ಶಾಲೆಗಳಲ್ಲಿ ನಡೆಯುತ್ತಿರುವ ಇಸ್ಲಾಂ ಪ್ರಚಾರ ನಿಲ್ಲಿಸಿ ! – ಶ್ರೀ. ಜಯೇಶ್ ಥಳಿ

ವಿಶೇಷ ಸಂವಾದ : ಸೆಕ್ಯುಲರ್ ಶಾಲೆಗಳಲ್ಲಿ ಇಸ್ಲಾಂನ ಪ್ರಚಾರ ?

ಗೋವಾದಲ್ಲಿ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ‘ಇಸ್ಲಾಮಿಕ್ ಕಾರ್ಯಾಗಾರ’ಗಳನ್ನು ಆಯೋಜಿಸಲಾಗುತ್ತಿದೆ ಎಂದು ಸ್ವತಃ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ’ ಹೇಳಿದೆ. ಈ ಸಂಘಟನೆಗೆ ಟರ್ಕಿಯ ‘ದುಗವಾ’ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿದೆ. ವಿದ್ಯಾರ್ಥಿಗಳಲ್ಲಿ ಕಟ್ಟರ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಿ ‘ಲವ್ ಜಿಹಾದ್’ ಆಧಾರಿತ ‘ದಿ ಕೇರಳ ಸ್ಟೋರಿ’ ಸಿನಿಮಾದಂತೆ ‘ದಿ ಗೋವಾ ಸ್ಟೋರಿ’ ತಯಾರಾಗುತ್ತಿದೆ. ಗೋವಾದ ಪಾಲಕರು ಮುಂದೆ ಬಂದು ಇಂತಹ ಘಟನೆಗಳನ್ನು ಎಲ್ಲರಿಗೂ ಹೇಳಬೇಕು, ಇಲ್ಲದಿದ್ದರೆ ವಿದ್ಯಾರ್ಥಿಗಳು ಇನ್ನೂ ಈ ಷಡ್ಯಂತ್ರಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಗೋವಾದ ಆಡಳಿತ ಮತ್ತು ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸಿ ವಿದ್ಯಾರ್ಥಿಗಳಲ್ಲಿ ಜಿಹಾದಿ ಮಾನಸಿಕತೆಯನ್ನು ಬಿತ್ತುವ ಷಡ್ಯಂತ್ರವನ್ನು ನಿಲ್ಲಿಸಬೇಕು. ಗೋವಾದಲ್ಲಿ ತಥಾಕಥಿತ ಜಾತ್ಯತೀತವಾದಿಗಳು ಕೇಶವ ಸ್ಮೃತಿ ವಿದ್ಯಾಲಯದ ಘಟನೆಯ ಬಗ್ಗೆ ಮೌನವಾಗಿದ್ದಾರೆ ಮತ್ತು ಘಟನೆಯಲ್ಲಿ ಅಲ್ಪಸಂಖ್ಯಾತರು ಸಂತ್ರಸ್ತರಾಗಿರುತ್ತಿದ್ದರೆ, ಇಲ್ಲಿಯವರೆಗೆ ದೇಶಾದ್ಯಂತ ಆಕ್ರೋಶವಾಗುತ್ತಿತ್ತು. ‘ಸೆಕ್ಯುಲರ್’ ಶಾಲೆಗಳಿಂದ ಹಿಂದೂಗಳಿಗೆ ತಮ್ಮ ಸ್ವಂತದ ಧರ್ಮದ ಶಿಕ್ಷಣ ಸಿಗುತ್ತಿಲ್ಲ; ಬದಲಾಗಿ, ಶಾಲೆಗಳಿಂದಲೇ `ಸ್ಕೂಲ್ ಜಿಹಾದ್’ ನಡೆಸಲಾಗುತ್ತಿದೆ, ಇದನ್ನು ತಡೆಯಬೇಕು, ಎಂದು `ಗೋಮಂತಕ ಮಂದಿರ ಮಹಾಸಂಘ’ದ ಕಾರ್ಯದರ್ಶಿ ಶ್ರೀ. ಜಯೇಶ್ ಥಳಿ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಸೆಕ್ಯುಲರ್ ಶಾಲೆಗಳಲ್ಲಿ ಇಸ್ಲಾಂ ಧರ್ಮದ ಪ್ರಚಾರ ? ಕುರಿತ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ವಕ್ತಾರ ಶ್ರೀ. ನರೇಂದ್ರ ಸುರ್ವೆ ಅವರೊಂದಿಗೆ ಸಂವಾದ ನಡೆಸಿದರು.

