ದಾಳಿಯ ಸಮಯದಲ್ಲಿ ಬಾಗಿಲು ತೆರೆಯಲು ನಿರಾಕರಣೆ !
ಮುಂಬಯಿ – ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.ನ) ಸಂದೇಹಾಸ್ಪದ ಸದಸ್ಯ ವಾಹಿದ ಶೇಖನ ವಿಕ್ರೋಳಿ ಇಲ್ಲಿಯ ಮನೆಯ ಮೇಲೆ ಅಕ್ಟೋಬರ್ ೧೧ ರಂದು ಬೆಳಗ್ಗಿನ ಜಾವ ೫ ಗಂಟೆಯ ಸುಮಾರಿಗೆ ದಾಳಿ ನಡೆಸಿತು. ಈ ಸಮಯದಲ್ಲಿ ಶೇಖ ಅವರ ಕುಟುಂಬದವರು ಬಾಗುಲು ತೆರೆಯಲು ಸ್ಪಷ್ಟವಾಗಿ ನಿರಾಕರಿಸಿದರು. ಆದ್ದರಿಂದ ‘ಎನ್.ಐ’ಎ.’ನ ತಂಡ ೩ ಗಂಟೆಗಳ ಕಾಲ ಬಾಗಿಲು ಹೊರಗೆ ಕಾದು ನಿಂತಿತ್ತು. ವಾಹಿದ ಶೇಖನನ್ನು ೨೦೦೭ ನಡೆದಿರುವ ರೈಲು ಬಾಂಬ್ ಸ್ಪೋಟೋದ ಪ್ರಕರಣದಲ್ಲಿ ಬಂಧಿಸಲಾಗಿತ್ತು; ಆದರೆ ೨೦೧೫ ರಲ್ಲಿ ಅವನಿಗೆ ದೃಢವಾದ ಸಾಕ್ಷಿಯ ಕೊರತೆಯಿಂದಾಗಿ ಬಿಡುಗಡೆ ಆಗಿತ್ತು. ಈ ಸಮಯದಲ್ಲಿ ಶೇಖ ಇವನು ‘ಎನ್.ಐ’ಎ.’ನ ಅಧಿಕಾರಿಯ ಬಳಿ ದಾಳಿಯ ನೋಟಿಸ್ ತೋರಿಸಲಿಲ್ಲ ಎಂದು ಆರೋಪಿಸಿದ್ದಾನೆ.
ಸಂಪಾದಕೀಯ ನಿಲುವು೩ ಗಂಟೆ ಬಾಗಿಲು ತೆರೆಯದೆ ಇದ್ದರೆ ಪೊಲೀಸರು ಬಾಗಿಲು ಏಕೆ ಮುರಿಯಲಿಲ್ಲ ? |