ಬೆತ್ತಲೆ ಮೆರವಣಿಗೆ ಮಾಡಿರುವ ಕುಕಿ ಮಹಿಳೆಯನ್ನು ಮೈತೆಯಿರೆ ರಕ್ಷಿಸಿದರು ! – ಮಣಿಪುರದ ಮುಖ್ಯಮಂತ್ರಿ ಬೀರೇನ ಸಿಂಹ

  • ಭಾಜಪದ ಮಣಿಪುರದ ಮುಖ್ಯಮಂತ್ರಿ ಬೀರೇನ ಸಿಂಹ ಇವರ ಹೇಳಿಕೆ

  • ಮೈತೆಯಿ ಇವರಿಂದಲ್ಲ, ವಿದೇಶಿ ಶಕ್ತಿಗಳಿಂದ ಮಣಿಪುರದಲ್ಲಿ ಹಿಂಸಾಚಾರ !

ಇಂಪಾಲ್ (ಮಣಿಪುರ) – ಮೈತೆಯಿ ಮತ್ತು ಕುಕಿ ಜನಾಂಗದಲ್ಲಿ ಮತ್ತೆ ಸಂವಾದ ಆರಂಭ ಮಾಡಲು ಪ್ರಾಧಾನ್ಯತೆ ನೀಡುವುದು ಮತ್ತು ಮಣಿಪುರ ನಾಗರಿಕರಲ್ಲಿ ಆತ್ಮವಿಶ್ವಾಸ ಮತ್ತು ಸುರಕ್ಷತೆಯ ಭಾವನೆ ನಿರ್ಮಾಣ ಮಾಡುವುದು ಇದೇ ನನ್ನ ಎದುರಿನ ದೊಡ್ಡ ಸವಾಲು ಆಗಿದೆ. ರಾಜ್ಯದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಇದು ‘ವಂಶಿಕ ಸಂಘರ್ಷ’ವಲ್ಲ. ಮಾದಕ ವಸ್ತುಗಳು ಮತ್ತು ಅನಧಿಕೃತ ಸ್ಥಳಾಂತರ ತಡೆಯುವದಕ್ಕಾಗಿ ರಾಜ್ಯ ಸರಕಾರವು ಹೋರಾಟ ಆರಂಭಿಸಿತು ಅದರಿಂದಲೇ ಹಿಂಸಾಚಾರ ಆರಂಭವಾಯಿತು, ಎಂದು ರಾಜ್ಯದ ಮುಖ್ಯಮಂತ್ರಿ ಬೀರೇನ ಸಿಂಹ ಇವರು ಮಹತ್ವಪೂರ್ಣ ಹೇಳಿಕೆ ನೀಡಿದರು. ಅವರು ಒಂದು ವಾರ್ತಾಪತ್ರಿಕೆಗೆ ಸಂದರ್ಶನ ನೀಡುವಾಗ ಈ ಅಭಿಪ್ರಾಯ ಮಂಡಿಸಿದರು.

ಮುಖ್ಯಮಂತ್ರಿ ಅವರು ಮಾತು ಮುಂದುವರೆಸುತ್ತಾ,

೧. (ಕ್ರೈಸ್ತ) ಕುಕಿ ಜನಾಂಗದಲ್ಲಿನ ೨ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿರುವ ದುರಾದೃಷ್ಟಕರ ಘಟನೆ ಬೆಳಕಿಗೆ ಬಂದಿತು. ನಿಜವೆಂದರೆ (ಹಿಂದೂ) ಮೈತೆಯಿ ಜನರೇ ಆಕೆಯನ್ನು ರಕ್ಷಿಸಿ ಆಕೆಯ ಮನೆಗೆ ಸುರಕ್ಷಿತವಾಗಿ ತಲುಪಿಸಿದರು. ಹಾಗೂ ಮೈತೆಯಿ ಇವರೇ ಮನೆಯ ಹೊರಗೆ ಹೋಗಿ ಅಪರಾಧಿಯನ್ನು ಹುಡುಕಿ ಪೊಲೀಸರಿಗೆ ಒಪ್ಪಿಸಿದರು. ಆದ್ದರಿಂದ ಮೈತೆಯಿ ಜನರ ಶ್ಲಾಘಿಸಬೇಕು. ಈ ಘಟನೆಯಲ್ಲಿ ಯಾವ ಜನರು ವಿಕೃತ ಅಪರಾಧ ಮಾಡಿದ್ದಾರೆ ಅವರನ್ನು ಕೂಡ ನಾನು ತೀವ್ರವಾಗಿ ಖಂಡಿಸಿದ್ದೇನೆ.

