ಮುಂದಿನ 20-25 ವರ್ಷಗಳಲ್ಲಿ ಭಾರತದ ‘ಸ್ಪೇಸ್ ಸ್ಟೇಶನ್’ (ಬಾಹ್ಯಾಕಾಶದಲ್ಲಿ ನಿಲ್ದಾಣ) ! – ‘ಇಸ್ರೋ’ದ ಮುಖ್ಯಸ್ಥ ಎಸ್. ಸೋಮನಾಥ

ನವ ದೆಹಲಿ – ಭಾರತವು ಮುಂದಿನ 20-25 ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನದೇ ಆದ ‘ಸ್ಪೇಸ್ ಸ್ಟೇಶನ್’ವನ್ನು ಸ್ಥಾಪಿಸಲಿದೆ. ಗಗನಯಾನ ಅಭಿಯಾನದ ನಂತರ ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶದಲ್ಲಿ ನಿಲ್ದಾಣ) ಮಾಡುವ ಕೆಲಸ ಕೈಗೊಳ್ಳಲಿದೆ, ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ ಅವರು ಚೀನಾದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ತಿಳಿಸಿದ್ದಾರೆ.