ಭೋಪಾಲ್‌ನಲ್ಲಿ ಯುವ ಹಿಂದುತ್ವನಿಷ್ಠ ಚಿಂತಕರ ‘ಯಂಗ್ ಥಿಂಕರ್ಸ್ ಕಾನ್ಕ್ಲೇವ್’ ಕಾರ್ಯಕ್ರಮಕ್ಕೆ ಕಮ್ಯುನಿಸ್ಟರಿಂದ ವಿರೋಧ !

  • ಪ್ರಖರ ಹಿಂದುತ್ವನಿಷ್ಠ ಮತ್ತು ಚಿಂತಕ ಶ್ರೀ. ನೀರಜ ಅತ್ರಿ ಭಾಷಣಕ್ಕೆ ಆಕ್ಷೇಪ !

  • ವಿರೋಧಕ್ಕೆ ಕಿವಿಗೊಡದೇ ಹಿಂದೂಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು !

ಭೋಪಾಲ (ಮಧ್ಯಪ್ರದೇಶ) – ಕೆಲವು ದಿನಗಳ ಹಿಂದೆ ‘ದಿ ಯಂಗ್ ಥಿಂಕರ್ಸ್ ಫೋರಮ್’ ಎಂಬ ಸಂಸ್ಥೆಯು ಐದನೇ ವಾರ್ಷಿಕ ‘ಯಂಗ್ ಥಿಂಕರ್ಸ್ ಕಾನ್ಕ್ಲೇವ್’ ಅನ್ನು ಆಯೋಜಿಸಿತ್ತು. ಇಲ್ಲಿನ ಪ್ರತಿಷ್ಠಿತ ‘ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ಯುನಿವರ್ಸಿಟಿ’ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೆಲವು ಕಮ್ಯುನಿಸ್ಟ್ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳು ಭಾರೀ ವಿರೋಧ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಖರ ಹಿಂದುತ್ವನಿಷ್ಠ ಹಾಗೂ ಚಿಂತಕ ಶ್ರೀ. ನೀರಜ್ ಅತ್ರಿ ಭಾಷಣ ಮಾಡುವುದರಿಂದ ಈ ಪ್ರತಿಭಟನೆ ನಡೆದಿದೆ. ಈ ಸಮಯದಲ್ಲಿ ಆಯೋಜಕರು ತಮ್ಮ ವಾದವನ್ನು ಮಂಡಿಸಲು ಕಮ್ಯುನಿಸ್ಟರಿಗೆ ಒಂದು ಚರ್ಚಾಕೂಟವನ್ನೂ ನಡೆಸುವ ಸಿದ್ಧತೆಯನ್ನೂ ತೋರಿಸಿದರು; ಆದರೆ ಕಮ್ಯುನಿಸ್ಟರು ಅದಕ್ಕಾಗಿ ಸಿದ್ಧರಿರಲಿಲ್ಲ. ಹಾಗಾಗಿ ಯಾವುದೇ ವಿರೋಧಕ್ಕೆ ಮಣಿಯದೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

1. ನಿರಜ ಅತ್ರಿ ಸಹಿತ ಪ್ರಖರ ಹಿಂದುತ್ವನಿಷ್ಠ ರಶ್ಮಿ ಸಮಂತ, ಪ್ರೊ. ರಾಮ ಶರ್ಮಾ, ಪತ್ರಕರ್ತೆ ಸ್ವಾತಿ ಗೋಯಲ ಶರ್ಮಾ ಮತ್ತು ಇತರ ಕೆಲವು ರಾಷ್ಟ್ರನಿಷ್ಠರನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೆ ಕಾಲೇಜಿನಲ್ಲಿ ಕಮ್ಯುನಿಸ್ಟರು ‘ಎಲ್ಲ ಭಾಷಣದಲ್ಲೂ ದ್ವೇಷ ಹಬ್ಬಿಸುವವರು’ ಎಂಬ ಆಧಾರ ಇಲ್ಲದ ಆರೋಪ ಮಾಡುತ್ತಿದ್ದರು.

