‘ನಾವು ಕಾಶ್ಮೀರದ ಸೂತ್ರವನ್ನು ಜಗತ್ತಿನ ಪ್ರತಿಯೊಂದು ವೇದಿಕೆಯ ಮೇಲೆ ಮಂಡಿಸುತ್ತಲೇ ಇರುತ್ತಾರಂತೆ ! – ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಅಲ್ ಕಾಕಡ

ವಿಷಕಕ್ಕಿದ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಅಲ್ ಕಾಕಡ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ಜಗತ್ತಿನ ಪ್ರತಿಯೊಂದು ವೇದಿಕೆಯಲ್ಲಿ ಕಾಶ್ಮೀರದ ಸೂತ್ರವನ್ನು ಎತ್ತುತ್ತಲೇ ಇರಲಿದೆ; ಏಕೆಂದರೆ ಇದು ವಿಶ್ವಸಂಸ್ಥೆಯ ಮೇಜಿನ ಮೇಲಿರುವ ಅತ್ಯಂತ ಹಳೆಯ ಮತ್ತು ಇನ್ನೂ ಬಗೆಹರಿಯದ ಸೂತ್ರವಾಗಿದೆ ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕಡ್ ಅವರು ‘ವಾಯ್ಸ್ ಆಫ್ ಅಮೇರಿಕಾ’ ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಅವರು ಈ ಸಂದರ್ಶನ ನೀಡುತ್ತಿದ್ದರು.

ಪ್ರಧಾನಿ ಕಾಕಡ್ ಇವರು, ಭಾರತವು ಕಾಶ್ಮೀರವನ್ನು ವಿಶ್ವದಲ್ಲೇ ಅತಿ ದೊಡ್ಡ ಕಾರಾಗೃಹವನ್ನಾಗಿ ಮಾಡಿದೆ. ಕಾಶ್ಮೀರಿಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. (ಕಾಶ್ಮೀರದ ಪರಿಸ್ಥಿತಿ ಏನಾಗಿದೆ ಎಂಬುದು ಜಗತ್ತಿಗೆ ಗೊತ್ತಿದೆ. ಪಾಕಿಸ್ತಾನ ಎಷ್ಟೇ ಸುಳ್ಳು ಆರೋಪ ಹೊರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗುವುದಿಲ್ಲ ! – ಸಂಪಾದಕರು) ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ದೇಶದ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ಕಾಕಡ್ ಅವರು, ಅಫ್ಘಾನಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಇದ್ದರೂ ಸಾರ್ವತ್ರಿಕ ಚುನಾವಣೆ ವಿಳಂಬವಾಗುವುದಿಲ್ಲ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನವು ಇದುವರೆಗೆ ಎಲ್ಲೆಲ್ಲಿ ಕಾಶ್ಮೀರದ ಸೂತ್ರ ಮಂಡಿಸಿದೆಯೋ ಅಲ್ಲಲ್ಲಿ ಭಾರತ ಕಿವಿ ಹಿಂಡಿದೆ ಮತ್ತು ಅದರ ನೈಜ ಸ್ವರೂಪವನ್ನು ಬಹಿರಂಗಪಡಿಸಿದೆ. ಆದರೆ ಪಾಕಿಸ್ತಾನ ನಾಚಿಕೆಯಿಲ್ಲದೆ ಈ ಸೂತ್ರವನ್ನು ಮುಂದಿಟ್ಟುಕೊಂಡು ತಾವೇ ಮುಜುಗರಕ್ಕೀಡಾಗುತ್ತಿದೆ !

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಜಗತ್ತಿಗೇ ಗೊತ್ತಿದ್ದರಿಂದ 2-3 ದೇಶಗಳ ಹೊರತಾಗಿ ಯಾರೂ ಪಾಕಿಸ್ತಾನದ ಈ ಸೂತ್ರಕ್ಕೆ ಸೊಪ್ಪು ಹಾಕುತ್ತಿಲ್ಲ !