‘ಭಾರತದಲ್ಲಿ ಮುಸಲ್ಮಾನರು ಇರುವುದರಿಂದಲೇ ನೀವು ಹಿಂದೂಗಳಾಗಿದ್ದೀರಿ ! (ಅಂತೆ) – ನಟ ಕಿರಣ ಮಾನೆ

ನಟ ಕಿರಣ ಮಾನೆ ಇವರು ಹಿಂದುಗಳನ್ನುದ್ದೇಶಿಸಿ ಹೇಳಿಕೆ

ಮುಂಬಯಿ – ನಟ ಕಿರಣ ಮಾನೆ ಇವರು ‘ಹಾಲಿವುಡ್’ನ (ಇಂಗ್ಲಿಷ್ ಚಲನಚಿತ್ರ ನಿರ್ಮಾಣ) ‘ದ ಡಾರ್ಕ್ ನೈಟ್’ ಈ ಚಲನಚಿತ್ರದಲ್ಲಿ ‘ಜೋಕರ್’ ಹೆಸರಿನ ಖಲನಾಯಕನ ಮತ್ತು ಹಾಲಿವುಡ್ ನಲ್ಲಿಯ ನಾಯಕ ಬ್ಯಾಟ್ಮ್ಯಾನ್ ಇವರ ಸಂಭಾಷಣೆಯಲ್ಲಿ ಈ ಮರಾಠಿ ವಾಕ್ಯ ಸೇರಿಸಿ ಅದನ್ನು ಸ್ವತಃ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ. ಮಾನೆ ಇವರು ಪ್ರಸಾರ ಮಾಡಿರುವ ವಾಕ್ಯದಲ್ಲಿ ‘ಜೋಕರ್’ಗೆ ‘ಬ್ಯಾಟಮನ್’ನು, ‘ಮತ್ತೊಮ್ಮೆ ಹೇಳುತ್ತೇನೆ, ತಿಳಿದುಕೋ ಭಾರತದಲ್ಲಿ ಮುಸಲ್ಮಾನರಿದ್ದಾರೆ; ಆದ್ದರಿಂದ ನೀವು ಹಿಂದೂಗಳು ಇದ್ದೀರಿ. ನಂತರ ನೀವು ಕಿಳ ಅಥವಾ ಮೇಲ ಜಾತಿಯವರಾಗುವಿರಿ.’ ಎಂದು ಹೇಳುತ್ತಾನೆ. ಈ ವಾಕ್ಯದಿಂದ ಭಾರತದಲ್ಲಿನ ಹಿಂದುಗಳ ಅಸ್ತಿತ್ವ ಮುಸಲ್ಮಾನರ ಮೇಲೆ ಅವಲಂಬಿತವಾಗಿದೆ ಎಂದು ಮಾನೆ ಇವರು ತೋರಿಸಿದ್ದಾರೆ. (ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತ ಮುಸಲ್ಮಾನರಿಗೆ ಆಶ್ರಯ ನೀಡಿದ್ದಾರೆ. ಸ್ವಂತಕಿಂತಲೂ ಹೆಚ್ಚಿನ ಸೌಲಭ್ಯ ನೀಡಿದ್ದಾರೆ. ಒಂದು ಕಡೆಗೆ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ದಾರುಣವಾಗಿದೆ ಹಾಗೂ ಇನ್ನೊಂದು ಕಡೆ ಭಾರತದಲ್ಲಿನ ಮತಾಂಧ ಮುಸಲ್ಮಾನರು ಉದ್ಧಟರಾಗಿದ್ದಾರೆ. ಇದನ್ನು ನಟ ನಿರ್ಲಕ್ಷ್ಯ ಮಾಡುತ್ತಿದ್ದಾರೆ ! – ಸಂಪಾದಕರು)

ಸಂಪಾದಕೀಯ ನಿಲಿವು

ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿರುವ ಹಿಂದವಿ ಸ್ವರಾಜ್ಯದ ಅಭಿಮಾನ ಇಲ್ಲದೆ ಇರುವವರು ಈ ರೀತಿಯ ಧರ್ಮಾಭಿಮಾನ ಇಲ್ಲದವರೇ ಹೇಳಿಕೆ ನೀಡುತ್ತಾರೆ !