2. ಕಾರ್ಯಕ್ರಮದಲ್ಲಿ ಒಟ್ಟು 6 ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ‘ಕಟ್ಟರತೆಯಿಂದ ಧರ್ಮದವರೆಗೆ: ಪ್ರವಾದಿಯ ಏಕೇಶ್ವರವಾದದ ಬಗ್ಗೆ ಹಿಂದೂ ದೃಷ್ಟಿಕೋನ'(ಫ್ರಾಂ ಡೆಗ್ಮಾ ಟು ಧರ್ಮಾ : ಹಿಂದೂ ವ್ಯೂ ಆಫ್ ಪ್ರೋಫೆಟಿಕ್ ಮೊನೊಥಿಜಮ್’ ಮತ್ತು ‘ವೋಕಿಸಂ ಚಳುವಳಿಯ ಗುಟ್ಟು ರಟ್ಟು : ಸಾಮಾಜಿಕ ಚಟುವಟಿಕೆಯ ಪರೀಕ್ಷಿಸುವುದು’ (ಆನರಹೆಲಿಂಗ್ ವೊಕಿಸಂ : ಎಕ್ಜಾಮಿನಿಂಗ್ ದ ಡಿಎನ್ಎ ಆಫ್ ಸೊಶಿಯಲ್ ಎಕ್ಟಿವಿಸಂ ಈ ಸೆಷನ್‌ಗಳು ವಿಶೇಷವಾಗಿ ವಿರೋಧಿಸಲ್ಪಟ್ಟವು. ‘ವಾಸಿಸಂ’ ಒಂದು ವಿಕೃತ ಚಳುವಳಿಯಾಗಿದ್ದು, ಅದರ ಪ್ರಚಾರಕರು ‘ಸಾಮಾಜಿಕ ನ್ಯಾಯ’ದ ಬಗ್ಗೆ ಮತ್ತು ‘ರಾಜಕೀಯ ಸಮಸ್ಯೆಗಳು’ ಈ ಬಗ್ಗೆ ಅತ್ಯಂತ ಪ್ರಗಲ್ಬತೆಯನ್ನು ಹೊಂದಿರುವಂತೆ ನಟಿಸುತ್ತಾರೆ ಈ ಜನರು ನಾವು ‘ಸಾಮಾಜಿಕ ಅನ್ಯಾಯದ ವಿರುದ್ಧ ಎಚ್ಚರಗೊಂಡಿದ್ದೇವೆ’ ಎಂದು ತೋರಿಸುತ್ತಾರೆ.

3. ಕಾಲೇಜಿನ ಪ್ರಾಧ್ಯಾಪಕರೊಬ್ಬರು ವಿರೋಧವನ್ನು ಹೋಗಲಾಡಿಸಲು, ಅವರು ‘ಚರ್ಚೆಗಳನ್ನು’ ಆಯೋಜಿಸುವ ಮೂಲಕ ತಮ್ಮ ಆಕ್ಷೇಪಣೆಗಳನ್ನು ಮಂಡಿಸಲು ಕಮ್ಯುನಿಸ್ಟರಿಗೆ ವೇದಿಕೆಯನ್ನು ಒದಗಿಸುತ್ತಾರೆ; ಆದರೆ ವಿರೋಧಕರು ‘ಯಾವುದೇ ಸಂದರ್ಭದಲ್ಲೂ ಅತ್ರಿ ವಿಷಯವನ್ನು ಮಂಡಿಸಬಾರದು’ ಎಂದು ಪಟ್ಟು ಹಿಡಿದಿದ್ದವು. ಕೊನೆಗೆ ಅವರ ವಿರೋಧದ ನಡುವೆಯೂ ಕಾರ್ಯಕ್ರಮ ನಡೆಸಲಾಯಿತು.

