ವಿಧಾನಸಭಾ ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ನೀಡುವ ಘೋಷಣೆಯ ಮೇಲೆ ನಿಷೇಧ ಹೇರಲು ಒತ್ತಾಯ !

ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರಕಾರಕ್ಕೆ ನೋಟಿಸ್ !

ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ವಿಧಾನಸಭೆಯ ಚುನಾವಣೆಯ ಮೊದಲು ರಾಜಕೀಯ ಪಕ್ಷಗಳಿಂದ ಉಚಿತ ನೀಡುವ ಯೋಜನೆಯ ಸಂದರ್ಭದಲ್ಲಿ ಒಂದು ಅರ್ಜಿಯ ವಿಚಾರಣೆ ನಡೆಸುವಾಗ ಚುನಾವಣೆ ಆಯೋಗ, ಕೇಂದ್ರ ಸರಕಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಇವರಿಗೆ ನೋಟಿಸ್ ಜಾರಿಗೊಳಿಸಿ 4 ವಾರದಲ್ಲಿ ಉತ್ತರ ನೀಡುವಂತೆ ಆದೇಶ ನೀಡಿದೆ. ಭಟ್ಟುಲಾಲ ಜೈನ ಇವರು ಈ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯಲ್ಲಿ, ಚುನಾವಣೆಯಲ್ಲಿ ಮತ ಪಡೆಯುವುದಕ್ಕಾಗಿ ಉಚಿತ ಯೋಜನೆ ನೀಡುವ ಘೋಷಣೆ ಮಾಡಲಾಗುತ್ತದೆ. ಇದರಿಂದ ಜನರ ಮೇಲೆ ಅದರ ಭಾರ ಬರುತ್ತದೆ. ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳಿಂದ ನೀಡಲಾಗುವ ಇಂತಹ ಘೋಷಣೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಲಾಗಿದೆ.

ಸಂಪಾದಕೀಯ ನಿಲಿವು

ಜನರಿಗೆ ತ್ಯಾಗ ಕಲಿಸುವ ಬದಲು ಎಲ್ಲವೂ ಉಚಿತವಾಗಿ ನೀಡುವ ರೂಢಿ ಮಾಡಿಸಿದ ರಾಜಕೀಯ ಪಕ್ಷ ಪ್ರಜಾಪ್ರಭುತ್ವದ ಗೆಲಿ ಮಾಡುತ್ತಿದ್ದಾರೆ !