ಮುಂಬರುವ ಆಪತ್ಕಾಲದಲ್ಲಿ ಎಲ್ಲ ಮಾನವರು ಜೀವಂತವಾಗಿರಬೇಕೆಂದು ಕೃತಿಶೀಲರಾಗಿರುವ ಮತ್ತು ಜಗತ್ತಿಗೆ ಆಧಾರವಾಗಿರುವ ಏಕೈಕ ದಾರ್ಶನಿಕ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಆಪತ್ಕಾಲದಲ್ಲಿ ರಕ್ಷಣೆಯಾಗಲು ವ್ಯಕ್ತಿಯು ಸ್ವಂತದ ಬಲದಲ್ಲಿ ಎಷ್ಟು ಸಿದ್ಧತೆಯನ್ನು ಮಾಡಿದರೂ, ಭೂಕಂಪ, ತ್ಸುನಾಮಿಗಳಂತಹ ಮಹಾಭಯಂಕರ ವಿಪತ್ತುಗಳಿಂದ ಪಾರಾಗಲು ಕೊನೆಗೆ ದೇವರ ಮೇಲೆಯೇ ಎಲ್ಲ ಶ್ರದ್ಧೆಯನ್ನು ಇಡಬೇಕಾಗುತ್ತದೆ. ವ್ಯಕ್ತಿಯು ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಪಡೆದುಕೊಂಡರೆ ದೇವರು ಅವನನ್ನು ಎಲ್ಲ ಸಂಕಟದಿಂದ ರಕ್ಷಣೆ ಮಾಡಿಯೇ ಮಾಡುತ್ತಾನೆ. ಭಕ್ತ ಪ್ರಹ್ಲಾದ, ಪಾಂಡವರು ಮುಂತಾದವರ ಅನೇಕ ಉದಾಹರಣೆಗಳಿಂದ ಇದು ದೃಢಪಟ್ಟಿದೆ.

ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ವಿವಿಧ ಸಿದ್ಧತೆಗಳು !

‘ಈ ಹಿಟ್ಟುಗಳಲ್ಲಿ ರಾಗಿಯ ಹಿಟ್ಟು ಹೆಚ್ಚು ಪೌಷ್ಟಿಕವಾಗಿದೆ. ಅಕ್ಕಿಯನ್ನು ೩-೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬಸಿಗೆಯಲ್ಲಿ ಬಸಿಯಲು ಇಡಬೇಕು. ಸಾಧಾರಣ ೧ ಗಂಟೆಯ ನಂತರ ಅಕ್ಕಿಯಲ್ಲಿನ ನೀರು ಬಸಿದು ಹೋದ ನಂತರ ಮತ್ತು ಅದರಲ್ಲಿನ ಹಸಿತನ ಕಡಿಮೆಯಾದ ನಂತರ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಮಧ್ಯಮ ಉಷ್ಣತೆಯಲ್ಲಿ ಹುರಿಯಬೇಕು. ಒಂದು ಬಾರಿಗೆ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡರೆ ಅವು ಅರಳಿನಂತೆ ಅರಳುತ್ತವೆ.