ನವ ದೆಹಲಿ – ಅಫಘಾನಿಸ್ತಾನ ಅಕ್ಟೋಬರ್ 1 ರಿಂದ ಭಾರತದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿದೆ. ಅಘಘಾನಿಸ್ತಾನ ತನ್ನ ಹೇಳಿಕೆಯಲ್ಲಿ, “ಭಾರತದೊಂದಿಗಿನ ನಮ್ಮ ಐತಿಹಾಸಿಕ ಸಂಬಂಧ ಮತ್ತು ಅಂತರಾಷ್ಟ್ರೀಯ ವಿಷಯಗಳ ಮೇಲಿನ ವಿವಿಧ ಪಾಲುದಾರಿಕೆಗಳ ದೃಷ್ಟಿಯಿಂದ ಪರಿಶೀಲಿಸಿದರೆ, ಈ ನಿರ್ಣಯವು ಅತ್ಯಂತ ನೋವಿನಿಂದ ಕೂಡಿದೆಯಾದರೂ, ನಾವು ಅದನ್ನು ಬಹಳ ಎಚ್ಚರಿಕೆಯಿಂದ ಮತ್ತು ಸೂಕ್ತ ವಿಚಾರವಿನಿಮಯವನ್ನು ಮಾಡಿಯೇ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಒಂದು ಕಡೆ ಭಾರತದಿಂದ ನಮಗೆ ಸಾಕಷ್ಟು ಬೆಂಬಲ ಸಿಗುತ್ತಿಲ್ಲ. ಮತ್ತೊಂದೆಡೆ ಅಫಘಾನಿಸ್ತಾನದಲ್ಲಿ ಕಾನೂನುಬದ್ಧ ಸರಕಾರವಿಲ್ಲ. ಈ ಕಾರಣದಿಂದಾಗಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ‘ರಾಯಭಾರ ಕಚೇರಿ ಸ್ಥಳಾಂತರಗೊಳ್ಳುವವರೆಗೆ ಭಾರತದಲ್ಲಿನ ವಾಣಿಜ್ಯ ಸೇವೆಗಳು ಮುಂದುವರಿಯುತ್ತವೆ’, ಎಂದು ರಾಯಭಾರ ಕಚೇರಿಯು ಸ್ಪಷ್ಟಪಡಿಸಿದೆ.
Afghan Embassy in India closes operations, calls Taliban “illegitimate regime”
Read @ANI Story | https://t.co/RszNKQXwch#AfghanEmbassy #India #Taliban pic.twitter.com/wOYC1CIHal
— ANI Digital (@ani_digital) September 30, 2023
ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ ಅಧಿಕಾರಕ್ಕೆ ಬಂದ ನಂತರವೂ, ಭಾರತದಲ್ಲಿರುವ ಅಲ್ಲಿನ ಮೊದಲಿನ ಸರಕಾರದ ರಾಯಭಾರ ಕಚೇರಿ ತೆರೆದಿತ್ತು; ಆದರೆ ಅದೇ ಸಮಯದಲ್ಲಿ, ‘ಭಾರತದಲ್ಲಿ ಅವರ ಅಧಿಕೃತ ರಾಯಭಾರಿ ಯಾರು?’ ಎಂಬುದು ಸ್ಪಷ್ಟವಾಗಿರಲಿಲ್ಲ. ಈ ರಾಯಭಾರ ಕಚೇರಿಗಳ ರಾಯಭಾರಿಗಳು ಮತ್ತು ಇತರ ಅಧಿಕಾರಿಗಳು ಭಾರತವನ್ನು ತೊರೆದು ಯುರೋಪ್ ಮತ್ತು ಅಮೇರಿಕಾದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದೆ.