ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಭಾವಪೂರ್ಣ ಪ್ರಾರ್ಥನೆಯಿಂದ ಬಂದ ಅನುಭೂತಿ ಮತ್ತು ಅವರಲ್ಲಿನ ದೇವಿತತ್ತ್ವದಿಂದ ಜನರಿಗೆ ಬಂದ ಅನುಭವ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

೧. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ೫೧ ನೇ ಹುಟ್ಟುಹಬ್ಬದಂದು ಮಹರ್ಷಿಗಳು ತಿರುಪತಿಗೆ ಹೋಗಲು ಹೇಳುವುದು

ಶ್ರೀ. ವಾಲ್ಮೀಕ ಭುಕನ

೧ ಅ. ತಿರುಪತಿ ದೇವರ ದರ್ಶನಕ್ಕಾಗಿ ೫ ಟಿಕೇಟುಗಳು ಸಿಗದೇ ಕೇವಲ ಎರಡೇ ಟಿಕೇಟು ಸಿಗುವುದು : ‘೨೦೨೧ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೧ ನೇ ಹುಟ್ಟುಹಬ್ಬದ ದಿನ ಮಹರ್ಷಿಗಳು ನಮಗೆಲ್ಲರಿಗೂ, ಅಂದರೆ ಐದು ಜನಕ್ಕೂ ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಪಡೆಯಲು ಹೇಳಿದರು. ಆಗ ನಮಗೆ ತಿರುಪತಿ ದೇವರ ದರ್ಶನಕ್ಕಾಗಿ ಎರಡೇ ಟಿಕೇಟುಗಳು ಸಿಕ್ಕಿತು ಮತ್ತು ಮೂರು ಸಾಧಕರಿಗೆ ಟಿಕೇಟು ಸಿಗಲಿಲ್ಲ. ಬೆಳಗ್ಗೆ ಬೇಗನೆ ದರ್ಶನ ಪಡೆಯಬೇಕಾಗಿರುವುದರಿಂದ ನಾವು ಹಿಂದಿನ ದಿನವೇ ಅಲ್ಲಿ ನಿವಾಸಕ್ಕೆ ಹೋಗಿದ್ದೆವು. ರಾತ್ರಿ ಮಲಗುವ ಮುನ್ನ ನಾವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಕಾಕು ಮತ್ತು ಶ್ರೀ. ವಿನಾಯಕ ಶಾನಭಾಗ ಇವರಿಬ್ಬರಿಗೆ ದರ್ಶನಕ್ಕೆ ಹೋಗುವ ಸಿದ್ಧತೆಯನ್ನು ಮಾಡಿದೆವು.

೧ ಆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ರಾತ್ರಿ ಮಲಗುವ ಮುನ್ನ ದೇವರಿಗೆ ಪ್ರಾರ್ಥನೆ ಮಾಡುವುದು ತದನಂತರ ಕೇವಲ ಅರ್ಧ ಗಂಟೆಯಲ್ಲೇ ‘ಇನ್ನು ಮೂರು ಟಿಕೇಟು ಸಿಕ್ಕಿದ್ದು ನೀವು ದರ್ಶನ ಪಡೆಯಲು ಬರಬಹುದು’, ಎಂಬ ಸಂದೇಶ ಸಿಗುವುದು : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ರಾತ್ರಿ ಮಲಗುವ ಮುನ್ನ ದೇವರಿಗೆ ಪ್ರಾರ್ಥನೆ ಮಾಡಿದರು, ‘ಈ ಮೂರು ಸಾಧಕರು ಮನೆ ಬಿಟ್ಟು ನಿನ್ನ ಸೇವೆಗಾಗಿಯೇ ಬಂದಿದ್ದಾರೆ. ಅವರು ನಿನ್ನ ಸೇವೆಯನ್ನು ನಿಃಸ್ವಾರ್ಥ ಭಾವದಿಂದ ಮಾಡುತ್ತಿದ್ದಾರೆ. ಆದುದರಿಂದ ‘ಅವರಿಗೆ ದರ್ಶನ ಕೊಡುವುದೋ ಬೇಡವೋ, ಎಂಬುದನ್ನು ನೀನೇ ನಿರ್ಧರಿಸು.’ ನಂತರ ಶ್ರೀಚಿತ್‌ಶಕ್ತಿ (ಸೌ.) ಕಾಕು ಮಲಗಿದರು ಮತ್ತು ಕೇವಲ ಅರ್ಧ ಗಂಟೆಯಲ್ಲೇ ನಮಗೆ ಸಂದೇಶ ಬಂದಿತು, ‘ನಿಮಗೆ ಇನ್ನು ಮೂರು ಟಿಕೇಟು ಸಿಕ್ಕಿವೆ. ಆದುದರಿಂದ ನೀವು ದರ್ಶನಕ್ಕೆ ಬರಬಹುದು !’