೨. ‘ಮಣಿಪುರ ಉಚ್ಚ ನ್ಯಾಯಾಲಯವು ಮೈತೆಯಿ ಜನಾಂಗವನ್ನು ಹಿಂದುಳಿದ ವರ್ಗದಲ್ಲಿ ಸೇರಿಸುವ ನಿರ್ಣಯ ನೀಡಿದ ನಂತರ ರಾಜ್ಯದಲ್ಲಿ ಹಿಂಸಾಚಾರಕ್ಕೆ ಆರಂಭವಾಯಿತು’, ಎಂದು ಒಂದು ಸಾಧ್ಯತೆ ಹೇಳಲಾಗಿತ್ತು. ಆದರೆ ಇದರಲ್ಲಿ ಸತ್ಯಂಶವಿಲ್ಲ. ಉಚ್ಚ ನ್ಯಾಯಾಲಯದ ನಿರ್ಣಯದ ಬಗ್ಗೆ ಸರಕಾರ ಹಾಗೆ ಯಾವುದೇ ಆದೇಶ ಹೊರಡಿಸಲಿಲ್ಲ. ಆದ್ದರಿಂದ ಕುಕಿ ಜನಾಂಗದವರಿಗೆ ಸಿಟ್ಟು ಬರುವ ಯಾವುದೇ ಕಾರಣ ಇರಲಿಲ್ಲ.

೩. ಹಿಂಸಾಚಾರ ಆರಂಭವಾಗುವ ಮೊದಲು ರಾಜ್ಯ ಸರಕಾರಕ್ಕೆ ಒತ್ತಡ ನಿರ್ಮಾಣವಾಗುತ್ತಿದೆ, ಇದರ ಅಂದಾಜು ಏಕೆ ಬರಲಿಲ್ಲ ? ಈ ಪ್ರಶ್ನೆಯ ಬಗ್ಗೆ ಮುಖ್ಯಮಂತ್ರಿ ಸಿಂಹ ಇವರು, ಯಾವ ದಿನ ಆದಿವಾಸಿ ಜನಾಂಗದಿಂದ ‘ಏಕತಾ ಮೋರ್ಚಾ’ ನಡೆಸಲಾಯಿತು, ಆಗಲೇ ಪೊಲೀಸ ಅಧಿಕಾರಿಗಳಿಗೆ ನಾನು ಸೂಕ್ಷ್ಮ ಜಿಲ್ಲೆಗಳಲ್ಲಿ ರಕ್ಷಣೆ ಪೂರೈಸುವ ಆದೇಶ ನೀಡಿದ್ದೆ. ದುರಾದೇಷ್ಟಕರದಿಂದ ಪೊಲೀಸ ಅಧಿಕಾರಿಗಳು (ಹಿಂಸಾಚಾರ ನಡೆದಿರುವ) ಚುರಾಚಂದಪುರ ಜಿಲ್ಲೆಯಲ್ಲಿ ರಕ್ಷಣೆ ಪೂರೈಸಲಿಲ್ಲ, ಇದು ನನಗೆ ನಂತರ ತಿಳಿಯಿತು. ಹಿಂಸಾಚಾರದ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ನ್ಯಾಯಾಂಗ ವಿಚಾರಣೆ ನಡೆಸುವ ಆದೇಶ ನೀಡಿತು. ಆದ್ದರಿಂದ ಈ ಪ್ರಕರಣದ ಬಗ್ಗೆ ನಾನು ಹೆಚ್ಚು ಮಾತನಾಡಲು ಇಚ್ಚಿಸಲಿಲ್ಲ.
೪. ಕೇಂದ್ರ ಸರಕಾರದ ಪೂರ್ಣ ಬೆಂಬಲ ನನಗಿದೆ ಮತ್ತು ನನ್ನ ಮೇಲೆ ವಿಶ್ವಾಸ ಕೂಡ ಇದೆ.

