ಗಾಜಾ ಪಟ್ಟಿಯ ಮೇಲಿನ ದಾಳಿಯ ಕುರಿತು ಇರಾನ್‌ನಿಂದ ಇಸ್ರೇಲ್‌ಗೆ ಬೆದರಿಕೆ !
ತೆಹರಾನ್ (ಇರಾನ್) – ಒಂದು ವೇಳೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿ ಮುಂದುವರಿದರೆ, ಜಗತ್ತಿನಾದ್ಯಂತದ ಮುಸ್ಲಿಮರು ಮತ್ತು ಇರಾನ್ ಸೇನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿ ಬೆದರಿಕೆ ಹಾಕಿದ್ದಾರೆ.
ಇದಕ್ಕೂ ಮೊದಲು, ಇರಾನ್‌ನ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಇವರು, ಇಸ್ರೇಲ್‌ಗೆ ಗಾಜಾ ಪಟ್ಟಿಯ ನೆಲದ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಒಂದು ವೇಳೆ ಇಸ್ರೇಲ್ ಹೀಗೆ ಮಾಡಿದರೆ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಮುಂಬರುವ ಕೆಲವೇ ಗಂಟೆಗಳಲ್ಲಿ, ಇರಾನ್‌ನಿಂದ ವ್ಯಾಪಕ ಪ್ರಮಾಣದಲ್ಲಿ ಕ್ರಮ ನಡೆಯಬಹುದು. ನಮಗಾಗಿ ಎಲ್ಲಾ ಬಾಗಿಲುಗಳು ತೆರೆದಿವೆ. ಗಾಜಾ ಪಟ್ಟಿಯ ಜನರ ವಿರುದ್ಧದ ಈ ಯುದ್ಧಾಪರಾಧದ ಸಂದರ್ಭದಲ್ಲಿ ನಾವು ಉದಾಸೀನರಾಗಲು ಸಾಧ್ಯವಿಲ್ಲ. ಇರಾನ್‌ನ ಸೇನೆಯು ಹೆಚ್ಚು ಕಾಲದ ವರೆಗೆ ಹೋರಾಡಬಲ್ಲದು ಎಂದು ಬೇದರಿಕೆ ನೀಡಿದ್ದಾರೆ. ಇರಾನನಿಂದ ಹೀಗೆ ಹೇಳಲಾಗಿದ್ದರೂ,
ಇರಾನ್ ನಿಖರವಾಗಿ ಯಾವ ಕ್ರಮವನ್ನು ಕೈಕೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.
ಸಂಪಾದಕೀಯ ನಿಲುವುಮುಸ್ಲಿಮರಿಗಾಗಿ ಜಗತ್ತಿನಾದ್ಯಂತವಿರುವ ದೇಶಗಳು ಒಗ್ಗೂಡುತ್ತವೆ, ಆದರೆ ಹಿಂದೂಗಳಿಗಾಗಿ ಭಾರತದ ಹಿಂದೂಗಳು ಸಹ ಎಂದಿಗೂ ಒಗ್ಗೂಡುವುದಿಲ್ಲ ! |