ಕೊಲಕಾತಾ – ನಗರದಲ್ಲಿ ಹೊಸ ನಗರಿಯಲ್ಲಿ ಶ್ರೀದುರ್ಗಾ ಪೂಜೆಯ ಆಯೋಜನೆ ಮಾಡುವವರು ಪೂಜೆಯ ಪರಂಪರೆಗೆ ಧಕ್ಕೆ ತರುತ್ತಾ ಮಹಾಷ್ಟಮಿಗೆ ‘ಕುಮಾರಿ ಪೂಜೆ’ಗಾಗಿ ಶ್ರೀ ದುರ್ಗಾದೇವಿ ಎಂದು ನಫೀಸಾ ಎಂಬ ೮ ವರ್ಷದ ಮುಸಲ್ಮಾನ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ. ಧಾರ್ಮಿಕ ಬಾಂಧವ್ಯದ ಸಂದೇಶ ನೀಡುವ ದೃಷ್ಟಿಯಿಂದ ಈ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ಹೇಳಿದರು. (ಮುಸಲ್ಮಾನ ಅಥವಾ ಕ್ರೈಸ್ತರ ಧಾರ್ಮಿಕ ಕಾರ್ಯದಲ್ಲಿ ಹಿಂದುಗಳನ್ನು ಎಂದಾದರೂ ಸೇರಿಸಿಕೊಳ್ಳುವುದು ಕೇಳಿದ್ದೇವೆಯೇ ? – ಸಂಪಾದಕರು)
೧. ಮಹಾಷ್ಟಮಿಗೆ ದುರ್ಗಾದೇವಿ ಎಂದು ಬ್ರಾಹ್ಮಣ ಕುಮಾರಿಯ ಆಯ್ಕೆ ಮಾಡುವ ಪದ್ಧತಿ ಪ್ರಚಲಿತವಾಗಿದೆ. ಧಾರ್ಮಿಕ ಬಾಂಧವ್ಯ ಮತ್ತು ಸರ್ವಧರ್ಮ ಸಮಾವೇಶಕ್ಕೆ ಚಾಲನೆ ನೀಡುವ ಉದ್ದೇಶದಿಂದ ಮುಸಲ್ಮಾನ ಕುಮಾರಿಯ ಆಯ್ಕೆ ಮಾಡಲಾಗಿರುವುದು ‘ಮೃಟ್ಟಿಕ ಕ್ಲಬ್’ನ ಮಹಿಳಾ ಸಮಿತಿಯಿಂದ ಹೇಳಲಾಗಿದೆ.
೨. ಒಂದು ಶತಕಗಳ ಹಿಂದೆ ಸ್ವಾಮಿ ವಿವೇಕಾನಂದ ಇವರು ಮಾಡಿರುವ ಕೃತಿಯಿಂದ ಪ್ರೇರಣೆ ಪಡೆದು ಇದನ್ನು ನಿಶ್ಚಯಿಸಲಾಗಿದೆ ಎಂದು ಆಯೋಜಕರು ಹೇಳಿದರು. ೧೮೯೮ ರಲ್ಲಿ ಪ್ರವಾಸದಲ್ಲಿರುವಾಗ ಸ್ವಾಮಿ ವಿವೇಕಾನಂದ ಇವರು ಮುಸಲ್ಮಾನ ನಾವಿಕನ ನಾಲ್ಕು ವರ್ಷದ ಮಗಳಿಗೆ ‘ಕುಮಾರಿಕ ಪೂಜೆ’ ಮಾಡಿದ್ದರು ಮತ್ತು ಇದು ವಿಧಿಯ ಒಂದು ಭಾಗ ಎಂದು ಆಕೆಗೆ ನಮಸ್ಕಾರ ಮಾಡಿ ಶ್ರೀ ದುರ್ಗಾದೇವಿಯ ಆಶೀರ್ವಾದ ಪಡೆದಿದ್ದರು, ಈ ಘಟನೆಯ ಬಗ್ಗೆ ಆಯೋಜಕರು ಈ ಸಮಯದಲ್ಲಿ ಉಲ್ಲೇಖ ಮಾಡಿದರು. (ಗರ್ವ ಸೇ ಕಹೊ ಹಮ್ ಹಿಂದೂ ಹೇ, ಈ ಘೋಷಣೆ ಕೂಡ ಸ್ವಾಮಿ ವಿವೇಕಾನಂದರು ನೀಡಿದ್ದರು, ಅದರ ಬಗ್ಗೆ ಆಯೋಜಕರಿಗೆ ಏನಾದರೂ ಹೇಳುವುದಿದೆಯೇ ? – ಸಂಪಾದಕರು)
ಸಂಪಾದಕೀಯ ನಿಲುವುಸರ್ವಧರ್ಮಸಮಭಾವದಿಂದ ಕುರುಡಾಗಿರುವ ಹಿಂದೂ ಧಾರ್ಮಿಕ ಬಾಂಧವ್ಯ ಕಾಪಾಡುವುದಕ್ಕಾಗಿ ಇಂತಹ ಕೃತಿಗಳು ಮಾಡುತ್ತಾರೆ. ಇದು ನಾಚಿಕೆಗೇಡು ! ಹಿಂದುಗಳ ಅತಿಯಾದ ಸಹಿಷ್ಣು ವೃತ್ತಿಯಿಂದ ಅವರ ಘಾತವಾಗಿರುವ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಇರುವಾಗಲೂ ಕೂಡ ಅವರು ಜಾಣರಾಗುವುದಿಲ್ಲ, ಇದೇ ಖೇದಕರವಾಗಿದೆ. ಹಿಂದುಗಳ ಅತಿಯಾದ ಸಹಿಷ್ಣುತೆಯ ಅನೇಕ ಉದಾಹರಣೆಗಳು ಇರುವಾಗಲೂ ಕೂಡ ಜಾತ್ಯತೀತರು ಅವರಿಗೆ ‘ಹಿಂಸಕರು’ ಮತ್ತು ‘ಅಸಹಿಷ್ಣು’ ಎಂದು ವ್ಯಂಗ್ಯ ಮಾಡುತ್ತಾರೆ, ಇದನ್ನು ತಿಳಿದುಕೊಳ್ಳಿ. |