ಎಲ್ಲಿಯವರೆಗೆ ಸಮಾಜದಲ್ಲಿ ಭೇದಭಾವ ಇರುವುದೋ, ಅಲ್ಲಿಯವರೆಗೂ ಮೀಸಲಾತಿ ಇರಬೇಕು ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ನಾಗಪುರ – ಇಂದಿಗೂ ಸಮಾಜದಲ್ಲಿ ಭೇದಭಾವ ಪಾಲನೆಯಾಗುತ್ತಿದೆ. ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ. ಉದ್ಯೋಗಗಳಲ್ಲಿ ಕದ್ದು ಮುಚ್ಚಿ ಜಾತೀಯತೆ ಮಾಡಲಾಗುತ್ತದೆ. ಇದು ಸಾಮಾಜಿಕ ವಾಸ್ತವವಾಗಿದೆ. ಎಲ್ಲಿಯವರೆಗೆ ಸಮಾಜದಲ್ಲಿ ಭೇದಭಾವ ಇರುವುದೋ, ಅಲ್ಲಿಯವರೆಗೆ ಮೀಸಲಾತಿ ಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದರು. ಸೆಪ್ಟೆಂಬರ 6 ರಂದು ರವಿನಗರದ ಶ್ರೀ ಅಗ್ರಸೇನ್ ಹಾಸ್ಟೆಲನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವಾಗ ಹೇಳಿದ್ದರು.

ಅವರು ಮಾತು ಮುಂದುವರಿಸಿ, ನಮ್ಮ ದೇಶದಲ್ಲಿ ಸಾಮಾಜಿಕ ಅಸಮಾನತೆಯ ಇತಿಹಾಸವಿದೆ. ಒಂದು ಸಮಾಜವನ್ನು ಪ್ರಾಣಿಯಂತೆ ನಡೆಸಿಕೊಳ್ಳಲಾಯಿತು. ಇಕ್ಕಟ್ಟಿನ ಪರಿಸ್ಥಿತಿಯಿತ್ತು, ಅದು 2 ಸಾವಿರ ವರ್ಷಗಳ ವರೆಗೆ ನಡೆಯಿತು. ಅವರನ್ನು ನಮ್ಮೊಂದಿಗೆ ಕರೆತರಲು ಕ್ರಮಕೈಗೊಳ್ಳಬೇಕು. ಅದರಲ್ಲಿಯ ಒಂದು ಉಪಾಯವೆಂದರೆ ‘ಮೀಸಲಾತಿ’ ಆಗಿದೆ. ‘ಮೀಸಲಾತಿ’ಯು ಎನ್ನುವುದು. ಕೇವಲ ಆರ್ಥಿಕ ಮತ್ತು ರಾಜಕೀಯ ಸಮಾನತೆಗೆ ಸೀಮಿತವಾಗಿಲ್ಲ ಅದು ಸಾಮಾಜಿಕ ಸಮಾನತೆ ಮತ್ತು ಗೌರವಕ್ಕಾಗಿ ಇದೆ. ಆದ್ದರಿಂದ ಸಂವಿಧಾನ ಸಮ್ಮತವಾಗಿರುವ ಮೀಸಲಾತಿಯನ್ನು ಸಂಘವು ಯಾವಾಗಲೂ ಬೆಂಬಲಿಸಿದೆ ಎಂದು ಹೇಳಿದರು.