ಮಣಿಪುರದಲ್ಲಿನ ಬಾಂಬ್ ಸ್ಪೋಟದ ಪ್ರಕರಣದಲ್ಲಿನ ಮುಖ್ಯ ಸೂತ್ರಧಾರ ಮಹಮ್ಮದ್ ಇಸ್ಲಾಉದ್ದೀನ್ ಖಾನ್ ಬಂಧನ

ಇಂಫಾಲ (ಮಣಿಪುರ) – ರಾಷ್ಟ್ರೀಯ ತನಿಖಾ ದಳದಿಂದ ಮಣಿಪುರ ಪೊಲೀಸರ ಸಹಾಯದಿಂದ ಮಹಮ್ಮದ್ ಇಸ್ಲಾಉದ್ದೀನ್ ಖಾನ್ ನನ್ನು ಬಂಧಿಸಿದ್ದಾರೆ. ಅವನು ಜೂನ್ ೨೧.೨೦೨೩ ರಂದು ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿನ ಕ್ವಾಕ್ಟಾ ಪ್ರದೇಶದಲ್ಲಿನ ಒಂದು ಕಾರಿನಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲಿ ಸಹಭಾಗಿದ್ದನು. ಅವನು ಈ ಪ್ರಕರಣದ ಮುಖ್ಯ ಸೂತ್ರಧಾರನಾಗಿದ್ದಾನೆ. ಈ ಪ್ರಕರಣದಲ್ಲಿ ಈ ಹಿಂದೆ ನೂರ್ ಹುಸೇನ್ ಇವನನ್ನು ಬಂಧಿಸಲಾಗಿದೆ. ಈ ಸ್ಫೋಟದಲ್ಲಿ ಮೂರು ಜನರು ಗಾಯಗೊಂಡಿದ್ದರು ಮತ್ತು ಮನೆಗಳು ಮತ್ತು ಸೇತುವೆಗಳಿಗೆ ಹಾನಿ ಉಂಟಾಗಿತ್ತು.

ಸಂಪಾದಕೀಯ ನಿಲುವು

ಮಣಿಪುರದಲ್ಲಿ ಕ್ರೈಸ್ತ ಮತ್ತು ಹಿಂದೂ ಸಮಾಜದಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಜಿಹಾದಿ ಮುಸಲ್ಮಾನರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ ? ಇದರ ಶೋಧ ನಡೆಸಬೇಕು !