4. ರಶ್ಮೀ ಸಾಮಂತ ಇವರು ಈ ಕುರಿತು ‘ಎಕ್ಸ್’ ನಲ್ಲಿ, ಕಟ್ಟರವಾದಿಗಳ ಒಂದು ಸಣ್ಣ ಗುಂಪು” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವವರ ಹೆಸರಿನ ಪೋಸ್ಟರ್‌ಗಳು ಮತ್ತು ಫಲಕಗಳನ್ನು ಹರಿದು ಹಾಕುತ್ತಿದ್ದರು. ಪ್ರತ್ಯಕ್ಷ ವಸ್ತುಸ್ಥಿತಿಯ ವಾದ-ವಿವಾದ ಮಾಡುವ ಬದಲು, ಈ ಗುಂಪಿಗೆ ಗೂಂಡಾಗಿರಿ, ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಲು ಬಯಸಿತು. (ಯಾವಾಗಲೂ ‘ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತದೆ’, ಎಂದು ಹಿಂದೂಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಕಮ್ಯುನಿಸ್ಟರು ತಾವು ಮಾತ್ರ ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳನ್ನು ಅನುಸರಿಸುವುದನ್ನು ಆಗಾಗ ಕಾಣುತ್ತದೆ. ಹಾಗಾಗಿ ‘ಕಮ್ಯುನಿಸ್ಟರು ಪ್ರಜಾಪ್ರಭುತ್ವವನ್ನು ಹೇಗೆ ಕೊಲ್ಲುತ್ತಿದ್ದಾರೆ’, ಎಂದು ಜಗತ್ತಿಗೆ ತಿಳಿಸುವ ಸಮಯ ಬಂದಿದೆ. – ಸಂಪಾದಕರು)

5. ಈ ಕಾರ್ಯಕ್ರಮದಲ್ಲಿ ‘ಜೀಸಸ್ ಕ್ರೈಸ್ಟ್ : ಆನ್ ಆರ್ಟಿಫೈಸ್ ಫಾರ್ ಆಗ್ರೆಶನ್’, ‘ಟಿಪ್ಪು ಸುಲ್ತಾನ್ : ವಿಲನ್ ಆರ್ ಹೀರೋ ?’, ‘ಹಿಂದೂ ರಾಷ್ಟ್ರ’ ಮತ್ತು ‘ಜಿಹಾದ್’ ಪುಸ್ತಕಗಳನ್ನು ಮಾರಾಟ ಮಾಡಲಾಯಿತು. ಇದಕ್ಕೂ ವಿರೋಧಿಸಿದರು.

6. ಈ ಕಾರ್ಯಕ್ರಮವನ್ನು ‘ಎಕ್ಸ್’ ನಿಂದ ಕಮ್ಯುನಿಸ್ಟರ ಗುಂಪುಗಳು ಸಹ ವಿರೋಧಿಸಿದವು. ಅಲ್ಲದೆ, ಹಿಂದೂ ದ್ವೇಷದ ಕಾಮಾಲೆ ಒಳಗಾಗಿರುವ ‘ದಿ ವೈರ್’ ಮತ್ತು ‘ದಿ ಕ್ವಿಂಟ್’ ನಂತಹ ವಾರ್ತಾ ಜಾಲತಾಣಗಳು ಸಹ ಕಾರ್ಯಕ್ರಮದ ವಿರುದ್ಧ ದ್ವೇಷಪೂರ್ಣ ಲೇಖನಗಳನ್ನು ಬರೆದವು. (ಇದು ಕಮ್ಯುನಿಸ್ಟ್ ರ ‘ಇಕೊಸಿಸ್ಟಂ’ (ಎಲ್ಲಾ ಹಂತಗಳಲ್ಲಿ ಸಮಾನ ಮನಸ್ಕ ಜನರ/ಸಂಸ್ಥೆಗಳ ಗುಂಪು) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ ! – ಸಂಪಾದಕರು)

ಹಿಂದೂಗಳು ‘ಕನ್ಸಲ್ ಕಲ್ಚರ್’ಗೆ ಬಾಗದೇ ಸಂಪೂರ್ಣ ನಿಷ್ಠೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಮುಂದುವರಿಸಬೇಕು ! – ನೀರಜ್ ಅತ್ರಿ

