ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ದಿನವಿಡಿ ಚರ್ಚೆ : ಕಾಂಗ್ರೆಸ್ ಸಹಿತ ಅನೇಕ ಪಕ್ಷಗಳ ಬೆಂಬಲ

ಈ ಮೀಸಲಾತಿಯಲ್ಲಿ ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀಡಲು ಒತ್ತಾಯ

ನವ ದೆಹಲಿ – ಲೋಕಸಭೆಯಲ್ಲಿ ಮಂಡಿಸಲಾದ ‘ನಾರಿ ಶಕ್ತಿ ವಂದನ’ ಮಸೂದೆ ಕುರಿತು ಸಪ್ಟೆಂಬರ್ ೨೦ ರಂದು ದಿನವಿಡೀ ಚರ್ಚೆ ನಡೆಯಿತು. ಈ ಮಸೂದೆಯ ಮೂಲಕ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಯಲ್ಲಿ ಶೇ. ೩೩ ರಷ್ಟು ಮೀಸಲಿಡಲಾಗುವುದು. ಈ ಮಸೂದೆಯ ಬಗ್ಗೆ ಚರ್ಚೆ ನಡೆಸುವಾಗ ಅನೇಕ ಪಕ್ಷಗಳು ಬೆಂಬಲಿಸಿದರು. ಕಾಂಗ್ರೆಸ್ ನ ನಾಯಕಿ ಸೋನಿಯಾ ಗಾಂಧಿ ಇವರು ಕೂಡ ಈ ಮಸೂದೆಯನ್ನು ಬೆಂಬಲಿಸುತ್ತಾ ಆದಷ್ಟು ಬೇಗನೆ ತರಲು ಆಗ್ರಹಿಸಿದರು. ಅವರ ಪತಿ ಮತ್ತು ಮಾಜಿ ಪ್ರಧಾನಿ ರಾಜೀವ ಗಾಂಧಿ ಇವರು ಮಸೂದೆಯನ್ನು ಮೊದಲ ಬಾರಿ ಮಂಡಿಸಿದ್ದರು ಎಂದು ಸೋನಿಯಾ ಗಾಂಧಿ ಈ ಸಮಯದಲ್ಲಿ ಹೇಳಿದರು. ರಾಜ್ಯಸಭೆಯಲ್ಲಿ ಕೂಡ ಈ ಮಸೂದೆ ಮಂಡಿಸಲಾಯಿತು. ಆ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇವರು ಓಬಿಸಿ ಪ್ರವರ್ಗದಲ್ಲಿನ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.