೨. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಜಪವನ್ನು ಮಾಡುವುದನ್ನು ನೋಡಿ ಸ್ತ್ರೀಯರು ‘ಅವರು ದೇವಿಯಂತೆ ಕಾಣಿಸಿದ್ದ ಅವರ ದರ್ಶನಕ್ಕೆ ಬರುವುದು

ತಿರುಪತಿಯ ದರ್ಶನ ಪಡೆದ ನಂತರ ಪಕ್ಕದಲ್ಲಿರುವ ವರಾಹಸ್ವಾಮಿಯ ದರ್ಶನ ಮಾಡಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ನಾವು ಹೊರಗೆ ಮೆಟ್ಟಿಲಿನ ಮೇಲೆ ಕುಳಿತಿದ್ದೆವು. ಶ್ರೀಚಿತ್‌ಶಕ್ತಿ (ಸೌ.) ಕಾಕು ಅಲ್ಲಿ ಕಣ್ಣು ಮುಚ್ಚಿ ನಾಮಜಪ ಮಾಡುತ್ತಿದ್ದರು. ನಾವು ಕುಳಿತಿದ್ದ ಆ ಸ್ಥಳದಿಂದ ಬಹಳಷ್ಟು ಜನರು ಹೋಗುತ್ತಿದ್ದರು. ಅವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಕಡೆ ನೋಡುತ್ತಿದ್ದರು ಮತ್ತು ಅವರಿಗೆ ದೂರದಿಂದ ನಮಸ್ಕಾರ ಮಾಡುತ್ತಿದ್ದರು. ೪೦ ಜನರ ಒಂದು ಗುಂಪು ಅಲ್ಲಿಂದ ಹೋಗುತ್ತಿತ್ತು. ಅವರೆಲ್ಲರೂ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ದೂರದಿಂದ ನಮಸ್ಕಾರ ಮಾಡುತ್ತಿದ್ದರು. ಅವರಲ್ಲಿನ ೪-೫ ಸ್ತ್ರೀಯರು ನಮ್ಮ ಹತ್ತಿರ ಬಂದು ಶ್ರೀಚಿತ್‌ಶಕ್ತಿ (ಸೌ.) ಕಾಕುರವರಿಗೆ ಬಗ್ಗಿ ನಮಸ್ಕಾರ ಮಾಡತೊಡಗಿದರು. ಆಗ ನಾನು ಆ ಸ್ತ್ರೀಯರಿಗೆ ಶ್ರೀಚಿತ್‌ಶಕ್ತಿ (ಸೌ.) ಕಾಕುರವರ ಬಗ್ಗೆ ಮಾಹಿತಿ ಹೇಳಿದೆನು. ಆಗ ಸ್ತ್ರೀಯರು ಹೇಳಿದರು, ”ನಮಗೆ ಇದರ ಬಗ್ಗೆ ಏನೂ ಗೊತ್ತಿಲ್ಲ; ನಮಗೆ ಅವರು ದೇವಿಯಂತೆ ಕಂಡರು. ಆದ್ದರಿಂದ ನಾವು ಅವರ ದರ್ಶನ ಪಡೆಯಲು ಬಂದೆವು’’, ಎಂದರು. ಆಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಲ್ಲಿಯ ಚೈತನ್ಯದ ಅರಿವು ಸಮಾಜದ ಜನರಿಗೂ ಆಗುತ್ತದೆ ಎಂಬುದನ್ನು ಅನುಭವಿಸಿದೆವು.

– ಶ್ರೀ. ವಾಲ್ಮಿಕ ಭುಕನ, ಚೆನ್ನೈ (೧೨.೩.೨೦೨೨)