ಭಾರತದಲ್ಲಿ ಪಾಕಿಸ್ತಾನಿಯರನ್ನು ನಿಷೇಧಿಸಬೇಕೆಂಬ ಮನವಿಯನ್ನು ನ್ಯಾಯಾಲಯದಿಂದ ತಿರಸ್ಕಾರ !
ಮುಂಬಯಿ: ‘ದೇಶಭಕ್ತರಾಗಲು ಪಾಕಿಸ್ತಾನದಲ್ಲಿರುವ ಅಥವಾ ಇತರ ಯಾವುದೇ ದೇಶದ ಜನರ ಮೇಲೆ ದ್ವೇಷ ಸಾಧಿಸುವ ಅಗತ್ಯವಿಲ್ಲ’ ಪಾಕಿಸ್ತಾನಿ ಕಲಾವಿದರು ಮತ್ತು ಆಟಗಾರರನ್ನು ವಿರೋಧಿಸುವುದು ಎಂದರೆ ದೇಶಭಕ್ತಿ ಎಂದಲ್ಲ , ಎನ್ನುವ ಶಬ್ದಗಳಲ್ಲಿ ಮುಂಬಯಿ ಉಚ್ಚನ್ಯಾಯಾಲಯವು ಭಾರತದಲ್ಲಿ ಪಾಕಿಸ್ತಾನಿಯವರ ಮೇಲೆ ನಿರ್ಬಂಧ ಹೇರುವ ಬೇಡಿಕೆ ಅರ್ಜಿಯನ್ನು ವಜಾಗೊಳಿಸುವಾಗ, ಟಿಪ್ಪಣಿ ಮಾಡಿದೆ.
ನ್ಯಾಯಾಲಯವು ಮುಂದುವರಿದು, ‘ಸಧ್ಯ ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ ಪಂದ್ಯದ ಸ್ಪರ್ಧೆಯಲ್ಲಿ ಪಾಕಿಸ್ತಾನಿ ಆಟಗಾರರೂ ಆಡುತ್ತಿದ್ದಾರೆ. ಭಾರತೀಯ ಸಂವಿಧಾನ ಕಲಂ 51 ಅಡಿಯಲ್ಲಿ ‘ಅಂತರರಾಷ್ಟ್ರೀಯ ಸ್ತರದಲ್ಲಿ ಶಾಂತಿ, ಸೌಹಾರ್ದಪೂರ್ಣ ವಾತಾವರಣ ಮತ್ತು ಒಗ್ಗಟ್ಟು ಇರಬೇಕು’, ಈ ಉದ್ದೇಶದಿಂದ ಭಾರತ ಸರಕಾರದಿಂದ ಸಕಾರಾತ್ಮಕ ಹೆಜ್ಜೆಗಳನ್ನು ಇಡಲಾಗುತ್ತಿದೆ.
ಮನವಿಯಲ್ಲಿ ಇದನ್ನು ಕೋರಲಾಗಿತ್ತು !
‘ದೇಶದಲ್ಲಿರುವ ಎಲ್ಲ ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಪಾಕಿಸ್ತಾನದಲ್ಲಿರುವ ಜನರೊಂದಿಗೆ ಕೆಲಸ ಮಾಡಲು ಅಥವಾ ಅವರ ಸೇವೆಯನ್ನು ಪಡೆದುಕೊಳ್ಳಲು ನಿರ್ಬಂಧಿಸಬೇಕು. ಪಾಕಿಸ್ತಾನಿ ಕಲಾವಿದರಿಗೆ ವೀಸಾ ನೀಡಬಾರದು. ಈ ರೀತಿ ಮಾಡದೇ ಇರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಚಿತ್ರರಂಗದ ಫೈಜ್ ಅನ್ವರ್ ಖುರೇಷಿ ಆಗ್ರಹಿಸಿದ್ದರು. ‘ವಿಶ್ವ ಕಪ್ ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಗಾಯಕರು ಮತ್ತು ಕಲಾವಿದರನ್ನು ಆಹ್ವಾನಿಸಲಾಗುತ್ತದೆ ಮತ್ತು ಇದರಿಂದ ಭಾರತದಲ್ಲಿರುವ ಕಲಾವಿಧರ ಉದ್ಯೋಗಗಳ ಮೇಲೆ ಪರಿಣಾಮ ಆಗುತ್ತದೆ’, ಎಂದು ಖುರೇಷಿ ಮನವಿಯಲ್ಲಿ ತಿಳಿಸಿದ್ದರು.
ಸಂಪಾದಕೀಯ ನಿಲುವು‘ಜಿಹಾದಿ ಪಾಕಿಸ್ತಾನದ ಕಿತಾಪತಿಯ ಮೇಲೆ ಅಂಕುಶ ತರಲು ಭಾರತೀಯ ಸೈನಿಕರು ಕಣ್ಣಿನಲ್ಲಿ ಎಣ್ಣೆ ಹಾಕಿಕೊಂಡು ಗಡಿಯಲ್ಲಿ ರಕ್ಷಣೆಯನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಕಲೆಗೆ ಪ್ರೋತ್ಸಾಹ ಸಿಗಬೇಕು ಎಂದು ಪಾಕಿಸ್ತಾನಿ ಕಲಾವಿದರನ್ನು ಇಲ್ಲಿಗೆ ಕರೆಸುವುದು ಎಷ್ಟರಮಟ್ಟಿಗೆ ಸರಿಯಾಗಿದೆ?’ ಎನ್ನುವ ಪ್ರಶ್ನೆ ಭಾರತೀಯ ಜನತೆಯ ಮನಸ್ಸಿನಲ್ಲಿದೆ. ಇದಕ್ಕೆ ಕೇಂದ್ರ ಸರಕಾರವು ನಿರ್ದಿಷ್ಟ ಮತ್ತು ಸುಸ್ಪಷ್ಟ ನಿಲುವನ್ನು ತೆಗೆದುಕೊಂಡು ಜನತೆಯ ಗೊಂದಲವನ್ನು ದೂರಗೊಳಿಸಬೇಕು ! |