ಮಿತಿಗಿಂತ ಅಧಿಕ ವಿದ್ಯಾರ್ಥಿಗಳು ಕುಳಿತಿದ್ದರಿಂದ ಅಪಘಾತ !
ಮುಜಫ್ಫರಪುರ (ಬಿಹಾರ) – ನಗರದ ಬಾಗಮತಿ ನದಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ತುಂಬಿದ ದೋಣಿಯೊಂದು ಮಗುಚಿದ ಅಪಘಾತ ನಡೆದಿದೆ. ಈ ದೋಣಿಯಲ್ಲಿ 34 ವಿದ್ಯಾರ್ಥಿಗಳಿದ್ದರು. ಈ ಪೈಕಿ 18 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ರಕ್ಷಿಸಲು ಸರಕಾರಿ ವ್ಯವಸ್ಥೆ ತಲುಪಲು ಒಂದು ಗಂಟೆ ತಡವಾಯಿತು. (ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಇಂತಹ ಪರಿಸ್ಥಿತಿ ಮರುಕಳಿಸದಂತೆ ಆಡಳಿತ ನಿಯೋಜನೆ ಮಾಡಬೇಕು ! – ಸಂಪಾದಕರು) ಆದ್ದರಿಂದ ಇಲ್ಲಿನ ನಾಗರಿಕರು ತೀವ್ರ ಆಕ್ರೋಶಗೊಂಡಿದ್ದರು. ಸದ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದೋಣಿಯಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹತ್ತಿಸಿದ್ದರಿಂದ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ.
Boat With 33 Students Going To School Capsizes In Bihar’s Muzaffarpur, 16 Students Missinghttps://t.co/WS8ss7eMF3 pic.twitter.com/1ShSxJkGxC
— TIMES NOW (@TimesNow) September 14, 2023
ಸಂಪಾದಕೀಯ ನಿಲುವುದೋಣಿಯಲ್ಲಿ ಎಷ್ಟು ಜನರು ಕುಳಿತುಕೊಳ್ಳಬೇಕು ? ಮತ್ತು ಪ್ರತ್ಯಕ್ಷದಲ್ಲಿ ಎಷ್ಟು ಜನರನ್ನು ಹತ್ತಿಸಿಕೊಳ್ಳಲಾಗುತ್ತಿದೆ ? ಎನ್ನುವ ಕಡೆಗೆ ಗಮನವಿಡುವ ಬಗ್ಗೆ ಯಾವುದೇ ನಿಗಾ ವ್ಯವಸ್ಥೆ ಇಲ್ಲವೇ ? ಇಂದು ಇಂತಹ ಘಟನೆ ನಡೆದಿದ್ದರೆ, ಮುಂದೆಯೂ ಇಂತಹುದೇ ಘಟನೆ ನಡೆಯಬಹುದು ಎನ್ನುವ ಸಾಮಾನ್ಯ ವಿಚಾರವನ್ನೂ ಆಡಳಿತ ಮಾಡುವುದಿಲ್ಲವೇ ? |