ಕೆನಡಾದಲ್ಲಿನ ಭಾರತೀಯರಿಂದ ಅರ್ಥವ್ಯವಸ್ಥೆಗೆ ಮೂರು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣ ಆದಾಯ !

ಟೊರೆಂಟೋ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಿಂದ ಕೆನಡಾ ಮತ್ತು ಭಾರತ ಇವರಲ್ಲಿ ವಿವಾದ ನಿರ್ಮಾಣವಾಗಿದೆ. ಭಾರತವು ಕೆನಡಾದ ನಾಗರಿಕರಿಗೆ ಭಾರತದ ವೀಸಾ ನೀಡುವುದು ತಾತ್ಕಾಲಿಕವಾಗಿ ನಿಲ್ಲಿಸಿದೆ. ಈ ನಿರ್ಣಯದಿಂದ ಕೆನಡಾದಲ್ಲಿನ ಅರ್ಥಶಾಸ್ತ್ರಜ್ಞರಿಂದ ಕಳವಳ ವ್ಯಕ್ತಪಡಿಸಲಾಗಿದೆ; ಕಾರಣ ಕೆನಡಾದಲ್ಲಿನ ೨೦ ಲಕ್ಷ ಭಾರತೀಯರು ಕೆನಡಾದ ಅರ್ಥ ವ್ಯವಸ್ಥೆಗೆ ಪ್ರತಿವರ್ಷ ೩ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಕೊಡುಗೆ ನೀಡುತ್ತಾರೆ. ಪ್ರತಿವರ್ಷ ೭೫ ಸಾವಿರ ಕೋಟಿ ರೂಪಾಯಿಯಲ್ಲಿ ಕೆನಡಾಗೆ ಭಾರತ ಒಂದರಿಂದಲೇ ಹೆಚ್ಚು ಕಡಿಮೆ ಎರಡು ಲಕ್ಷ ವಿದ್ಯಾರ್ಥಿಗಳ ಶುಲ್ಕದಿಂದ ಸಿಗುತ್ತದೆ.

ಕೆನಡಾಗೆ ಅದರ ‘ಟೊರೆಂಟ್ ವಾಟರ್ಲೂ ಐಟಿ ಕಾರಿಡಾರ್’ ಯೋಜನೆ ಅಮೆರಿಕಾದ ಸಿಲಿಕಾನ್ ವ್ಯಾಲಿಯ ಭೂಮಿಯಲ್ಲಿ ಅಭಿವೃದ್ಧಿಗೊಳಿಸುವುದಿದೆ. ಇದಕ್ಕಾಗಿ ಅದು ಭಾರತೀಯರ ಮೇಲೆ ಅವಲಂಬಿಸಿದೆ. ಕೆನಡಾ ಇದಕ್ಕಾಗಿ ಚೀನಾದ ಔದ್ಯೋಗಿಕತೆಯ ಬದಲು ಭಾರತೀಯರಿಗೆ ಆದ್ಯತೆ ನೀಡಿದೆ. ಕೆನಡಾದಲ್ಲಿ ಎಲ್ಲಕ್ಕಿಂತ ಹೆಚ್ಚು ಭಾರತಿಯ ನಾಗರಿಕರು ಆಸ್ತಿಯಲ್ಲಿ ಬಂಡವಾಳ ಹೂಡುತ್ತಾರೆ. ಚೀನಾ ಎರಡನೇ ಸ್ಥಾನದಲ್ಲಿದೆ. ಭಾರತೀಯರು ಪ್ರತಿ ವರ್ಷ ಸುಮಾರು ೫೦ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಹೂಡಿಕೆ ಮಾಡುತ್ತಾರೆ. ಭಾರತೀಯರ ಜಿನಸಿ ಅಂಗಡಿಗಳು, ಉಪಹಾರ ಗೃಹಗಳು ಮುಂತಾದ ಕಿರು ವ್ಯವಸಾಯದಲ್ಲಿ ೭೦ ಸಾವಿರ ಕೋಟಿ ರೂಪಾಯಿ ಹೂಡಿದ್ದಾರೆ. ಭಾರತೀಯ ಮೂಲದ ನಾಗರಿಕರು ಕೆನಡಾದಲ್ಲಿ ನಡೆಸುವ ಪ್ರವಾಸದಿಂದಾಗಿ ಸುಮಾರು ೬೦ ಸಾವಿರ ಕೋಟಿ ರೂಪಾಯಿ ಇಲ್ಲಿಯ ವಿವಿಧ ಟ್ರಾವೆಲ್ ಏಜೆನ್ಸಿಗೆ ದೊರೆಯುತ್ತವೆ. ವಿವಿಧ ಭಾರತೀಯ ಕಂಪನಿಗಳಿಂದ ಕೆನಡಾದಲ್ಲಿ. ಮೇ ೨೦೨೩ ವರೆಗೆ ೪೧ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹೂಡಿಕೆ ಮಾಡಿ ೧೭ ಸಾವಿರ ಉದ್ಯೋಗ ನೀಡಿದ್ದಾರೆ.

ಹಿಂದೂಗಳಿಗೆ ಬೆದರಿಕೆ ನೀಡುವವರ ಮೇಲೆ ಕೆನಡಾ ಕ್ರಮ ಕೈಗೊಳ್ಳುವುದು !

ಹಿಂದೂಗಳನ್ನು ಕೆನಡಾ ಬಿಟ್ಟು ಹೋಗಲು ಬೆದರಿಕೆ ನೀಡಿರುವುದರಿಂದ ಕೆನಡಾದ ನಾಗರಿಕ ಸುರಕ್ಷಾ ಸಚಿವಾಲಯವು, ಹಿಂದುಗಳ ವಿರೋಧದಲ್ಲಿ ದ್ವೇಷ ಹಬ್ಬಿಸುವ ಮತ್ತು ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡುವವರ ಮೇಲೆ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು. (ಕೇವಲ ಹೀಗೆ ಹೇಳದೆ ಪ್ರತ್ಯಕ್ಷ ಕೃತಿ ಮಾಡಿ ತೋರಿಸಬೇಕು ! – ಸಂಪಾದಕರು)

ಕೆನಡಾದಲ್ಲಿ ಕ್ರೈಸ್ತ ಕುಕಿ ಸಂಘಟನೆಯಿಂದ ಖಲಿಸ್ತಾನಿಗಳಿಗೆ ಬೆಂಬಲ !

ಮಣಿಪುರದಲ್ಲಿನ ಕ್ರೈಸ್ತ ಧರ್ಮದ ಕುಕಿ ಜನಾಂಗದ ಸಂಘಟನೆಯಿಂದ ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರ ಜೊತೆಗೆ ಕೈಜೋಡಿಸಿದೆ. ಕುಕಿ ಪ್ರತ್ಯೇಕತಾವಾದಿ ಸಂಘಟನೆ ‘ನಾರ್ತ್ ಅಮೇರಿಕನ್ ಮಣಿಪುರ್ ಟ್ರೈಬಲ್ ಅಸೋಸಿಯೇಷನ್’ ನ ಅಧ್ಯಕ್ಷ ಲಿಯೇನ್ಲಲ್ಥಾಂಗ ಗಂಗ್ತೆ ಇವರು ಕೆನಡಾದ ಸರೆ ನಗರದಲ್ಲಿ ಖಲಿಸ್ತಾನಿ ಬೆಂಬಲಿಗರ ಒಂದು ಸಭೆಯಲ್ಲಿ ಭಾಗವಹಿಸಿದರು.