ಮಾರ್ಚ್ 2024 ರಿಂದ ಸ್ಲೀಪರ್ ಕೋಚ್‌ನೊಂದಿಗೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharat Express) ಸಂಚರಿಸಲಿದೆ !

ನವದೆಹಲಿ – ದೇಶದಲ್ಲಿ ವೇಗದ ಮತ್ತು ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಈಗ ಸ್ಲೀಪರ್ ಕೋಚ್‌ಗಳನ್ನು ಹೊಂದಲಿದೆ. ಸದ್ಯಕ್ಕೆ ದೇಶದ ವಿವಿಧ ಭಾಗಗಳಲ್ಲಿ ಓಡುತ್ತಿರುವ 33 ವಂದೇ ಭಾರತ್ ರೈಲುಗಳು ಕೇವಲ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೊಂದಿವೆ. ಇನ್ನುಮುಂದೆ ಮಲಗಿಕೊಂಡೇ ಪ್ರಯಾಣಿಸಬಹುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇವರು ಮಾಹಿತಿ ನೀಡಿದ್ದಾರೆ. ಈ ರೈಲಿನ ‘ಸ್ಲೀಪರ್ ಕೋಚ್’ ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ‘ಪ್ರೀಮಿಯಂ ರೈಲು’ಗಳಿಗಿಂತ ಹೆಚ್ಚು ವಿಶೇಷ ಮತ್ತು ಆಕರ್ಷಕವಾಗಿರುತ್ತದೆ, ಎಂದು ವೈಷ್ಣವ್ ಹೇಳಿದರು.

ಸದ್ಯ ಭಾರತದಲ್ಲಿ 33 ವಂದೇ ಭಾರತ ರೈಲುಗಳು ಓಡುತ್ತಿವೆ. ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿರುವ ಒಟ್ಟು 75 ವಂದೇ ಭಾರತ ರೈಲುಗಳು ಕಾರ್ಯನಿರ್ವಹಿಸಲಿವೆ. ಇದರ ನಂತರ, ಈ ಗಾಡಿಗಳ ಉತ್ಪಾದನೆಯನ್ನು ನಿಲ್ಲಿಸಲಾಗುತ್ತದೆ. ಸರಕಾರ ‘ವಂದೇ ಭಾರತ್ ಮೆಟ್ರೋ’ ವನ್ನು ಕೂಡ ಸಿದ್ಧಪಡಿಸಿಕೊಂಡಿದೆ. ಈ ಗಾಡಿಯ ಮಾದರಿಯು ಈ ವರ್ಷದ ಡಿಸೆಂಬರ್ ವೇಳೆಗೆ ಸಿದ್ಧವಾಗಬಹುದು. ವಂದೇ ಮೆಟ್ರೋ 12 ಕೋಚ್‌ಗಳನ್ನು ಹೊಂದಿರುತ್ತದೆ.