ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ – ಗೃಹ ಸಚಿವ ಜಿ. ಪರಮೇಶ್ವರ್

ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಇವರ ವಿವಾದಾತ್ಮಕ ಹೇಳಿಕೆ !

ತುಮಕೂರು – ಜಗತ್ತಿನಲ್ಲಿ ಅನೇಕ ಧರ್ಮಗಳು ಹುಟ್ಟಿವೆ; ಆದರೆ ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಇವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 5 ರಂದು ಇಲ್ಲಿನ ಕೊರಟಗೆರೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪರಮೇಶ್ವರ್ ಅವರು ಮಾತನಾಡಿ, ಬೌದ್ಧ, ಜೈನ ಧರ್ಮಗಳು ಹುಟ್ಟಿದ್ದು ನಮ್ಮ ದೇಶದಲ್ಲಿ. ಹೊರಗಿನಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಬಂದವು. ಮನುಕುಲಕ್ಕೆ ಒಳ್ಳೆಯದಾಗಬೇಕೆಂಬುದೇ ಎಲ್ಲಾ ಧರ್ಮಗಳ ಸಾರಾಂಶ ಎಂದು ಪರಮೇಶ್ವರ್ ಹೇಳಿದ್ದಾರೆ. (ಮೋಸ ಮಾಡಿ ಮತಾಂತರ ಮಾಡುವ ಮತ್ತು ಕತ್ತಿಯಿಂದ ಧರ್ಮವನ್ನು ಪ್ರಸಾರ ಮಾಡುವವರು, ಮೂರ್ತಿ ಪೂಜಕರ ದೇವಾಲಯಗಳನ್ನು ಕೆಡವುವುದು ಇತ್ಯಾದಿ ದೌರ್ಜನ್ಯಗಳು ಮಾಡುವ ಧರ್ಮದಲ್ಲಿ ಯಾರು ಇದ್ದಾರೆ ಇದು ಜಗತ್ತು ಎದುರಿಸುತ್ತಿರುವ ಪ್ರಶ್ನೆ ಯಾಗಿದೆ ! – ಸಂಪಾದಕರು)