೫. ೨೦೧೮ ರಲ್ಲಿ ಭಾರತ ಮತ್ತು ಮ್ಯಾನ್ಮಾರ್ ಇವರಲ್ಲಿ ‘ಮುಕ್ತ ಸಂಚಾರ ವ್ಯವಸ್ಥೆ’ ಆರಂಭ ಮಾಡಲಾಯಿತು. ಆದ್ದರಿಂದ ಆದಿವಾಸಿ ಜನಾಂಗದ ಜನರು ಭಾರತ್ ಮ್ಯಾನ್ಮಾರ್ ದೇಶದ ಗಡಿಯಲ್ಲಿ ವೀಸಾ ಇಲ್ಲದೆ ೧೬ ಕಿಲೋಮೀಟರ ವರೆಗೆ ಪ್ರಯಾಣ ಮಾಡಲು ಸವಲತ್ತು ದೊರೆಯಿತು, ಹೀಗೆ ಮಾಡಬಾರದಿತ್ತು ಮ್ಯಾನ್ಮಾರಿನ ನಾಗರೀಕರು ಇಲ್ಲಿ ಬಂದು ಖಾಯಂ ಸ್ಥಾಯಿಕರಾದರು ಅಥವಾ ಹಿಂತಿರುಗಿ ಹೋಗಲಿಲ್ಲ, ಅದನ್ನು ಯಾರು ನಮೂದಿಸುವವರು ? ಅವರು ಹಿಂತಿರುಗಿ ಹೋಗಲಿಲ್ಲ, ಅವರ ಮೇಲೆ ಯಾರು ಕ್ರಮ ಕೈಗೊಳ್ಳುವರು? ಇಂತಹ ಅನೇಕ ಪ್ರಶ್ನೆ ನಿರ್ಮಾಣವಾದವು. ಹೊರಗಿನ ದೇಶದಿಂದ ಬಂದಿರುವ ಜನರು ನಾನು ಮತ್ತೆ ಅದೇ ದೇಶಕ್ಕೆ ಕಳುಹಿಸುವೆ ಈ ಭೀತಿಯಿಂದ ನನ್ನ ವಿರುದ್ಧ ದ್ವೇಷ ಹಬ್ಬಿಸಿದರು.

ನಾನು ಮೈತೆಯಿ ಇರುವೆನೆಂದು ‘ತಪ್ಪಾದ ಅರ್ಥ ಗ್ರಹಿಸಬಾರದೆಂದು’ ನಾನು ಮೈತೆಯಿ ಜನಾಂಗದ ಸಂತ್ರಸ್ಥರನ್ನು ಭೇಟಿ ಮಾಡಲಿಲ್ಲ ! – ಮುಖ್ಯಮಂತ್ರಿ ಸಿಂಹ

ತೆಲಂಗಾಣದ ಕ್ರೈಸ್ತ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಎಂದಾದರು ಈ ರೀತಿಯ ಯೋಚನೆ ಮಾಡುತ್ತಾರೆಯೇ ? ಬಂಗಾಳದ ಹಿಂದೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಾಚಾರಿ ಮುಸಲ್ಮಾನರಿಗೆ ಬಹಿರಂಗವಾಗಿಯೇ ಹೊಗಳುತ್ತಾರೆ. ಆದ್ದರಿಂದ ಎನ್ ಬೇರೇನ ಸಿಂಹ ಇವರು ಕೂಡ ತತ್ವ ನಿಷ್ಠರಾಗಿ ಸಂತ್ರಸ್ತ ಮೈತೆಯಿ ಜನಾಂಗದವರಿಗೆ ಸಾಂತ್ವನ ಹೇಳಬೇಕು ಹೀಗೆ ಹಿಂದುಗಳಿಗೆ ಅನಿಸುತ್ತದೆ.

