‘ಇಸ್ರೇಲ್‌ ಇಲ್ಲಿಯವರೆಗೆ ಮಾಡಿರುವ ದಾಳಿಗಳನ್ನು ಖಂಡಿಸಲೇಬೇಕಂತೆ !’ – ಭಾರತದಲ್ಲಿ ಪ್ಯಾಲೆಸ್ಟೈನ್ ರಾಯಭಾರಿ

ಭಾರತದಲ್ಲಿ ಪ್ಯಾಲೆಸ್ಟೈನ್ ರಾಯಭಾರಿಯ ಹೇಳಿಕೆ !

ಭಾರತದಲ್ಲಿನ ಪ್ಯಾಲೆಸ್ತೀನ್ ರಾಯಭಾರಿ ಅದ್ನಾನ್ ಅಬು ಅಲ್ ಹೈಜಾ

ನವ ದೆಹಲಿ – ಸಂಘರ್ಷ ಯಾವುದೇ ಆದರೂ ಅದು ಕೆಟ್ಟದ್ದೇ ಆಗಿರುತ್ತದೆ; ಆದರೆ ಈ ಸಮಯದಲ್ಲಿ, ಹಮಾಸ್ ಇಸ್ರೇಲ್ ಮೇಲೆ ಏಕೆ ದಾಳಿ ಮಾಡಿದೆ ಎಂದು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ? ನಾವೂ ಕೆಲವು ವರ್ಷಗಳ ಹಿಂದೆ ತಿರುಗಿ ನೋಡಿದಾಗ ಇಸ್ರೇಲನಿಂದ ನಡೆಸಲಾಗಿರುವ ನರಸಂಹಾರವನ್ನೂ ನೋಡಬೇಕು. ಇಲ್ಲಿಯವರೆಗೆ ಇಸ್ರೇಲ್ ಪ್ಯಾಲೆಸ್ತೀನ್‌ ಮೇಲೆ 260 ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದೆ. ಈ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಹಮಾಸ್ ದಾಳಿಯನ್ನು ಖಂಡಿಸುವವರು ಇಸ್ರೇಲ್ ಅನ್ನು ಕೂಡ ಖಂಡಿಸಬೇಕು ಎಂದು ಭಾರತದಲ್ಲಿನ ಪ್ಯಾಲೆಸ್ತೀನ್ ರಾಯಭಾರಿ ಅದ್ನಾನ್ ಅಬು ಅಲ್ ಹೈಜಾ ಇವರು ಹೇಳಿದ್ದಾರೆ.
ಹೈಜಾ ಮಾತು ಮುಂದುವರೆಸಿ, ನಮ್ಮ ಭೂಮಿಯ ಮೇಲೆ ಇಸ್ರೇಲ್ ಹಿಡಿತವನ್ನು ಸಾಧಿಸಿ, ಅಲ್ಲಿ ನೆಲೆಯನ್ನು ಸ್ಥಾಪಿಸಿದೆ. ಜನರನ್ನು ಕಾರಾಗೃಹದಲ್ಲಿ ಬಂಧಿಸಿದೆ. ಈ ವಿಷಯದ ಬಗ್ಗೆ ಯಾರೂ ಯೋಚಿಸುವುದಿಲ್ಲ. 5 ಸಾವಿರ ಜನರು ಇಸ್ರೇಲ್ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ. ನಮ್ಮ ಆಡಳಿತದ 300 ಜನರು ಬಂಧನದಲ್ಲಿದ್ದಾರೆ. ಅವರ ಬಿಡುಗಡೆಗಾಗಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಇಸ್ರೇಲ್ ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲದಿದ್ದರೂ, ಅವರನ್ನು ಜೈಲುಗಳಲ್ಲಿ ಬಂಧನದಲ್ಲಿರಿಸಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲಿವು

ಇಸ್ರೇಲ್‌ ನಡೆಸಿರುವ ದಾಳಿ ಮತ್ತು ಜಿಹಾದಿ ಭಯೋತ್ಪಾದಕರು ನಡೆಸಿರುವ ಜಿಹಾದ್‌ಗೂ ವ್ಯತ್ಯಾಸವಿದೆ. ಹಮಾಸ್ ದಾಳಿ ನಡೆಸಿ ಹೆಂಗಸರು, ಮಕ್ಕಳು, ಪುರುಷರ ಮೇಲೆ ಮಾಡಿರುವ ಅತ್ಯಾಚಾರ ಮಾಡಿದ್ದು ಅಕ್ಷಮ್ಯವಾಗಿದೆ !