ನೀರಜ್ ಅತ್ರಿ

(ಹಿಂದುತ್ವನಿಷ್ಠ ಅಥವಾ ರಾಷ್ಟ್ರನಿಷ್ಠರು ಆಯೋಜಿಸುವ ಕಾರ್ಯಕ್ರಮವನ್ನು ವಿವಿಧ ಮಾಧ್ಯಮಗಳ ಮೂಲಕ ವಿರೋಧಿಸಿ ಅದನ್ನು ಬಂದ್ ಮಾಡುವ ಸಮಾಜ ಮಾರಕ ಚಳುವಳಿಗೆ ‘ಕನ್ಸಲ್ ಕಲ್ಚರ್’ ಎಂದು ಕರೆಯಲಾಗುತ್ತದೆ.)

ಈ ಕಾರ್ಯಕ್ರಮದ ಕುರಿತು ‘ಸನಾತನ ಪ್ರಭಾತ’ದ ಪ್ರತಿನಿಧಿಯು ಶ್ರೀ. ನೀರಜ ಅತ್ರಿ ಅವರನ್ನು ಸಂಪರ್ಕಿಸಿದರು. ಶ್ರೀ. ಅತ್ರಿ ಕಾರ್ಯಕ್ರಮದ ಸಂಚಾಲಕರಾಗಿದ್ದರು. ಅವರು ‘ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ‘ಹಿಂದೂ’ ದೃಷ್ಟಿ’ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ‘ಸನಾತನ ಪ್ರಭಾತ’ದ ವರದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಇಸ್ಲಾಂಅನ್ನು ದ್ವೇಷಿಸುತ್ತೇನೆ’ ಎಂದು ಕಮ್ಯುನಿಸ್ಟರು ನನ್ನನ್ನು ವಿರೋಧಿಸುತ್ತಿದ್ದರು. ಕಮ್ಯುನಿಸ್ಟರು ಮತ್ತು ಹಿಂದೂ ವಿರೋಧಿಗಳ ‘ಕನ್ಸಲ್ ಕಲ್ಚರ್’ಗೆ ತಲೆ ಬಾಗದೇ ಸಂಪೂರ್ಣ ನಿಷ್ಠೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಮುಂದುವರಿಸಬೇಕು. ‘ವಾದ-ವಿವಾದ’ ಮಾಡುವುದು ನಮ್ಮ ಪರಂಪರೆಯೇ ಆಗಿದೆ. ಇದಕ್ಕಾಗಿ ನಾವು ನಿರಂತರವಾಗಿ ಸಂವಾದದ ಮೂಲಕ ಪ್ರಯತ್ನಿಸುತ್ತಿರಬೇಕು ಮತ್ತು ನಮ್ಮ ಆಲೋಚನೆಗಳನ್ನು ತೀವ್ರತೆಯಿಂದ ಹರಡಬೇಕು.’ ಎಂದು ಹೇಳಿದರು

ಸಂಪಾದಕೀಯ ನಿಲುವು

ಹಿಂದುತ್ವನಿಷ್ಟರ ವಿಚಾರ ಈಗ ವ್ಯಾಪಕವಾಗಿ ಹರಡುತ್ತಿರುವುದರಿಂದ, ಹಿಂದೂ ವಿರೋಧಿಗಳ ಗುಟ್ಟು ರಟ್ಟಾಗುತ್ತಿದೆ. ಹಿಂದೂಗಳ ಪರವಾಗಿ ವಾತಾವರಣ ಸಕಾರಾತ್ಮಕವಾಗುತ್ತಿರುವುದರಿಂದ ಕಮ್ಯುನಿಸ್ಟರಿಗೆ ಅಜೀರ್ಣವಾಗಿದೆ. ಅದರ ಭಾಗವೇ ಈ ವಿರೋಧವಾಗಿದೆ !