‘ಆಟ ಇದು ದೇಶಗಳಲ್ಲಿನ ಸಂಘಟಿತಗೊಳಿಸುವ ಶಕ್ತಿ ಆಗಬೇಕಂತೆ’ ! – ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ವೀಕ್ಷಕರು ‘ಜೈ ಶ್ರೀರಾಮ’ ಎಂದು ಘೋಷಣೆ ನೀಡಿದ್ದರಿಂದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಇವರು ಕೆಂಡಾಮಂಡಲಾ !

ಕರ್ಣಾವತಿ (ಗುಜರಾತ) – ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ ೧೪ ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ವೀಕ್ಷಕರಿಂದ ‘ಜೈ ಶ್ರೀರಾಮ’ ಎಂದು ಘೋಷಣೆ ನೀಡಲಾಗಿತ್ತು. ಈ ಪಂದ್ಯದಲ್ಲಿ ಭಾರತ ವಿಜಯ ಸಾಧಿಸಿತ್ತು. ‘ಜೈ ಶ್ರೀ ರಾಮ’ನ ಘೋಷಣೆಯಿಂದ ತಮಿಳುನಾಡಿನ ದ್ರವಿಡ (ದ್ರವಿಡ ಮುನ್ನೆತ್ರ ಕಳಘಂ – ದ್ರವಿಡ ಪ್ರಗತಿ ಸಂಘ) ಸರಕಾರದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಟೀಕಿಸಿದ್ದಾರೆ. ಅವರು ಟ್ವೀಟ್ ಮಾಡಿ, ಭಾರತ ಕ್ರೀಡಾ ಮನೋಭಾವ ಮತ್ತು ಆದರಾತಿಥ್ಯಕ್ಕಾಗಿ ಪ್ರಸಿದ್ಧವಾಗಿದೆ; ಆದರೆ ಕರ್ಣಾವತಿಯಲ್ಲಿ ನರೇಂದ್ರ ಮೋದಿ ಸ್ಟೆಡಿಯಂನಲ್ಲಿ ಪಾಕಿಸ್ತಾನದ ಆಟಗಾರರ ಜೊತೆಗಿನ ವರ್ತನೆ ಸ್ವೀಕರಿಸಲು ಸಾಧ್ಯವಿಲ್ಲ. ಅದು ಅತ್ಯಂತ ಕೆಳಮಟ್ಟದ್ದಾಗಿತ್ತು. ಆಟ ಎರಡು ದೇಶಗಳನ್ನು ಸಂಘಟಿತಗೊಳಿಸುವ ಶಕ್ತಿ ಆಗಬೇಕು. ಹಾಗೂ ನಿಜವಾದ ಬಾಂಧವ್ಯಕ್ಕೆ ಪ್ರೋತ್ಸಾಹ ನೀಡಬೇಕು. ಆಟದ ದ್ವೇಷ ಪಸರಿಸವ ಶಸ್ತ್ರದ ಹಾಗೆ ಬಳಕೆ ನಿಂದನಿಯವಾಗಿದೆ. (ಭಾರತದ ಜೊತೆ ಆಡುವಾಗ ಧರ್ಮಯುದ್ಧದ ರೀತಿಯಲ್ಲಿ ಆಡುವ ಪಾಕಿಸ್ತಾನದ ಕ್ರಿಕೆಟ್ ಆಟಗಾರರಿಗೆ ಸ್ಟಾಲಿನ್ ಹೀಗೆ ಸಲಹೆ ಏಕೆ ನೀಡುವುದಿಲ್ಲ ? – ಸಂಪಾದಕರು)

ಉದಯ ನಿಧಿ ಸ್ಟಾಲಿನ್ ಈ ಸಮಯದಲ್ಲಿ ಏಕೆ ಮೌನ ವಹಿಸಿದ್ದರು ?

ವಿಶ್ವ ಕಪ್ ಕ್ರಿಕೆಟ್ ಸ್ಪರ್ಧೆಯ ಸಮಯದಲ್ಲಿ ಶ್ರೀಲಂಕಾದ ಜೊತೆಯ ಪಂದ್ಯದಲ್ಲಿ ಪಾಕಿಸ್ತಾನ ವಿಜಯ ಗಳಿಸಿದ ನಂತರ ರಿಜ್ವಾನ್ ಆಟಗಾರನು ಮೈದಾನದಲ್ಲಿ ನಮಾಜ ಮಾಡಿದ್ದನು. ಬೇರೆ ಪಾಕಿಸ್ತಾನಿ ಆಟಗಾರರು ಹೀಗೆ ಮಾಡುತ್ತಾರೆ, ಆದರೆ ರಿಜ್ವಾನ್ ಇವನು ಈ ವಿಜಯ ಗಾಜಾ ಪಟ್ಟಿಯಲ್ಲಿನ ಮುಸಲ್ಮಾನರಿಗೆ ಅರ್ಪಿಸಿದನು. (ರಿಜ್ವಾನ್ ಇವನ ಈ ಕೃತ್ಯ ಆಟದ ಜೊತೆಗೆ ಏನು ಸಂಬಂಧ ? ಎಂದು ಸ್ಟಾಲಿನ್ ಇವರು ಹೇಗೆ ಏಕೆ ಪ್ರಶ್ನೆ ಕೇಳಲಿಲ್ಲ ? – ಸಂಪಾದಕರು)

ಭಾರತದಲ್ಲಿನ ಇಸ್ರೇಲಿನ ರಾಯಭಾರಿಗಳಿಂದ ಪಾಕಿಸ್ತಾನದ ಟೀಕೆ !

