಗದು. ಈ ಯುದ್ಧ ಮುಕ್ತಾಯಗೊಳ್ಳಬೇಕು ಮತ್ತು ಶಾಂತಿ ನಿರ್ಮಾಣವಾಗಬೇಕು ಎಂದು ನಮಗೆ ಅನಿಸುತ್ತದೆ. (‘ಈ ಯುದ್ಧ ಯಾರೂ ಆರಂಭಿಸಿದ್ದಾರೆ ಮತ್ತು ಏಕೆ ? ಇದರ ಯೋಚನೆ ಕೂಡ ಮಾಡುವ ಅವಶ್ಯಕತೆ ಇದೆ ! ಚಪ್ಪಾಳೆ ಒಂದೇ ಕೈಯಿಂದ ಬಾರಿಸಲಾಗದು, ಇದನ್ನು ತಿಳಿದುಕೊಳ್ಳಬೇಕು ! ಸಂಪಾದಕರು)
ಸಂಪಾದಕೀಯ ನಿಲುವುಜಗತ್ತಿನಲ್ಲಿ ಅನೇಕ ಕಂಪನಿಗಳು ಇರಬಹುದು, ಅವು ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಹೊಲೆಯುವ ಕಾಂಟ್ರಾಕ್ಟ್ ಪಡೆಯುವವರು ! |