ಫೇಸ್‍ಬುಕ್‍ನಿಂದ ಈಗ ಹಿಂದೂ ಜನಜಾಗೃತಿ ಸಮಿತಿಯ ‘ಹಿಂದಿ’ ಪುಟಕ್ಕೂ ನಿರ್ಬಂಧ !

ಫೇಸ್‍ಬುಕ್‍ನ ಹಿಂದುದ್ವೇಷ ನೋಡಿದರೆ, ಅದು ನಾಳೆ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳ ಮತ್ತು ನಾಯಕರ ಪುಟಗಳನ್ನು ಬಂದ್ ಮಾಡಿದರೆ, ಅದರಲ್ಲಿ ಅಚ್ಚರಿಯೇನಲ್ಲ ! ಇಂದು ಹಿಂದೂ ಜನಜಾಗೃತಿ ಸಮಿತಿಯ ಮೇಲೆ ಬಂದಿರುವ ವಿಪತ್ತು ನಾಳೆ ಇತರ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ಬಾರಬಾರದು ಎಂದು ಎಲ್ಲ ಸಂಘಟನೆಗಳು ಒಗ್ಗೂಡಿ ಫೇಸ್‍ಬುಕ್‍ಅನ್ನು ನ್ಯಾಯಸಮ್ಮತ ರೀತಿಯಲ್ಲಿ ವಿರೋಧಿಸಬೇಕು !

ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ಅದೇರೀತಿ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ನ ಪುಟಗಳ ಮೇಲೆ ನಿರ್ಬಂಧ !

ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ‘ಸನಾತನ ಪ್ರಭಾತ’ ನಿಯತಕಾಲಿಕೆಯ ‘ಸನಾತನ ಪ್ರಭಾತ’ ಮತ್ತು ಸನಾತನ ಸಾತ್ತ್ವಿಕ ಉತ್ಪನ್ನಗಳನ್ನು ಮಾರಾಟ ಮಾಡುವ ‘ಸನಾತನ ಶಾಪ್’ ನ ಫೇಸ್‌ಬುಕ್ ಪುಟಗಳನ್ನು ಬಂದ್ ಮಾಡಲಾಗಿದೆ (ಅನ್‌ಪಬ್ಲಿಶ್). ವಿಶೇಷವೆಂದರೆ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ ಇವುಗಳ ಪುಟಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.