ಶಾಹರುಖ ಸೈಫಿ ಇಸ್ಲಾಮಿ ಧರ್ಮೋಪದೇಶಕನ ವಿಡಿಯೋ ನೋಡಿ ‘ಜಿಹಾದಿ’ಯಾದ ! – ಎನ್.ಐ.ಎ.

ಕೇರಳ ರೈಲು ಅಗ್ನಿ ಅವಘಡ ಪ್ರಕರಣದಲ್ಲಿ ದಾಖಲಿಸಿರುವ ಆರೋಪ ಪತ್ರದಲ್ಲಿ ‘ಎನ್.ಐ.ಎ.’ಯಿಂದ ಮಹತ್ವಪೂರ್ಣ ಮಾಹಿತಿ !

ತಿರುವನಂತಪುರಂ (ಕೇರಳ) – ಏಪ್ರಿಲ್ ೨೦೨೩ ರಲ್ಲಿ ಕೇರಳದಲ್ಲಿನ ರೈಲಿನ ಒಂದು ಭೋಗಿಗೆ ಬೆಂಕಿ ಹಚ್ಚುವ ಘಟನೆಯ ಕುರಿತು ರಾಷ್ಟ್ರೀಯ ತನಿಖಾ ದಳವು ಆರೋಪ ಪತ್ರ ದಾಖಲಿಸಿದೆ. ಇದರಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಶಾಹರುಖ್ ಸೈಫೀ ಎಂಬ ೨೭ ವರ್ಷದ ಆರೋಪಿ ಕಟ್ಟರವಾದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿ ಅಗ್ನಿ ಅವಘಡದ ಕೃತ್ಯ ಮಾಡಿರುವ ಉಲ್ಲೇಖ ಮಾಡಲಾಗಿದೆ. ಏಪ್ರಿಲ್ ನಲ್ಲಿ ‘ಅಲ್ಲಪುಳಾ ಕನ್ನೂರ್ ಎಕ್ಸಿಕ್ಯೂಟಿವ್ ಎಕ್ಸ್ ಪ್ರೆಸ್’ ನ ‘ಡಿ ೧’ ಭೋಗಿಗೆ ಬೆಂಕಿ ಹಚ್ಚಿದ್ದರಿಂದ ಓರ್ವ ಹುಡುಗನ ಸಹಿತ ೩ ಪ್ರಯಾಣಿಕರು ಸಾವನ್ನಪ್ಪಿದ್ದರು ಹಾಗೂ ೯ ಜನರು ಗಾಯಗೊಂಡಿದ್ದರು. ಸೈಫಿ ಪ್ರಯಾಣಿಕರ ಮೇಲೆ ಪೆಟ್ರೋಲ್ ಸಿಂಪಡಿಸಿದ್ದನು ಮತ್ತು ಜನರನ್ನು ಕೊಲ್ಲುವ ಉದ್ದೇಶದಿಂದಲೇ ‘ಲೈಟರ್’ ನಿಂದ ಭೋಗಿ ಹೊತ್ತಿಸಿದ್ದನು.

‘ಎನ್.ಐ.ಎ.’ನ ಹೇಳಿಕೆಯ ಪ್ರಕಾರ ಮೂಲತಃ ದೆಹಲಿಯಲ್ಲಿನ ಶಾಹಿನಬಾಗನ ನಿವಾಸಿ ಆಗಿರುವ ಶಾಹರುಖ್ ಸೈಫೀ ಇವನ ಮೇಲೆ ಭಯೋತ್ಪಾದಕ ಕೃತ್ಯ ಮಾಡಿರುವ ಆರೋಪವಿದೆ. ಅವನು ಕಟ್ಟರವಾದ ಹಬ್ಬಿಸುವುದಕ್ಕಾಗಿ ಪಾಕಿಸ್ತಾನ ಹಾಗೂ ಇತರ ಸ್ಥಳಗಳಲ್ಲಿನ ಅನೇಕ ಇಸ್ಲಾಮಿ ಧರ್ಮೋಪದೇಶಕರ ಅನುಕರಣೆ ಮಾಡಿರುವುದು ಕೂಡ ಆರೋಪ ಪತ್ರದಲ್ಲಿ ಹೇಳಲಾಗಿದೆ ಇದಕ್ಕಾಗಿ ಅವನು ಅವರ ಆನ್ಲೈನ್ ವಿಡಿಯೋಗಳನ್ನು ನೋಡುತ್ತಿದ್ದನು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇದರಿಂದ ಧರ್ಮದ ಬಗ್ಗೆ ಮಾರ್ಗದರ್ಶನ ನೀಡುವ ಹೆಸರಿನಲ್ಲಿ ಝಾಕೀರ್ ನಾಯಿಕ ನಂತಹ ಇಸ್ಲಾಮಿ ಧರ್ಮೋಪದೇಶಕ ಏನು ಮಾಡುತ್ತಾರೆ ಇದು ಮತ್ತೊಮ್ಮೆ ಸಾಬೀತಾಗಿದೆ. ದೇಶದ ಭದ್ರತೆಯ ಬಗ್ಗೆ ಸವಾಲಾಗಿರುವ ಇಂತಹವರ ವಿರುದ್ಧ ಈಗ ಸರಕಾರ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ.