ಕರ್ಣಾವತಿಯ ಗರಬಾ ಮಂಟಪಕ್ಕೆ ಹಿಂದೂ ವೇಷಭೂಷಣ ಧರಿಸಿ ಮುಸಲ್ಮಾನ ಯುವಕ ನುಸುಳಿದ !

ಬಜರಂಗದಳದ ಕಾರ್ಯಕರ್ತರು ಹೊರಗೆ ಹಾಕಿದರು !

ಕರ್ಣಾವತಿ (ಗುಜರಾತ್) – ಇಲ್ಲಿನ ವೈ.ಎಂ.ಸಿ.ಎ. ಕ್ಲಬ್‌ನ ಗರಬಾ ಮಂಟಪದಲ್ಲಿ ನುಸುಳಿದ್ದ ಮುಸ್ಲಿಂ ಯುವಕನನ್ನು ಹಿಂದುತ್ವನಿಷ್ಠ ಸಂಘಟನೆಗಳು ಹಿಡಿದು ಹೊರಗೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.

ಈ ಮುಸಲ್ಮಾನ ಯುವಕ ಹಿಂದೂವಿನಂತೆ ವೇಷಭೂಷಣಗಳನ್ನು ಧರಿಸಿ ಇಲ್ಲಿ ನುಸುಳಿದ್ದಾನೆ. ಇಲ್ಲಿ ಉಪಸ್ಥಿತರಿದ್ದ ಬಜರಂಗದಳದ ಕಾರ್ಯಕರ್ತರಿಗೆ ಅವನ ಬಗ್ಗೆ ಸಂದೇಹಉಂಟಾಯಿತು ಮತ್ತು ಅವರು ಅವನನ್ನು ತಡೆದು ವಿಚಾರಣೆ ಆರಂಭಿಸಿದರು. ಈ ವೇಳೆ ಆತನ ಆಧಾರ್ ಕಾರ್ಡ್ ಪರಿಶೀಲಿಸಲಾಯಿತು. ಆತ ಮುಸಲ್ಮಾನ ಆಗಿದ್ದಾನೆ ಎಂಬುದು ಕಂಡು ಬಂದಿತು. ‘ನೀವು ಹಿಂದೂ ದೇವರುಗಳ ಮೇಲೆ ವಿಶ್ವಾಸ ಇಡುವುದಿಲ್ಲ. ಹೀಗಿರುವಾಗ ನೀನು ಇಲ್ಲಿಗೆ ಯಾಕೆ ಬಂದಿದ್ದೀಯಾ ? ಇದು ಡಿಸ್ಕೋ ಸ್ಥಳವಲ್ಲ. ಇನ್ನೊಮ್ಮೆ ಇಲ್ಲಿಗೆ ಬರಬೇಡ’ ಎಂದು ಅವನನ್ನು ಮಂಟಪದಿಂದ ಹೊರಗೆ ಹಾಕಿದರು.

ಸಂಪಾದಕೀಯ ನಿಲುವು

ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಈ ರೀತಿ ಗುರುತನ್ನು ಮರೆಮಾಚಿ ನುಸುಳುವವರ ವಿಷಯದಲ್ಲಿ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಬೇಕು !

‘ಲವ್ ಜಿಹಾದ್’ ಮಾಡುವ ಸಲುವಾಗಿಯೇ ಈ ರೀತಿ ನುಸುಳುತ್ತಾರೆ, ಎನ್ನುವುದನ್ನು ಗಮನಿಸಬೇಕಾಗಿದೆ !