ಬರೇಲಿ (ಉತ್ತರಪ್ರದೇಶ) – ಇಲ್ಲಿಯ ಆಮಲಾದಲ್ಲಿರುವ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಗೆ ರಕ್ಷಾಬಂಧನ ಆಚರಿಸದಂತೆ ತಡೆಯಲಾಯಿತು. ರಕ್ಷಾಬಂಧನದ ನಿಮಿತ್ತ ಮಕ್ಕಳು ಪರಸ್ಪರ ರಾಖಿ ಕಟ್ಟುತ್ತಿದ್ದರು. ಶಾಲೆಯ ವ್ಯವಸ್ಥಾಪಕರು ಹಸ್ತಕ್ಷೇಪಮಾಡಿ ಎಲ್ಲಾ ಮಕ್ಕಳಿಗೆ ಈ ರೀತಿ ಮಾಡದಂತೆ ತಡೆದರು. ಹಾಗೂ ಕೈಗೆ ಕಟ್ಟಿದ ರಾಖಿಯನ್ನು ತೆಗೆಯುವಂತೆ ಮಾಡಿದರು. ಈ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಕೋಡಲೇ ಶಾಲೆಗೆ ತೆರಳಿ ವ್ಯವಸ್ಥಾಪಕರ ವಿರುದ್ದ ಪ್ರತಿಭಟಿಸಿದರು. ಆನಂತರ ವ್ಯವಸ್ಥಾಪಕರು ಪೋಷಕರಲ್ಲಿ ಕ್ಷಮೆ ಕೇಳಿದರು.
ರಾಖಿ, ಮೆಹಂದಿ, ತಿಲಕದೂಂದಿಗೆ ಶಾಲೆಗೆ ಬರುವ ಮಕ್ಕಳಿಗೆ ಶಿಕ್ಷಿಸುವಂತಿಲ್ಲ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ರಾಖಿ ಕಟ್ಟಿಕೊಂಡು, ಮೆಹಂದಿ ಅಥವ ತಿಲಕಹಚ್ಚಿಕೊಂಡು, ಬಣ್ಣದ ದಾರ ಹಾಕಿಕೊಂಡು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗುವುದು ಸಾಮಾನ್ಯವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆಯ ಆಡಳಿತದಿಂದ ವಿದ್ಯಾರ್ಥಿಗಳನ್ನು ಶಿಕ್ಷಿಸಲಾಗುತ್ತದೆ. ’ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೊಗ” ಇದನ್ನು ಗಮನಿಸಿದೆ. ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೊ ಇವರು ಮಾತನಾಡಿ, ‘ಶಿಕ್ಷಣ ಹಕ್ಕು ಕಾಯ್ದೆ ೨೦೦೯ರ ಕಲಂನ ೧೭ರ ಅಡಿಯಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷೇಧಿಸಲಾಗಿದೆ. ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೊ ಇತರ ಸಿಬ್ಬಂದಿ ವರ್ಗದಿಂದ ಕಿರುಕುಳ ಹಾಗೂ ಭೇದಭಾವ ಮಾಡಲಾಗುತ್ತದೆ. ಹಬ್ಬಗಳ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ರಾಖಿ, ಮೆಹಂದಿ, ಟಿಕಲಿ ಹಚ್ಚುವ ಅವಕಾಶವಿಲ್ಲ. ಈ ಅವಧಿಯಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ ಎಂದು ಕಾನೊನಗೊ ಹೇಳಿದರು.
‘Hinduism shall not be preached here’: Holy Family Convent School in Bareilly cuts Rakhis tied on wrists of Hindu students, apologises laterhttps://t.co/nEVt2Knbc8
— OpIndia.com (@OpIndia_com) August 31, 2023
ಸಂಪಾದಕರ ನಿಲುವು* ಕಾನ್ವೆಂಟ್ ಶಾಲೆಯ ಹಿಂದೂ ದ್ವೇಷ ತಿಳಿಯಿರಿ ! ಸರಕಾರವು ಇಂತಹ ಶಾಲೆಗಳಿಗೆ ಅನುಮತಿ ರದ್ದು ಮಾಡಬೇಕು, ಆಗ ಮಾತ್ರ ಮುಂದೆ ಯಾವುದೇ ಶಾಲೆ ಹೀಗೆ ಮಾಡಲು ಧೈರ್ಯ ಮಾಡುವುದಿಲ್ಲ ! |