ದೆಹಲಿಯಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ !
ನವ ದೆಹಲಿ – ದೆಹಲಿಯ ಪ್ರಸಿದ್ಧ ಕಾಲೇಜೊಂದರಲ್ಲಿ ಓದುತ್ತಿದ್ದ ಹಿಂದೂ ವಿದ್ಯಾರ್ಥಿನಿಯೊಬ್ಬಳು ಮಾಜಿ ಸಂಸದ ಶಾಹಿದ್ ಅಖಲಾಕ್ ನ ಪುತ್ರ ದಾನಿಶ್ ಅಖಲಾಕ್ ನು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪರತಾಪುರ ಪೊಲೀಸರು ದಾನಿಶ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
Uttar Pradesh: Former BSP MP Shahid Akhlaq’s son Danish Akhlaq arrested in connection with the rape of a Delhi girlhttps://t.co/XI0X06JQBv
— OpIndia.com (@OpIndia_com) August 26, 2023
ಸಂತ್ರಸ್ತ ಹಿಂದೂ ವಿದ್ಯಾರ್ಥಿನಿಯು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಆಗಸ್ಟ್ 18 ರಂದು ದಾನಿಶ್ ಅಖಲಾಕ್ ತಾನು ಅವಿವಾಹಿತನಾಗಿದ್ದೇನೆ ಎಂದು ಹೇಳಿ ಅವಳೊಂದಿಗೆ ‘ಇನ್ಸ್ಟಾಗ್ರಾಮ್’ ಮೂಲಕ ಸ್ನೇಹ ಬೆಳೆಸಿದ್ದನು. ತದನಂತರ ಆಗಸ್ಟ್ 22 ರಂದು ಆಕೆಯನ್ನು ಹೌಜ್ ಖಾಸ್ ನಲ್ಲಿರುವ ರೆಸ್ಟೋರೆಂಟ್ ಗೆ ಕರೆದನು. ಅಲ್ಲಿ ಅವನು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಲವಂತವಾಗಿ ಅಶ್ಲೀಲ ವಿಡಿಯೋ ತಯಾರಿಸಿ, ಅದನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಆರೋಪಿಯ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಸಂತ್ರಸ್ತ ವಿದ್ಯಾರ್ಥಿನಿ ಮನೆ ತಲುಪಿದಳು. ಮರುದಿನ ಪರತಾಪುರ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ದೂರು ದಾಖಲಿಸಿದಳು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಮಹಿಳೆಯರ ಪಾಲಿಗೆ ಬಿಕ್ಕಟ್ಟಾಗಿ ಪರಿಣಮಿಸಿರುವ ಲವ್ ಜಿಹಾದ್ ತಡೆಯಲು ಪೋಲೀಸರೂ, ಆಡಳಿತವೂ ಯಾರೂ ಏನೂ ಮಾಡುತ್ತಿಲ್ಲ, ಹಾಗೆಯೇ ಜನಪ್ರತಿನಿಧಿಗಳೂ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ, ಇದು ಖೇದಕರ ಸಂಗತಿಯಾಗಿದೆ ! ಈ ಚಿತ್ರಣವನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು ! |