‘ರಷ್ಯಾ ಶಾಂತಿ ನಿರ್ಮಿಸಿ ಉಕ್ರೇನ್ ಜೊತೆ ಚರ್ಚೆ ಮಾಡಬೇಕಂತೆ !’ – ಜಸ್ಟಿನ್ ಟ್ರುಡೊ

ರಷ್ಯಾಗೆ ಜಸ್ಟಿನ್ ಟ್ರುಡೊರವರ ಉಪದೇಶ !

ನ್ಯೂಯಾರ್ಕ್ (ಅಮೇರಿಕಾ) – ಭಾರತದ ಮೇಲೆ ಹುರುಳಿಲ್ಲದ ಆರೋಪಿಸುವ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊರವರು ಈಗ ರಷ್ಯಾದ ವಿರುದ್ಧ ಹೇಳಿಕೆ ನೀಡಿದ್ದಾರೆ. ಅವರು ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಮಾತನಾಡುವಾಗ, ರಷ್ಯಾವು ಇಂಧನ ಹಾಗೂ ಖಾದ್ಯವನ್ನು ತನ್ನ ಶಸ್ತ್ರವನ್ನಾಗಿಸಿದೆ. ಇವುಗಳ ಕೊರತೆಯಿಂದಾಗಿ ಕೋಟ್ಯಂತರ ಜನರು ಕೆಂಗೆಟ್ಟಿದ್ದಾರೆ. ಅನೇಕ ಕಡೆಗಳಲ್ಲಿ ಹಸಿವಿನಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದೆ, ಎಂದು ಹೇಳಿದರು.

ಟ್ರುಡೊರವರು ಮಾತು ಮುಂದುವರಿಸುತ್ತಾ, ನಮಗೆ ಉಕ್ರೇನನ್ನು ಬೆಂಬಲಿಸುವುದು ಅಥವಾ ಸಾತತ್ಯಪೂರ್ಣ ವೈಶ್ವಿಕ ವಿಕಾಸದ ಅಂಶದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು ಎಂದು ಅನಿಸುವುದಿಲ್ಲ. ಎರಡಕ್ಕೂ ಒಂದೇಬಾರಿ ಪ್ರಯತ್ನಿಸಬೇಕು. ರಷ್ಯಾವು ಉಕ್ರೇನಿನಿಂದ ಸೈನ್ಯವನ್ನು ಹಿಂದೆ ಪಡೆಯಬೇಕು. ಎರಡೂ ದೇಶಗಳೂ ಶಾಂತಿಯನ್ನು ತರಲು ಪ್ರಯತ್ನಿಸಬೇಕು. ಈ ಶಾಂತಿಯು ಮಾನವತಾವಾದ ಇತ್ಯಾದಿ ಮೌಲ್ಯಗಳ ಮೇಲೆ ಆಧರಿಸಿರಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

ತನ್ನದೇ ದೇಶದಲ್ಲಿ ಆಡಳಿತ ಮತ್ತು ಅಧಿಕಾರವಿರುವಾಗ ಅಲ್ಲಿನ ಹಿಂದೂಗಳ ದೇವಸ್ಥಾನಗಳ ಹಾಗೂ ಉಚ್ಚಾಯುಕ್ತಾಲಯದ ಮೇಲಿನ ದಾಳಿಗಳನ್ನು ತಡೆದು ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿರುವ ಟ್ರುಡೊ ಇನ್ನೊಂದು ದೇಶಕ್ಕೆ ಯಾವ ಬಾಯಲ್ಲಿ ಉಪದೇಶ ನೀಡುತ್ತಿದ್ದಾರೆ ?