‘ನೀವು ಸಂತ್ರಸ್ತ ಕುಟುಂಬದವರನ್ನು ಭೇಟಿ ಏಕೆ ಮಾಡಲಿಲ್ಲ ?’, ಈ ಪ್ರಶ್ನೆಯ ಬಗ್ಗೆ ಮುಖ್ಯಮಂತ್ರಿ ಇವರು, ನಾನು ಕುಕಿ ಜನಾಂಗದಲ್ಲಿನ ಸಂತ್ರಸ್ತ ಕುಟುಂಬಗಳ ಭೇಟಿ ಮಾಡಿ ಅವರಿಗೆ ಆಧಾರ ನೀಡಬೇಕಿತ್ತು: ಆದರೆ ನನಗೆ ಅನುಮತಿ ನೀಡಲಾಗಲಿಲ್ಲ ಹಾಗೂ ನಾನು ಮೈತೆಯಿ ಜನಾಂಗದ ಸಂತ್ರಸ್ತರಿಗೆ ಭೇಟಿ ಮಾಡಿದ್ದರೆ ಅದರಿಂದ ತಪ್ಪಾದ ಅರ್ಥ ಗ್ರಹಿಸಲಾಗುತ್ತಿತ್ತು. ಜನರು, ‘ನೋಡಿ ಮೈತೆಯಿ ಇರುವನೆಂದು ಮೈತೆಯಿಯರನ್ನು ಭೇಟಿಯಾಗಿದ್ದಾನೆ’ ಎಂದು ಹೇಳುತ್ತಿದ್ದರು ಎಮದು ಹೇಳಿದರು.

ಸಂಪಾದಕೀಯ ನಿಲುವು

ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಈಗ ಅವರು ‘ಹಿಂದೂ ಮೈತೆಯಿರನ್ನು ರಕ್ಷಿಸುತ್ತಿದ್ದಾರೆ’, ಎಂದು ಹಿಂದೂ ದ್ವೇಷಿ ಕಾಂಗ್ರೆಸ್ಸಿನ ಅಧೀರ ರಂಜನ ಚೌಧರಿ ಅಥವಾ ರಾಹುಲ್ ಗಾಂಧಿ ಬಡಬಡಾಯಿಸಿದರು ಆಶ್ಚರ್ಯ ಏನೂ ಇಲ್ಲ !

ಮೂಲತಃ ಈ ಹಿಂಸಾಚಾರದ ಹಿಂದೆ ಮ್ಯಾನ್ಮಾರ್ ನ ಶಕ್ತಿಗಳು ಕಾರ್ಯನಿರತವಾಗಿತ್ತು, ಆದರೆ ಅವು ದೇಶಘಾತಕ ಶಕ್ತಿಗಳ ಮೇಲೆ ಆಕ್ಷೇಪ ವ್ಯಕ್ತಪಡಿಸುವ ಬದಲು ‘ಹಿಂದುಗಳ ಹೆಸರು ಹೇಗೆ ಕಳಂಕಿತ ಮಾಡಬಹುದು’ ಎಂದು ಶತ ಪ್ರಯತ್ನ ಮಾಡುತ್ತಿದ್ದಾರೆ, ಅಂತಹ ಪಾಶ್ಚಾತ್ಯ ದೇಶ ಮತ್ತು ಕಾಂಗ್ರೆಸ್ಸಿಗಳಿಗೆ ಧಿಕ್ಕಾರ !