ಶ್ರೀ. ಜಯೇಶ್ ಥಳಿ

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಗೋವಾದ ಸಹಸಚಿವ ಶ್ರೀ. ಸಂಜೂ ಕೊರಗಾವಕರ್ ಇವರು ಮಾತನಾಡಿ, ಗೋವಾದ ದಾಬೊಳಿ, ವಾಸ್ಕೋದ ಕೇಶವ ಸ್ಮೃತಿ ವಿದ್ಯಾಲಯದ ಆಡಳಿತ ಮಂಡಳಿಯು ಶಿಕ್ಷಣ ಇಲಾಖೆ, ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪೋಷಕರ ಕಣ್ಣು ತಪ್ಪಿಸಿ ಹಿಂದೂ ವಿದ್ಯಾರ್ಥಿಗಳನ್ನು ಹತ್ತಿರದ ಮಸೀದಿಯ ಇಸ್ಲಾಮಿಕ್ ಕಾರ್ಯಾಶಾಲೆಗೆ ಕಳುಹಿಸಿತು. ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ’ದ ಸಲಹೆ ಮೇರೆಗೆ ಶಾಲಾ ಆಡಳಿತ ಮಂಡಳಿಯು ಈ ಕೃತಿಯಲ್ಲಿ ಭಾಗಿಯಾಗಿದೆ. ಮಸೀದಿಯಲ್ಲಿದ್ದ ಮೌಲ್ವಿಗಳು ‘ಅಲ್ಲಾ ಸರ್ವಶ್ರೀಷ್ಠನಾಗಿದ್ದಾನೆ ಮತ್ತು ಹಿಂದೂಗಳ ದೇವರಾಗಿರದೇ ಕಲ್ಲುಗಳಾಗಿವೆ’ ಎಂದು ಹೇಳಿ ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡಿದ್ದಾರೆ. ಈ ಕುರಿತು ಹಿಂದುತ್ವನಿಷ್ಠ ಸಂಘಟನೆಗಳು ಪ್ರತಿಭಟನೆ ಮಾಡಿದ ನಂತರ, ಶಾಲೆಯ ಪ್ರಾಂಶುಪಾಲರನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು. ಇದಾದ ಬಳಿಕ ಶಾಲೆಯ ಆಡಳಿತ ಮಂಡಳಿಯು ತಮ್ಮನ್ನು ಉಳಿಸಿಕೊಳ್ಳಲು ವಿಧ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದೆ. ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಯಿತು. ಶಾಲೆಗಳಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ಹರಡುವ ಮೂಲಕ ಅವರನ್ನು ಮತಾಂತರಿಸುವ ಭಾಗವಾಗಿದೆ. 2018 ರಿಂದ 2023 ರ ನಡುವೆ ಗೋವಾದಲ್ಲಿ 1 ಸಾವಿರದ 753 ಹುಡುಗಿಯರು ಕಾಣೆಯಾಗಿದ್ದಾರೆ. ಸರಕಾರ ಮತ್ತು ಆಡಳಿತ ಕೇಶವ ಸ್ಮೃತಿ ವಿದ್ಯಾಲಯದ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಅಲ್ಲಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಅಮಾನತುಗೊಂಡಿರುವ ಪ್ರಾಂಶುಪಾಲರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಕೋರಗಾವಕರ್ ಒತ್ತಾಯಿಸಿದರು.