ಭಾರತದ ಮೊದಲ ಸೂರ್ಯಯಾನ ಅಭಿಯಾನ !4 ತಿಂಗಳ ನಂತರ, ಇದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರವನ್ನು ತಲುಪಿ, ಸೂರ್ಯನ ಪರೀಕ್ಷಣೆ ನಡೆಸಲಿದೆ. |
ಬೆಂಗಳೂರು – ಭಾರತದ ಮೊದಲ ಸೂರ್ಯ ಯೋಜನೆಯ ಅಡಿಯಲ್ಲಿ ಸೂರ್ಯನ ಪರೀಕ್ಷಣೆ ನಡೆಸಲು ಹೋಗಲಿರುವ ‘ಆದಿತ್ಯ ಎಲ್ 1’ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11:50 ಕ್ಕೆ ಉಡಾವಣೆ ಮಾಡಲಾಗುವುದು. ‘ಪಿ.ಎಸ್.ಎಲ್.ವಿ. – ಸಿ57’ ಈ ರಾಕೆಟ್ ಮೂಲಕ ಅದನ್ನು ಉಡಾವಣೆ ಮಾಡಲಾಗುವುದು. ‘ಆದಿತ್ಯ-ಎಲ್1’ ಉಪಗ್ರಹವು 4 ತಿಂಗಳ ನಂತರ ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ‘ಲ್ಯಾಂಗ್ರೆಸ್ 1’ ಈ ಸ್ಥಳವನ್ನು ತಲುಪಲಿದೆ. ಈ ಸ್ಥಳದಲ್ಲಿ ಸ್ಥಿರವಾಗಿ ಉಳಿದು ಸೂರ್ಯನ ಹೊರ ಪದರವನ್ನು (ಕರೋನಾ) ಪರಿಕ್ಷಣೆ ನಡೆಸಲಿದೆ. ಈ ಸ್ಥಳದಿಂದ ಸೂರ್ಯನು ಇನ್ನೂ 14 ಕೋಟಿ 85 ಲಕ್ಷ ಕಿಲೋಮೀಟರ್ ದೂರದಲ್ಲಿದ್ದಾನೆ. ‘ಆದಿತ್ಯ ಎಲ್1’ ಯಾನವು ತನ್ನೊಂದಿಗೆ 7 ಉಪಕರಣಗಳನ್ನು ಹೊತ್ತೊಯ್ಯಲಿದೆ.
1. ‘ಲ್ಯಾಂಗ್ರೆಸ್ 1’ ಸ್ಥಳದಲ್ಲಿ, ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಬಲ ಪರಸ್ಪರರ ಕಡೆಗೆ ಆಕರ್ಷಣೆ ನಿರ್ಮಾಣವಾಗುತ್ತದೆ. ನಾಸಾದ ಅಭಿಪ್ರಾಯದಂತೆ, ಈ ಸ್ಥಳದಲ್ಲಿ ಬಾಹ್ಯಾಕಾಶ ಯಾನವನ್ನು ಸ್ಥಿರವಾಗಿಡಲು ಕಡಿಮೆ ಇಂಧನ ಬೇಕಾಗುತ್ತದೆ.
2. ಸೂರ್ಯನ ಸ್ವಂತ ತಾಪಮಾನ 6 ಸಾವಿರ ಡಿಗ್ರಿ ಸೆಂಟಿಗ್ರೇಡ ಸೆಲ್ಸಿಯಸ್ ಗಿಂತ ಅಧಿಕವಿರುವಾಗ ಅದರ ಕೊರೊನಾ ತಾಪಮಾನ 10 ಲಕ್ಷ ಡಿಗ್ರಿ ಸೆಂಟಿಗ್ರೇಡ್ ವರೆಗೆ ಹೇಗೆ ತಲುಪುತ್ತದೆ ? ಎಂಬುದನ್ನು ಈ ಯಾನ ಅಧ್ಯಯನ ನಡೆಸಲಿದೆ.
(ಸೌಜನ್ಯ : Tv9 Kannada)