ಸರ್ವೋಚ್ಚ ನ್ಯಾಯಾಲಯದಿಂದ ರಾಮಸೇತುವನ್ನು ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದ ಅರ್ಜಿ ತಿರಸ್ಕೃತ !

ಅರ್ಜಿದಾರರನ್ನು ಸರಕಾರಕ್ಕೆ ಸಂಪರ್ಕಿಸಲು ಸೂಚನೆ !

ನವ ದೆಹಲಿ – ಜನರಿಗೆ ರಾಮಸೇತು ದರ್ಶನ ಪಡೆಯಲು ಸಾಧ್ಯವಾಗಲಿ, ಅದಕ್ಕಾಗಿ ರಾಮಸೇತು ಇರುವ ಸಮುದ್ರದಲ್ಲಿ ಕೆಲವು ಕಿಲೋಮೀಟರ್ ಪ್ರದೇಶದಲ್ಲಿ ಗೋಡೆ ಕಟ್ಟಬೇಕು, ಹಾಗೂ ರಾಮ ಸೇತು ‘ರಾಷ್ಟ್ರೀಯ ಸ್ಮಾರಕ’ವೆಂದು ಘೋಷಿಸಬೇಕೆಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ ಮತ್ತು ನ್ಯಾಯಮೂರ್ತಿ ಸುಧಾಂಶೂ ಧುಲಿಯಾ ಇವರ ವಿಭಾಗೀಯ ಪೀಠದಿಂದ ತಿರಸ್ಕರಿಸಲಾಗಿದೆ.

ಅಶೋಕ ಪಾಂಡೆ ಇವರು ಈ ಅರ್ಜಿ ಸಲ್ಲಿಸಿದ್ದರು.

ವಿಭಾಗೀಯ ಪೀಠ, ಇದು ಒಂದು ಸರಕಾರಿ ಸೂತ್ರವಾಗಿದ್ದು ಅರ್ಜಿದಾರರು ಈ ಕುರಿತು ಸರಕಾರವನ್ನು ಸಂಪರ್ಕಿಸಬೇಕು ಎಂದು ಹೇಳಿದೆ. ಅರ್ಜಿದಾರ ಪಾಂಡೆ ಇವರು ತಮ್ಮ ಅರ್ಜಿ ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯ ಸ್ವಾಮಿ ಇವರು ದಾಖಲಿಸಿರುವ ರಾಮಸೇತು ಸಂದರ್ಭದಲ್ಲಿನ ಅರ್ಜಿಯ ಜೊತೆಗೆ ಜೋಡಿಸಲು ಆಗ್ರಹಿಸಿದ್ದರು; ಆದರೆ ನ್ಯಾಯಾಲಯ ಈ ಬೇಡಿಕೆಯನ್ನು ಕೂಡ ತಿರಸ್ಕರಿಸಿತ್ತು. ಡಾ. ಸ್ವಾಮಿ ಇವರು ಕೂಡ ರಾಮಸೇತು ‘ರಾಷ್ಟ್ರೀಯ ಪರಂಪರೆ’ ಘೋಷಿಸಬೇಕೆಂದು ಕೆಲವು ವರ್ಷಗಳ ಹಿಂದೆಯೇ ಒಂದು ಅರ್ಜಿಯ ಮೂಲಕ ದಾಖಲಿಸಿದ್ದರು ಅದು ಇಲ್ಲಿಯವರೆಗೆ ಬಾಕಿ ಇದೆ. ಕೇಂದ್ರ ಸರಕಾರ ಈ ಅರ್ಜಿಯ ಬಗ್ಗೆ, ಸಾಂಸ್ಕೃತಿಕ ಸಚಿವಾಲಯದಿಂದ ರಾಮಸೇತು ‘ರಾಷ್ಟ್ರೀಯ ಪರಂಪರೆ’ ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.