ಇಂಫಾಲ್ (ಮಣಿಪುರ) – ಕಳೆದ ಕೆಲ ಸಮಯದಿಂದ ಶಾಂತವಾಗಿದ್ದ ಮಣಿಪುರವು ಈಗ ಪುನಃ ಧಗಧಗನೆ ಉರಿಯುತ್ತಿದೆ. ಸಪ್ಟೆಂಬರ್ ೨೭ರ ಸಂಜೆ ೫೦೦ ರಿಂದ ೬೦೦ ಆಂದೋಲನಕಾರರು ರಾಜ್ಯದ ಮುಖ್ಯಮಂತ್ರಿ ಎನ್. ಬಿರೇನ ಸಿಂಹರವರ ಇಂಫಾಲ ಪೂರ್ವದ ಹೆನಗಾಂಗನಲ್ಲಿರುವ ಪಿತ್ರಾರ್ಜಿತ ಮನೆಯ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದರು. ಈ ಸಮಯದಲ್ಲಿ ಅಲ್ಲಿನ ಸುರಕ್ಷಾರಕ್ಷಕರು ಗುಂಡಿನ ದಾಳಿ ಮಾಡಿ ಅಶ್ರುವಾಯು ಸಿಡಿಸಿದರು. ಸುರಕ್ಷಾರಕ್ಷಕರು ೧೦೦ ಮೀಟರ್ ಅಂತರದಲ್ಲಿಯೇ ಗುಂಪನ್ನು ತಡೆದರು. ಅನಂತರ ಪರಿಸರದಲ್ಲಿನ ವಿದ್ಯುತ್ ಸೇವೆಯನ್ನು ಕಡಿತಗೊಳಿಸಲಾಗಿತ್ತು. ಮುಖ್ಯಮಂತ್ರಿ ಸಿಂಹರವರು ಸದ್ಯ ಈ ಮನೆಯಲ್ಲಿ ವಾಸಿಸದೇ ಅವರ ಸರಕಾರಿ ಮನೆಯಲ್ಲಿ ವಾಸಿಸುತ್ತಿದ್ದಾರೆ.
ರಾಜ್ಯದಲ್ಲಿ ಹಿಂದೂ ಮೈತಯಿ ಸಮುದಾಯದ ೨ ಯುವಕರನ್ನು ಕೊಂದಿರುವ ಘಟನೆಯು ಇತ್ತೀಚಿಗೆ ಬೆಳಕಿಗೆ ಬಂದಿದ್ದು ಹಿಜಾಮ ಲಿಂಥೋಇಂಗಮಿ (೧೭ ವರ್ಷ) ಹಾಗೂ ಫಿಜಾಮ ಹೆಮಜೀತ (೨೦ ವರ್ಷ) ಇವು ಮೃತರ ಹೆಸರುಗಳಾಗಿವೆ. ಇವರಿಬ್ಬರು ಜುಲೈ ೬ ರಿಂದ ಕಾಣೆಯಾಗಿದ್ದರು. ಅವರನ್ನು ಭಯೋತ್ಪಾದಕರು ಕೊಂದಿದ್ದು ಅವರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಿಂದ ಬೆಳಕಿಗೆ ಬಂದಿವೆ. ಇದರಿಂದಾಗಿ ನಗರದಲ್ಲಿ ಅನೇಕ ವಿದ್ಯಾರ್ಥಿಗಳು ಹಿಂಸಾತ್ಮಕ ಪ್ರತಿಭಟನೆಯನ್ನು ಮಾಡಿದರು. ಸಪ್ಟೆಂಬರ್ ೨೭ ರ ಬೆಳಿಗ್ಗೆ ಇಂಫಾಲ ಪಶ್ಚಿಮ ಜಿಲ್ಲೆಯ ಉಪಾಯುಕ್ತರ ಕಚೇರಿಯನ್ನು ಧ್ವಂಸಗೊಳಿಸಲಾಯಿತು. ಹಾಗೆಯೆ ೨ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.
Manipur: Over 500 protesters try to storm into CM N Biren Singh’s residence in Imphal, dispersed by security forceshttps://t.co/HzTddClIrv
— OpIndia.com (@OpIndia_com) September 28, 2023
ಸಂಪಾದಕೀಯ ನಿಲುವುಇಂತಹ ಘಟನೆಗಳಿಂದ ರಾಜ್ಯದಲ್ಲಿನ ಹಿಂಸಾಚಾರವನ್ನು ಬುಡಸಹಿತ ಮುಗಿಸಲು ಉಪಾಯ ಮಾಡದಿರುವುದರಿಂದ ಹಿಂಸಾಚಾರವು ಆಗಾಗ ಭುಗಿಲೇಳುತ್ತಿದೆ, ಎಂದು ಹೇಳಬಹುದು ! |