ಉಕ್ರೇನಿ ಪ್ರಜೆಗಳಿಂದ ಹಿಂದೂಗಳ ಯೋಗಾಭ್ಯಾಸ ಮತ್ತು ಧ್ಯಾನ !

ಯುದ್ಧದಿಂದ ಜೀವ ಬಿಗಿದಿಟ್ಟುಕೊಳ್ಳಬೇಕಾಗುತ್ತದೆ ಆದ್ದರಿಂದ ಶಾಂತಿ ಪಡೆಯುವ ನಿರ್ಧಾರ

ಕೀವ್ (ಉಕ್ರೇನ್) – ರಷ್ಯಾದ ಬಾಂಬ್ ದಾಳಿಯಿಂದಾಗಿ ಜೀವಕ್ಕಾಗಿ ಹೋರಾಡುತ್ತಿರುವ ಅನೇಕ ಉಕ್ರೇನಿಯನ್ನರು ಈಗ ಹಿಂದೂಗಳ ಯೋಗ ಮತ್ತು ಧ್ಯಾನದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಬೆಳಗ್ಗೆ ಯೋಗಾಭ್ಯಾಸ ಮಾಡಲು ಸಾಕಷ್ಟು ಮಂದಿ ಸೇರುತ್ತಿದ್ದಾರೆ. ಅಂತಹ ಒಂದು ಯೋಗ ಕೇಂದ್ರವು ಡೊನೆಸ್ಕ್ ಪ್ರದೇಶದ ಕ್ರಾಮಾಟೋರಸ್ಕ್ ನಗರದಲ್ಲಿದೆ. ವಾರದಲ್ಲಿ 3 ದಿನ ಜನರು ಇಲ್ಲಿ ನೆಲಮಾಳಿಗೆಯಲ್ಲಿ ಸೇರುತ್ತಾರೆ ಮತ್ತು ಸಾತ್ವಿಕ ಸಂಗೀತದೊಂದಿಗೆ ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡುತ್ತಾರೆ.

ಈ ನಿಟ್ಟಿನಲ್ಲಿ 52ರ ಹರೆಯದ ಯೋಗ ತರಬೇತುದಾರ ಸೆರ್ಹಿ ಜಲೋಜಾನಿ ಮಾತನಾಡಿ, ಇಲ್ಲಿನ ಜನರ ಹೊರ ಪ್ರಪಂಚ ತುಂಬಾ ಅಶಾಂತವಾಗಿದ್ದು, ಪ್ರತಿ ಕೆಲವು ಗಂಟೆಗೊಮ್ಮೆ ಸಂಭವಿಸುವ ಬಾಂಬ್ ಸ್ಫೋಟಗಳಿಂದ ಅವರ ಮನಸ್ಸು ಹೆಚ್ಚು ಅಶಾಂತವಾಗುತ್ತದೆ. ಇಲ್ಲಿನ ಜನರು ಶಾಂತಿಗಾಗಿ ವ್ಯಾಕುಲರಾಗಿದ್ದಾರೆ. ಯೋಗಾಭ್ಯಾಸದಿಂದ ಮಾತ್ರ ಅವರ ಮನಸ್ಸಿಗೆ ಶಾಂತಿ ಸಿಗುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದೆಡೆ ಪಾಶ್ಚಿಮಾತ್ಯ ಜಗತ್ತು ಹಿಂದೂ ಧರ್ಮದ ಅದ್ವಿತಿಯ ಬೋಧನೆಗಳಿಗೆ ತಲೆಬಾಗಿ ಅದನ್ನು ಅಳವಡಿಸಿಕೊಂಡು ತಮ್ಮ ಜೀವನದಲ್ಲಿ ಶಾಂತಿ ಮತ್ತು ಆನಂದವನ್ನು ಅನುಭವಿಸುತ್ತಾರೆ, ಇನ್ನೊಂದೆಡೆ ಭಾರತದ ಹಿಂದೂಗಳು ಅದಕ್ಕೆ ಬೆನ್ನು ತಿರುಗಿಸಿ ಪ್ರಗತಿಪರರ ಸೋಗಿನಲ್ಲಿ ತಿರುಗುತ್ತಾರೆ !

ಸನಾತನ ಧರ್ಮವನ್ನು ನಾಶಪಡಿಸುವ ಬಗ್ಗೆ ಮಾತನಾಡುವ ನತದೃಷ್ಟ ರಾಜಕೀಯ ನಾಯಕರು ಇದರ ಬಗ್ಗೆ ಏನು ಹೇಳುತ್ತಾರೆ ?