ಭಾರತದಲ್ಲಿನ ಇಸ್ರೇಲಿನ ರಾಯಭಾರಿ ನಾಓರ ಗಿಲೋನ್ ಇವರು ಭಾರತದಿಂದ ಪಾಕಿಸ್ತಾನವನ್ನು ಸೋಲಿಸಿರುವುದರ ಬಗ್ಗೆ ಮಾಡಿರುವ ಟ್ವಿಟ್ ನಲ್ಲಿ, ‘ಭಾರತದ ವಿಜಯದಿಂದ ನಾವು ಆನಂದಿತರಾಗಿದ್ದೇವೆ ಮತ್ತು ಪಾಕಿಸ್ತಾನದ ತಂಡ ಅದರ ವಿಜಯ ಹಮಾಸದ ಭಯೋತ್ಪಾದಕರಿಗೆ ಸಮರ್ಪಿಸಲು ಸಾಧ್ಯವಾಗಲಿಲ್ಲ.’ (ಇಸ್ರೇಲಿನ ರಾಯಭಾರಿಗೆ ಏನು ಅನಿಸುತ್ತದೆ ಅದರ ಬಗ್ಗೆ ಸ್ಟಾಲಿನ್ ಮಾತನಾಡುವರೇ? – ಸಂಪಾದಕರು)

ಸಂಪಾದಕೀಯ ನಿಲುವು

‘ಜೈ ಶ್ರೀರಾಮ’ನ ಘೋಷಣೆ ವೀಕ್ಷಕರು ಉತ್ಸಾಹಭರಿತವಾಗಿ ನೀಡಿದ್ದಾರೆ. ಭಾರತದಲ್ಲಿನ ನಾಗರೀಕರಿಗೆ ‘ಜೈ ಶ್ರೀರಾಮ’ನ ಘೋಷಣೆ ಎಲ್ಲಿ ನೀಡಬೇಕು ಮತ್ತು ನೀಡಬಾರದು ಎಂದು ಹೀಗೆ ಯಾವ ಕಾನೂನು ಇಲ್ಲ !

‘ದೇಶದಲ್ಲಿನ ಹಿಂದುಗಳ ದೇವಸ್ಥಾನಗಳ ಮೇಲೆ, ಧಾರ್ಮಿಕ ಮೆರವಣಿಗೆಗಳ ಮೇಲೆ ‘ಅಲ್ಲಾಹು ಅಕ್ಬರ್’ (ಅಲ್ಲ ಮಹಾನನಾಗಿದ್ದಾನೆ) ಇಂತಹ ಘೋಷಣೆ ನೀಡುತ್ತಾ ಮಸೀದಿಯಿಂದ ದಾಳಿಗಳು ನಡೆಯುತ್ತವೆ, ಆಗ ಸ್ಟಾಲಿನ್ ಅಂತಹ ಹಿಂದೂದ್ವೇಷಿ ರಾಜಕೀಯ ನಾಯಕರು ಬಾಯಿ ತೆರೆಯುವುದಿಲ್ಲ ಮತ್ತು ಕಾನೂನಿನ ರೀತಿಯಲ್ಲಿ ಹಿಂದುಗಳು ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡಿದರೆ ಆಗ ಅವರಿಗೆ ಹೊಟ್ಟೆಯುರಿ ಆರಂಭವಾಗುತ್ತದೆ.

ಆಟದ ಮೂಲಕ ಭಾರತ ಮತ್ತು ಪಾಕಿಸ್ತಾನ ಇವರನ್ನು ಎಂದಿಗೂ ಸಂಘಟಿತ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಈ ಪ್ರಯೋಗ ಭಾರತ ಮಾಡಿತ್ತು; ಆದರೆ ಅದರ ಬದಲಿಗೆ ಭಾರತಕ್ಕೆ ಭಯೋತ್ಪಾದಕರ ದಾಳಿಯನ್ನು ಎದುರಿಸಬೇಕಾಯಿತು. ಪಾಕಿಸ್ತಾನಿಗಳು ಭಾರತದ ಜೊತೆಗೆ ಆಡುವಾಗ ಅವರನ್ನು ‘ಜಿಹಾದ್’ ಎಂದೇ ನೋಡುತ್ತಾರೆ. ಇದರ ಬಗ್ಗೆ ಸ್ಟಾಲಿನ್ ಏಕೆ ಮಾತನಾಡುವುದಿಲ್ಲ ?