ಹಿಂದಿ ಚಿತ್ರರಂಗದಲ್ಲಿ ಹೆಣ್ಣಿನ ಗುಣಕ್ಕಿಂತ ಆಕೆಯ ದೇಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ! – ನಟಿ ಪಾಯಲ್ ಘೋಷ್

ಮುಂಬಯಿ – ನಟಿ ಪಾಯಲ್ ಘೋಷ್ ಇವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಹಿಂದಿ ಚಿತ್ರರಂಗವನ್ನು ಟೀಕಿಸಿ ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳಿದ್ದಾರೆ. ಪಾಯಲ್ ಘೋಷ್ ಅವರು ಪೋಸ್ಟ್‌ನಲ್ಲಿ, ಧನ್ಯವಾದ ದೇವ ನನಗೆ ದಕ್ಷಿಣ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಲು ಅವಕಾಶ ನೀಡಿದೆ. ಒಂದು ವೇಳೆ ನಾನು ಹಿಂದಿ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದ್ದರೆ ಅದಕ್ಕೂ ಮುನ್ನ ಬಟ್ಟೆ ತೆಗೆಯ ಬೇಕಾಗುತ್ತಿತ್ತು; ಏಕೆಂದರೆ ಅಲ್ಲಿ ಗುಣಮಟ್ಟಕ್ಕಿಂತ ಹೆಣ್ಣಿನ ದೇಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.’ ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಸಂಪಾದಕೀಯ ನಿಲುವು

ಹಿಂದಿ ಚಿತ್ರರಂಗದ ಈ ವಾಸ್ತವ ಇಂದು ಜಗತ್ತಿಗೆ ಗೊತ್ತಿದೆ. ಇಂತಹ ಚಲನಚಿತ್ರೋದ್ಯಮವು ನೈತಿಕತೆಯನ್ನು ಸೃಷ್ಟಿಸಲು ಚಲನಚಿತ್ರಗಳ ಮೂಲಕ ಎಂದಾದರೂ ಪ್ರಭೋದನೆ ಮಾಡಲು ಸಾಧ್ಯವೇ ?